ಅಪ್ರಾಪ್ತ ಬಾಲಕಿಯ ಮೇಲೆ 13ವರ್ಷದ ವಿದ್ಯಾರ್ಥಿಗಳಿಂದ ಗ್ಯಾಂಗ್‌ ರೇಪ್‌ | ಶಾಲಾ ಕೊಠಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ ಅಪ್ರಾಪ್ತರು

ಇತ್ತೀಚೆಗೆ ಹೆಣ್ಣುಮಕ್ಕಳು ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿರಾರು ಜನ ಓಡಾಡುವ ಹಾದಿಯಲ್ಲೇ ಕೊರಿಯಾ ಯ್ಯೂಟೂಬರ್ ಮೇಲೆ ಕಿರುಕುಳ ನೀಡಿದ ಘಟನೆ ಬೆನಲ್ಲೇ ಡೆಲಿವರಿ ಬಾಯ್ ಮಹಿಳೆಗೆ ಲೆಟರ್‌ ಮೂಲಕ ಕರೆದು ಲೈಂಗಿಕ ಕಿರುಕುಳ ಘಟನೆ ವರದಿಯಾಗಿತ್ತು. ಇದೀಗ ಇನ್ನೊಂದು ಭೀಕರ ಅತ್ಯಾಚಾರ ಘಟನೆ ವರದಿಯಾಗಿದೆ. 13 ವರ್ಷದ ವಿದ್ಯಾರ್ಥಿನಿಯನ್ನು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಆಕೆಯ ತರಗತಿಯ ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಯೊಂದು ನಡೆದಿದೆ. ಈ ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರ ತಂಡ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

 

ಈ ಘಟನೆ ಮುಂಬೈನ ಮಾತುಂಗದಲ್ಲಿ ನಡೆದಿದೆ.

ಮಾತುಂಗಾದಲ್ಲಿನ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಇತ್ತ 8ನೇ ತರಗತಿ ವಿದ್ಯಾರ್ಥಿನಿ ಸುಸ್ತಾಗುತ್ತಿದೆ ಎಂದು ತರಗತಿ ಬಂದು ಕುಳಿತುಕೊಂಡಿದ್ದಾಳೆ. ತರಗತಿಯ ಇತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು. ಇದೇ ಸಮಯ ಉಪಯೋಗಿಸಿಕೊಂಡ ಇಬ್ಬರು ಸಹಪಾಠಿಗಳು, ನೇರವಾಗಿ ಶಾಲಾ ಕೊಠಡಿಗೆ ಬಂದು ತರಗತಿಯ ಬಾಗಿಲು ಮುಚ್ಚಿದ್ದಾರೆ. ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ.

ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿದ್ಯಾರ್ಥಿನಿ ಕಿರುಚಾಡುವ ಪ್ರಯತ್ನ ಮಾಡಿದ್ದಾಳೆ. ಆದರೆ ಬಾಯಿಯನ್ನು ಹಿಡಿದು, ಕೈಕಾಲು ಹಿಡಿದು ಅತ್ಯಾಚಾರ ಮಾಡಲಾಗಿದೆ. ಇತ್ತ ವಿದ್ಯಾರ್ಥಿನಿಯ ಕಿರುಚಾಟ ಶಾಲಾ ಕಾರ್ಯಕ್ರಮದ ಭರದಲ್ಲಿ ಯಾರಿಗೂ ಕೇಳಿಸಿಲ್ಲ. ಸಾಮಾಹಿಕ ಅತ್ಯಾಚಾರ ಎಸಗಿದ ವಿದ್ಯಾರ್ಥಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಮೊದಲೇ ಆರೋಗ್ಯ ಸಮಸ್ಯೆಯಲ್ಲಿದ್ದ ವಿದ್ಯಾರ್ಥಿನಿ ಮೇಲೆಳಲು ಆಗದೆ ಅಸ್ವಸ್ಥಗೊಂಡಿದ್ದಾಳೆ.

ಈ ವಿಚಾರ ಹೊರಗೆ ಹೇಳಿದರೆ ಹತ್ಯೆ ಮಾಡುವುದಾಗಿ 13 ವರ್ಷದ ವಿದ್ಯಾರ್ಥಿಗಳು ಬೆದರಿಸಿದ್ದಾರೆ. ಇದರಿಂದ ಭಯಭೀತಗೊಂಡ ವಿದ್ಯಾರ್ಥಿನಿ ಮನೆಗೆ ಹಿಂತಿರುಗಿದ್ದಾಳೆ. ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯ ಆರೋಗ್ಯ ಮರುದಿನ ಕ್ಷೀಣಿಸಿದೆ. ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ಆತಂಕಗೊಂಡ ಪೋಷಕರು ಹತ್ತಿರದ ಆಸ್ಪತ್ರೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ತಾಯಿಗೆ ನಡೆದ ಘಟನೆ ವಿವರಿಸಿದ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಇತ್ತ ಬಾಲಕಿ ತಾಯಿ ದೂರು ದಾಖಲಿಸಿದ್ದಾರೆ. ಪೊಲೀಸ ತಂಡ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ಇದೀಗ ಪ್ರಕರಣದ ತನಿಖೆ ನಡೆಯುತ್ತಿದೆ. ಇತ್ತ ಬಾಲಕಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.

Leave A Reply

Your email address will not be published.