Crime News: ತನ್ನ ಧರ್ಮ ಮುಚ್ಚಿಟ್ಟು ಮದುವೆಯಾದ, ನಂತರ ಹೆಂಡತಿಗೆ ಮತಾಂತರವಾಗಲು ಕಿರುಕುಳ ಕೊಟ್ಟ ಭೂಪ!
ದಿನಂಪ್ರತಿ ಲವ್ ಜಿಹಾದ್ ಪ್ರಕರಣಗಳು ತೆರೆಮರೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಮತಾಂತರ ಮಾಡುವ ಜೊತೆಗೆ ಭೀಕರವಾಗಿ ಕೊಲೆ ಮಾಡಲು ಹಿಂದು ಮುಂದು ನೋಡಲಾರರು ಎಂಬುದಕ್ಕೆ ಶ್ರದ್ಧಾ ಹತ್ಯೆ ನಿದರ್ಶನವಾಗಿದೆ.ಈ ನಡುವೆ, ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಧಾರ್ಮಿಕ ಮತಾಂತರಕ್ಕಾಗಿ (Conversion) ಪತ್ನಿಗೆ ಚಿತ್ರಹಿಂಸೆ (Harassment) ನೀಡಿದ ಪ್ರಕರಣ ಮುನ್ನಲೆಗೆ ಬಂದಿದೆ.
ಕೊಖ್ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಲಾ ಗ್ರಾಮದ ನಿವಾಸಿಯಾಗಿರುವ ಮಹಿಳೆ ,ಮತಾಂತರಕ್ಕಾಗಿ ಪತಿಯ ಕಿರುಕುಳಕ್ಕೆ ಬಲಿಯಾಗಿದ್ದು, ಸಂತ್ರಸ್ತ ಬಾಲಕಿ ಸೀಮಾ ಚೌರಾಸಿಯಾ ಅವರು 2019 ರ ಏಪ್ರಿಲ್ 25 ರಂದು ಓಲ್ಡ್ ಬಜಾರ್ ಭರ್ವಾರಿ ನಿವಾಸಿ ಸಂದೀಪ್ ಚೌರಾಸಿಯಾ ಅವರನ್ನು ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದಾರೆ.
ಯುವತಿ ತನ್ನ ತವರು ಮನೆಯಿಂದ ಅತ್ತೆ ಮನೆಗೆ ಕಾಲಿಟ್ಟಾಗ ಆಚರಣೆಗಳು ಮತ್ತು ಪದ್ಧತಿಗಳಿಂದ ಆಕೆ ಅಚ್ಚರಿಗೊಂಡಿದ್ದಾರೆ. ಕ್ರಿಶ್ಚಿಯನ್ ಧರ್ಮದ ಧರ್ಮಗ್ರಂಥದ ಮೇಲೆ ಕೈಯಿಟ್ಟು ಪ್ರಾರ್ಥಿಸಲು ಕೇಳಿಕೊಂಡಿದ್ದು, ಆದರೆ ಕ್ರಿಶ್ಚಿಯನ್ ಧರ್ಮ ದ ಅನುಸಾರ ನಡೆದುಕೊಳ್ಳಲು ಯುವತಿ ಒಪ್ಪಿಗೆ ಸೂಚಿಸಿದೆ ತಿರಸ್ಕರಿಸಿದ್ದು, ಸಂತ್ರಸ್ತೆಯ ಅತ್ತೆ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ ಎಂದು ತಿಳಿದು ಬಂದಿದೆ . ಹಾಗಾಗಿ, ಪತಿಯ ಮನೆಯವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಯುವತಿಗೆ ಒತ್ತಡ ಹಾಕಿದ್ದು, ಯುವತಿ ಹಿಂದು ಧರ್ಮ ಬಿಟ್ಟು ಬೇರೆ ಆಚರಣೆ ನಡೆಸಲು ತಿರಸ್ಕರಿಸಿದ್ದಾಳೆ.
ಯುವತಿ ತನ್ನ ಅತ್ತೆ ಮನೆಯಲ್ಲಿ ಕಿರುಕುಳವನ್ನು ಸಹಿಸುತ್ತ ಬಂದಿದ್ದು, ಆಕೆಯನ್ನು ಮತಾಂತರಗೊಳಿಸುವಂತೆ ಒತ್ತಾಯಿಸಲು ಅತ್ತೆ ವರದಕ್ಷಿಣೆಯಲ್ಲಿ ಕಾರು ತರುವಂತೆ ಬೇಡಿಕೆಯಿಟ್ಟಿದ್ದಾರೆ. ಅಲ್ಲದೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ವರದಕ್ಷಿಣೆಯಾಗಿ ಕಾರನ್ನು ತೆಗೆದುಕೊಳ್ಳುವುದಿಲ್ಲ ಎಂದು ಷರತ್ತು ಹಾಕಿದ್ದಾರೆ. ಇದಾದ ನಂತರವೂ ಯುವತಿ ಧರ್ಮ ಬದಲಾಯಿಸಲಿಲ್ಲ. ಹಾಗಾಗಿ, ಅತ್ತೆ ಯುವತಿಗೆ ಥಳಿಸಿ ಮನೆಯಿಂದ ಹೊರ ಹಾಕಿದ್ದು, ನಿರಾಶ್ರಿತಳಂತೆ ಮಗಳು ಮನೆಗೆ ತಲುಪಿದಾಗ ಯುವತಿಯ ತಂದೆಗೆ ಆಘಾತವಾಗಿದ್ದು ಅಲ್ಲದೆ ಮಗಳ ಜೀವನದ ಅವಸ್ಥೆ ಕಂಡು ತಂದೆ ಮೆದುಳಿನ ರಕ್ತಸ್ರಾವದಿಂದ ಮೃತ ಪಟ್ಟಿದ್ದಾರೆ. ಆದರೆ, ಯುವತಿ ಈ ಬಗ್ಗೆ ದೂರು ನೀಡಿ ಠಾಣೆಗೆ ಹೋದಾಗ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.
ಮದುವೆಯ ಮೊದಲು ಯುವಕನ ಬಗ್ಗೆ ಮಾಹಿತಿ ಇಲ್ಲದೆ ಧರ್ಮದ ಬಗ್ಗೆ ಮರೆಮಾಚಿ, ಮದುವೆಯ ನಂತರ ಅಸಲಿ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅವನು ತನ್ನ ಹೆಂಡತಿಯನ್ನು ಕ್ರಿಶ್ಚಿಯನ್ (Christianity) ಧರ್ಮಕ್ಕೆ ಮತಾಂತರಗೊಳಿಸುವಂತೆ ಒತ್ತಾಯ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಪತ್ನಿ ಮತಾಂತರಗೊಳ್ಳಲು ಸಮ್ಮತಿ ಸೂಚಿಸದ ಹಿನ್ನಲೆ ಪತ್ನಿಗೆ ಹೊಡೆದು ಚಿತ್ರಹಿಂಸೆ ನೀಡಲಾರಂಭಿಸಿದ್ದಾನೆ. ಪತಿಯ ಜೊತೆಗೆ ಅತ್ತೆಯೂ ಯುವತಿಯನ್ನು ಮತಾಂತರವಾಗುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ, ವರದಕ್ಷಿಣೆಯಾಗಿ ಕಾರು ತರುವಂತೆ ಒತ್ತಡ ಹೇರಿದ್ದಾರೆ. ಒಂದು ವೇಳೆ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದಲ್ಲಿ ವರದಕ್ಷಿಣೆ (Dowry) ರೂಪದಲ್ಲಿ ಕಾರು ನೀಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ಎಷ್ಟೇ ಒತ್ತಡ ಹಾಕಿದರು ಕೂಡ ಯುವತಿ ತನ್ನ ಧರ್ಮವನ್ನು ಬದಲಾಯಿಸಲು ಸಮ್ಮತಿ ಸೂಚಿಸದ ಹಿನ್ನೆಲೆ, ಅತ್ತೆ ಯುವತಿಯನ್ನೂ ಥಳಿಸಿ ಮನೆಯಿಂದ ಆಚೆಗೆ ಹಾಕಿದ್ದಾರೆಸಂತ್ರಸ್ತೆ ಎಸ್ಪಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಎಸ್ಪಿಯವರ ಆದೇಶದ ನಂತರ, ಪೊಲೀಸರು ಸಂತ್ರಸ್ತೆಯ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆದರೆ ತಹ್ರೀರ್ನಲ್ಲಿ ಮತಾಂತರಕ್ಕಾಗಿ ಕಿರುಕುಳದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಪೊಲೀಸರು ಆರೋಪಿಗಳ ಮೇಲೆ ಮತಾಂತರದ ಬಗ್ಗೆ ಸೆಕ್ಷನ್ ಜಾರಿ ಮಾಡಿಲ್ಲ.ಕೊಖ್ರಾಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಭಾರ್ವಾರಿ ಮಾರ್ಕೆಟ್ ನಲ್ಲಿ ಘಟನೆ ನಡೆದಿದೆ.ಈ ವಿಷಯದಲ್ಲಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿಲ್ಲ. .