ಪತಿಯ ಅನೈತಿಕ ಸಂಬಂಧ | ಹೆಂಡತಿಯ ದುಡುಕಿನ ನಿರ್ಧಾರ | ಮೂರು ಮಕ್ಕಳೊಂದಿಗೆ ತಾಯಿ ಕೂಡಾ ಸಾವು!
ತವರು ಮನೆ ತೊರೆದು ನೂರಾರು ಕನಸು ಹೊತ್ತು ಅತ್ತೆ ಮನೆ ಸೇರಿದ ಮಹಿಳೆ ಸಹಜವಾಗಿ ಮನೆಯವರ ಪ್ರೀತಿ, ವಿಶ್ವಾಸ ಅಪೇಕ್ಷಿಸುತ್ತಾರೆ. ಅದರಲ್ಲು ವಿಶೇಷವಾಗಿ ಪತಿಯ ಪ್ರೀತಿ, ಕಾಳಜಿ ಬಯಸುತ್ತಾಳೆ. ಇದನ್ನು ಹೊರತು ಪಡಿಸಿ ಮತ್ತೇನನ್ನೂ ಆಕೆ ಬಯಸುವುದಿಲ್ಲ. ಆದರೆ, ನಂಬಿದ ಪತಿ ನಂಬಿಕೆ ದ್ರೋಹ ಎಸಗಿದರೆ ಆಕೆಗೆ ಆಗುವ ಸಂಕಟ ಅಷ್ಟಿಷ್ಟಲ್ಲ!!. ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದು ವಿವಾಹಿತ ಮಹಿಳೆ ನೇಣಿಗೆ ಕೊರಳೊಡ್ಡಿದ ಘಟನೆ ಬೆಳಕಿಗೆ ಬಂದಿದೆ.
ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮದ್ದೂರಿನ ಜನತೆಯನ್ನು ನೆನ್ನೆ ಅಚ್ಚರಿ ಹಾಗೂ ಆಘಾತಕ್ಕೆ ಎಡೆ ಮಾಡಿಕೊಟ್ಟಿತ್ತು. ಮದ್ದೂರಿನ ಹೊಳೆಬೀದಿಯಲ್ಲಿ ವಾಸವಿದ್ದ ಉಸ್ನಾ ಕೌಸರ್ (30) ಎಂಬ ಮಹಿಳೆ ತನ್ನ ಗಂಡನ ಅಕ್ರಮ ಸಂಬಂಧದ ಬಗ್ಗೆ ತಿಳಿದು, ತನ್ನ ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದುರಂತಕ್ಕೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದ್ದು,ಗಂಡನ ಅಕ್ರಮ ಸಂಬಂದಕ್ಕೆ ಬೇಸತ್ತ ಮಹಿಳೆ ಉಸ್ನಾ ಕೌಸರ್ ತನ್ನ ಮಕ್ಕಳಾದ ಹ್ಯಾರಿಸ್ (7), ಆಲಿಸಾ (4) ಮತ್ತು ಅನಮ್ ಫಾತಿಮಾ (2) ಎಂಬ ಪುಟ್ಟ ಮಕ್ಕಳನ್ನು ತಾನು ಕೂಡ ಸಾವಿಗೆ ಶರಣಾಗಿದ್ದಾಳೆ.
ಅಖಿಲ್ ಅಹಮದ್ ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿದ್ದು, ಮುದ್ದಾದ ಕುಟುಂಬವಿದ್ದರೂ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಆತನ ಮೊಬೈಲ್ನಲ್ಲಿ ಪರಸ್ತ್ರೀಯ ಅಶ್ಲೀಲ ಚಿತ್ರ ಫೋಟೋಗಳು ಪತ್ತೆಯಾಗಿದ್ದು ಇದನ್ನು ಕೌಸರ್ ಪ್ರಶ್ನೆ ಮಾಡಿದ್ದಾಳೆ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆಗಳು ಕೂಡ ನಡೆದಿದ್ದು, ಈ ಬಳಿಕ ಪಾಲಕರು ಇಬ್ಬರನ್ನು ರಾಜಿ ಮಾಡಿಸಿದ್ದಾರೆ. ಈ ಸಂದರ್ಭ ಅಕ್ರಮ ಸಂಬಂಧ ಬಿಡುವುದಾಗಿ ಅಖಿಲ್ ಮಾತು ಕೊಟ್ಟಿದ್ದಾನೆ.
ನಿನ್ನೆ ಉರುಫ್ ಹಿನ್ನೆಲೆ ಬೇಗ ಮನೆಗೆ ಬರ್ತೀನಿ ಎಂದು ಅಖಿಲ್ ಕೆಲಸಕ್ಕೆ ಹೋಗಿದ್ದಾನೆ ಎನ್ನಲಾಗಿದ್ದು, ಆದರೆ, ಹೇಳಿದಂತೆ ಸಂಜೆ ಬೇಗ ಮನೆಗೆ ಬಂದಿಲ್ಲ ಹಾಗಾಗಿ, ಕೌಸರ್ ಮತ್ತು ಅಖಿಲ್ ನಡುವೆ ಫೋನ್ ಮೂಲಕವೇ ಮತ್ತೆ ಕಿತ್ತಾಟ ನಡೆದಿದೆ.
ಈ ನಡುವೆ ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕೌಸರ್ ಗಂಡನ ನಡೆಯಿಂದ ತೀವ್ರವಾಗಿ ನೊಂದಿಕೊಂಡಿದ್ದಾಳೆ. ಹಾಗಾಗಿ, ಸಂಜೆ ಮನೆಗೆ ಕೌಸರ್ ಅನ್ನದಲ್ಲಿ ಮಕ್ಕಳಿಗೆ ವಿಷ ಉಣಿಸಿ, ಅವರು ಸತ್ತ ಬಳಿಕ ತಾನೂ ನೇಣಿಗೆ ಕೊರಳಿಗೆ ಒಡ್ಡಿದ್ದಾಳೆ.
ಈ ನಡುವೆ , ಕೌಸರ್ ಆತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವಿಲ್ಲ. ಗಂಡ ಅಖಿಲ್ ಕೊಲೆ ಮಾಡಿರುವ ಕುರಿತು ಕೌಸರ್ ಪೋಷಕರು ಆರೋಪ ಮಾಡಿದ್ದು, ಅಷ್ಟೆ ಅಲ್ಲದೆ, ಘಟನೆ ನಡೆದ ಬಳಿಕ ಅಖಿಲ್ ಅಹಮದ್ ಹಾಗೂ ಕುಟುಂಬ ಪರಾರಿಯಾಗಿದ್ದಾರೆ. ಈ ಸಂಬಂಧ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಕಣ್ಣೆದುರೇ ತನ್ನ ಕಂದಮ್ಮನನ್ನು ಕೊಂದು ತಾನು ಕೂಡ ಮೃತಪಟ್ಟಿದ್ದು, ತಾಯಿಯ ಆತುರದ ನಿರ್ಧಾರದಿಂದ ಏನು ಅರಿಯದ ಪುಟ್ಟ ಕಂದಮ್ಮಗಳು ಕೂಡ ಸಾವಿನ ದವಡೆಗೆ ಸಿಲುಕಿದ್ದು ವಿಪರ್ಯಾಸ!!!