5 ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್‌ ಬಸ್‌ ಆರಂಭ!

ರಾಜ್ಯದಲ್ಲಿ ಹೊಸ ಹೊಸ ಬೆಳವಣಿಗೆ ದಿನೇ ದಿನೇ ಆಗುತ್ತಲೇ ಇರುತ್ತದೆ. ಜನರಿಗಾಗಿ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಮಾಡುತ್ತಲೇ ಇರುತ್ತವೆ. ಇದೀಗ ಸಾರಿಗೆ ಸಂಪರ್ಕದಲ್ಲಿಯು ಹೊಸ ಯೋಜನೆಯನ್ನು ತರುತ್ತಿದೆ. ಏನು ಅಂತ ಕೇಳ್ತೀರಾ? ಇಲ್ಲಿದೆ ನೋಡಿ

 

ಬಿಎಂಟಿಸಿ ಬಳಿಕ ಈಗ ಕೆಎಸ್‌ಆರ್‌ಟಿಸಿ ಕೂಡಾ ಎಲೆಕ್ಟ್ರಿಕ್‌ ಬಸ್‌ ಆರಂಭಿಸುತ್ತಿದ್ದು, ಜನವರಿಯ ಒಳಗೆ ಹವಾನಿಯಂತ್ರಿತ ವೋಲ್ವೊ ಮಾದರಿಯ 25 ಎಲೆಕ್ಟ್ರಿಕ್‌ ಬಸ್‌ಗಳು ಬೆಂಗಳೂರಿನಿಂದ 5 ಜಿಲ್ಲೆಗಳಿಗೆ ಸಂಚಾರ ನಡೆಸಲಿವೆ.

ಕೆಎಸ್‌ಆರ್‌ಟಿಸಿ ಒಟ್ಟು 50 ಎಲೆಕ್ಟ್ರಿಕ್‌ ಬಸ್‌ಗಳಿಗೆ ಹೈದರಾಬಾದ್‌ನ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಡಿಸೆಂಬರ್‌ 4ರಂದು ಪ್ರಾಯೋಗಿಕ ಸಂಚಾರಕ್ಕೆಂದು ಮೊದಲ ಬಸ್‌ ಲಭ್ಯವಾಗಲಿವೆ.

ಆ ಬಳಿಕ ಡಿಸೆಂಬರ್‌ ಕೊನೆಯ ವಾರ 25 ಬಸ್‌ಗಳು ಲಭ್ಯವಾಗಲಿದ್ದು, ಇವುಗಳಲ್ಲಿ ಪ್ರಯಾಣಿಕ ಸಂಚಾರ ಆರಂಭಗೊಳ್ಳಲಿದೆ. ಉಳಿದ 25 ಬಸ್‌ಗಳು ಫೆಬ್ರವರಿಯಲ್ಲಿ ಲಭ್ಯವಾಗಲಿವೆ.

ಕೆಎಸ್‌ಆರ್‌ಟಿಸಿ 5 ಮಾರ್ಗವನ್ನು ಗುರುತಿಸಿದೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರಿನಿಂದ ಐದು ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭಿಸಲಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ವಿರಾಜಪೇಟೆ, ಬೆಂಗಳೂರು-ಮಡಿಕೇರಿ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ ಮಾರ್ಗವನ್ನು ಗುರುತಿಸಲಾಗಿದೆ. ಬಸ್‌ಗಳು ನಿಗಮಕ್ಕೆ ಸೇರಿದ ಬಳಿಕ ಮತ್ತೊಮ್ಮೆ ಪರಿಶೀಲಿಸಿ ಮಾರ್ಗ ಅಂತಿಮಗೊಳಿಸಲಾಗುತ್ತದೆ.

Leave A Reply

Your email address will not be published.