Low Price Earbuds: ಅತ್ಯಂತ ಗುಣಮಟ್ಟದ 1000 ರೂಪಾಯಿಯ ಕಡಿಮೆ ಬೆಲೆಯ ಉತ್ತಮ ಇಯರ್​​ಬಡ್ಸ್​​ಗಳ ಕಂಪ್ಲೀಟ್‌ ಲಿಸ್ಟ್‌ ನಿಮಗಾಗಿ

ಇತ್ತೀಚೆಗೆ ಜನರು ಹೆಚ್ಚಾಗಿ ಇಯರ್‌ಬಡ್‌ಗಳನ್ನೇ ಬಳಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಇದರ ಬೆಲೆ ಅಧಿಕವಿದ್ದು ಹಲವು ಜನರು ಇಯರ್ ಬಡ್ಸ್ ಖರೀದಿಸಲು ಕಷ್ಟಪಡುತ್ತಾರೆ. ಆದರೆ ರೂ. 1000 ಕ್ಕಿಂತ ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಇಯರ್​​ಬಡ್ಸ್​ಗಳು ಇವೆ. ಈ ಇಯರ್‌ಬಡ್ಸ್​​ಗಳು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಹಾಗೂ ಇದರ ನೋಟ ಮತ್ತು ವಿನ್ಯಾಸವೂ ಅದ್ಭುತವಾಗಿದ್ದು, ಕಡಿಮೆ ತೂಕ ಹೊಂದಿದೆ. ಈ ಇಯರ್‌ಬಡ್ಸ್​​ಗಳು ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಕೂಡ ಹೊಂದಿದೆ. ಇನ್ನೂ ಈ ಇಯರ್‌ಬಡ್ಸ್​​ಗಳು ಯಾವುದೆಂಬ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ.

Zebronics Zeb-Sound Bomb 3 TWS ಇಯರ್ಇಯರ್‌ಬಡ್ಸ್. ಇದು 5.2 ಬ್ಲೂಟೂತ್ ಬೆಂಬಲದೊಂದಿಗೆ ಸ್ಟಿರಿಯೊ ಸೌಂಡ್ ಅನ್ನು ಬೆಂಬಲಿಸುತ್ತದೆ. ಇದನ್ನು ಅಂತರ್ನಿರ್ಮಿತ ಮೈಕ್‌ನೊಂದಿಗೆ ಪಡೆಯಬಹುದು. ಹ್ಯಾಂಡ್ಸ್ ಫ್ರೀ ಕರೆ ಮತ್ತು ಧ್ವನಿ ಸಹಾಯಕವನ್ನು ಕೂಡ ಪಡೆಯಬಹುದಾಗಿದೆ.

ಇನ್ನೂ ಟ್ರೂಕ್ ಬಡ್ಸ್ ಎಫ್ 1 ಟ್ರೂ ವೈರ್‌ಲೆಸ್ ಇಯರ್‌ಬಡ್ಸ್. ಈ ಇಯರ್‌ಬಡ್‌ಗಳು ತ್ವರಿತ ಜೋಡಣೆಯೊಂದಿಗೆ ಇರುವುದಾಗಿದೆ. ಹಾಗೂ 48 ಗಂಟೆಗಳ ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್‌ ಅನ್ನು ಹೊಂದಿದೆ. ಉತ್ತಮ ಫೀಚರ್ಸ್ ನೊಂದಿಗೆ ಉತ್ತಮ ಇಯರ್‌ಬಡ್ಸ್ ಆಗಿದ್ದು, ಗ್ರಾಹಕರನ್ನು ಆಕರ್ಷಿಸುತ್ತದೆ.

pTron Bassbuds Eon ಇಯರ್ ಇಯರ್‌ಬಡ್ಸ್‌. ಇದು ನೋಟ ಮತ್ತು ವಿನ್ಯಾಸಗಳಲ್ಲಿ ಅತ್ಯುತ್ತಮ ಇಯರ್‌ಬಡ್ಸ್​​ ಆಗಿದೆ. ಹಾಗೂ ಇದು ವೈರ್‌ಲೆಸ್ ನೆಟ್​ವರ್ಕ್​​ ಸಂಪರ್ಕವನ್ನು ಹೊಂದಿದೆ. ವೇಗದ ಚಾರ್ಜಿಂಗ್‌ನಂತಹ ಹಲವು ಉತ್ತಮ ವೈಶಿಷ್ಟ್ಯಗಳನ್ನು ಈ ಇಯರ್​​ಬಡ್ಸ್​ ಹೊಂದಿದ್ದು, ಒಂದು ಬಾರಿ ಪೂರ್ತಿಯಾಗಿ ಈ ಇಯರ್​​ಬಡ್ಸ್​ ಅನ್ನು ಚಾರ್ಜ್ ಮಾಡಿದ್ರೆ ಸಾಕು 30 ಗಂಟೆಗಳ ಕಾಲ ಬಳಸಬಹುದಾಗಿದೆ. ಇನ್ನೂ ಈ ಇಯರ್​ಬಡ್ಸ್​ನ ಬೆಲೆ ಕೇವಲ 899 ರೂಪಾಯಿ ಆಗಿದೆ.

WeCool Moonwalk M1 ENC ಇಯರ್‌ಬಡ್ಸ್. ಈ ಇಯರ್ಬಡ್ಸ್ ನಲ್ಲಿ ನೀವು ಸ್ಪಷ್ಟ ಧ್ವನಿ ಮತ್ತು ಸುಲಭವಾಗಿ ಹ್ಯಾಂಡ್ಸ್ ಫ್ರೀ ಕರೆ ಮಾಡಬಹುದಾಗಿದೆ. ಹಾಗೂ ಸರೌಂಡ್ ಸೌಂಡ್ ಎಫೆಕ್ಟ್ ಕೂಡ ಇದರಲ್ಲಿ ಇದೆ. ಈ ಇಯರ್‌ಬಡ್ಸ್ ನ ಬೆಲೆ ಕೇವಲ 899 ರೂಪಾಯಿ. ಹಾಗಾದರೆ ಇನ್ನೇಕೆ ತಡ ಇಷ್ಟು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಇಯರ್ ಬಡ್ಸ್ ಸಿಗಬೇಕಾದರೆ ಕೂಡಲೇ ಖರೀದಿಸಿ.

Leave A Reply

Your email address will not be published.