ಕಾಮೆಂಟರಿ ಮಾಡುತ್ತಿರುವಾಗಲೇ ರಿಕಿ ಪಾಂಟಿಂಗ್ ಅಸ್ವಸ್ಥ : ಆಸ್ಪತ್ರೆಗೆ ದೌಡು!

ಪರ್ತ್: ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಖಾಸಗಿ ಮಾಧ್ಯಮದ ಕಾಮೆಂಟರಿ ಮಾಡುತ್ತಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಲೆಜೆಂಡ್ ಕ್ರಿಕೆಟರ್ ರಿಕಿ ಪಾಂಟಿಂಗ್‌ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

ಕಾಮೆಂಟರಿ ಮಾಡುತ್ತಿರುವಾಗಲೇ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ತಕ್ಷಣ ವೈದ್ಯರು ಹೆಚ್ಚಿನ ನಿಗಾ ವಹಿಸಿದ್ದಾರೆ. ಮುಂದಿನ ಎರಡು ದಿನ ಕಾಮೆಂಟರಿ ಸೆಕ್ಷನ್‍ನಲ್ಲಿ ಪಾಂಟಿಂಗ್ ಇರಲ್ಲ ಎಂದು ಖಾಸಗಿ ಮಾಧ್ಯಮ ತಿಳಿಸಿದೆ.

ವೈದ್ಯರು ಪಾಂಟಿಂಗ್ ಅವರ ಹೃದಯದ ತಪಾಸಣೆ ನಡೆಸಿದ್ದು, ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆ ಇದೆ. ರಿಕಿ ಪಾಟಿಂಗ್ ಐಪಿಎಲ್‍ನಲ್ಲಿ ಡೆಲ್ಲಿ ಕಾಪಿಟಲ್ಸ್ ತಂಡದ ಕೋಚ್ ಆಗಿದ್ದು, ಮಿನಿ ಹರಾಜಿಗೂ ಮುನ್ನ ತಂಡ ಸೇರಿಕೊಳ್ಳುವ ಸಾಧ್ಯತೆ ಇತ್ತು. ಡಿ.23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ

Leave A Reply

Your email address will not be published.