ಹಾವಿಗೆ ಭಯ ಬೀಳಿಸಿದ ಮಂಗಣ್ಣ!

ಸಾಮಾಜಿಕ ಜಾಲತಾಣದಲ್ಲಿ ದಿನೇ ದಿನೇ ಹಲವಾರು ಮೋಜು ಮಸ್ತಿನ ವಿಡಿಯೋಗಳು ವೈರಲ್ ಆಗ್ತಾನೆ ಇರುತ್ತೆ.ಅದ್ರಲ್ಲೂ ಪ್ರಾಣಿಗಳ ವಿಡಿಯೋ ಅಂದ್ರೆ ನೋಡೋಕೆ ಗಮ್ಮತ್ ಆಗಿಯೇ ಇರುತ್ತೆ. ಸಣ್ಣ ಮಕ್ಕಳಿಗೆ ಊಟ ಮಾಡಿಸುತ್ತಾ ತಾಯಂದಿರು ತೋರಿಸುತ್ತಾರೆ. ಇದೀಗ ಪ್ರಾಣಿಗಳಿಗೆ ಸಂಬಂಧ ಪಟ್ಟ ವಿಡಿಯೋ ವೈರಲ್ ಆಗಿದೆ.

 

https://www.instagram.com/reel/ClhwAJXg8-6/?igshid=ZmVmZTY5ZGE=

ಹಾವನ್ನು ಕಂಡರೆ ಸಾಮಾನ್ಯವಾಗಿ ಪ್ರಾಣಿಗಳಿಗೆ ಭಯ ಇರುತ್ತೆ. ಎಲ್ಲಿ ಕಚ್ಚಿ ಸಾಯುತ್ತೇವೆಯೋ ಅಂತ ಹಾವಿನಿಂದ ಪಾರಾಗಲು ನೋಡುತ್ತವೆ ಪ್ರಾಣಿಗಳು. ಆದರೆ ಇಲ್ಲೊಂದು ಮಂಗ ಏನು ಮಾಡಿದೆ ನೋಡಿ.

ಬಿದ್ದು ಬಿದ್ದು ನಗುವ ಹಾಗೆ ಇದೆ ಈ ವಿಡಿಯೋ. ಯಾಕೆಂದ್ರೆ ಸುಮ್ನೆ ಇದ್ದ ಹಾವಿನ ಬಾಲವನ್ನು ಮಂಗ ಹೇಗೆ ಎಳೆದು ಆಟ ಆಡಿಸ್ತಾ ಇದೆ ನೋಡಿ. ಮಂಗನ ಪುಣ್ಯಕ್ಕೆ ಹಾವು ಕಚ್ಚಿಲ್ಲ. ಆದ್ರೂ ಕೂಡ ಆ ಮಂಗನಿಗೆ ಎಷ್ಟು ಭಂಡ ಧೈರ್ಯ ನೋಡಿ. ಅದ್ರಲ್ಲೂ ಹೆಡೆ ಎತ್ತಿದ್ದ ಹಾವಿನ ಬಾಲವನ್ನು ಎಳೆಯುವ ಸಾಹಸ ಮಾಡಿದೆ ಈ ಮಂಗ ಅಂದ್ರೆ ಮೆಚ್ಚಲೇ ಬೇಕು ಅಲ್ವಾ?

ಇನ್ನೂ ಈ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರ್ತಾನೆ ಇರುತ್ತವೆ. ನೋಡಿ ಎಂಜಾಯ್ ಮಾಡಬಹುದು.

Leave A Reply

Your email address will not be published.