ಪುತ್ತೂರು : ತಮ್ಮನನ್ನು ಕೊಂದು ಅಣ್ಣ ಪರಾರಿ !

ಪುತ್ತೂರು, ಡಿ. 02. ಕುಡಿದ ಮತ್ತಿನಲ್ಲಿ ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ನಡೆದಿದೆ.

 

ಕೊಲೆಗೀಡಾದವರನ್ನು ಹಾವೇರಿ ಜಿಲ್ಲೆಯ ಹೊಸೂರು ಮಾದೇವಪ್ಪ ಎಂದು ಗುರುತಿಸಲಾಗಿದೆ. ಅಣ್ಣ ನಿಂಗನ ಗೌಡ ಕೊಲೆ ಆರೋಪಿ, ಪುತ್ತೂರಿನ ಕೆಮ್ಮಿಂಜೆಯಲ್ಲಿ ಕಾರ್ಮಿಕ ಕೆಲಸ ಮಾಡುತ್ತಿದ್ದ ಸಹೋದರರಿಬ್ಬರು ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಜಗಳ ನಡೆಸಿದ್ದು, ಈ ವೇಳೆ ನಿಂಗನ ಗೌಡನು ತಮ್ಮ ಮಾದೇವಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ.

ಇದರಿಂದ ಗಂಭೀರ ಗಾಯಗೊಂಡ ಮಾದೇವಪ್ಪ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಪುತ್ತೂರು ನಗರ ಠಾಣಾ ಅ.ಕ್ರ. 97/2022 ಕಲಂ 302 IPC ರ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಆರೋಪಿ ನಿಂಗನ ಗೌಡ ಪರಾರಿಯಾಗಿದ್ದು, ಆರೋಪಿಯ ಪತ್ತೆಗೆ ಸಹಕರಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.