40 ರೂ.ಗಾಗಿ ಜಗಳ | ಅತ್ತೆ ಸೊಸೆ ಜಗಳದಲ್ಲಿ ಪತಿ ಎಂಟ್ರಿ | ಒಂದೇ ಏಟು, ಹೆಂಡ್ತಿ ಸಾವು!

ಅತ್ತೆ-ಸೊಸೆ ಜಗಳ ಸಾಮಾನ್ಯವಾಗಿ ಎಲ್ಲಾ ಮನೆಯಲ್ಲೂ ಇರುವಂತದ್ದೆ. ಇವರಿಬ್ಬರ ಜಗಳದ ನಡುವೆ ಗಂಡನಿಗೆ ತುತ್ತಾ-ಮುತ್ತಾ ಅಂತ ತಿಳಿಯದೆ ಪೇಚಿಗೆ ಸಿಲುಕುವಂತಾಗುತ್ತದೆ. ಈ ಜಗಳವಂತೂ ಮುಗಿಯುವಂತದ್ದಲ್ಲ ಒಂದಾ ಅತ್ತೆ ಸೋಲಬೇಕು ಇಲ್ವಾ ಸೊಸೆ ಸೋಲಬೇಕು. ಇಬ್ಬರಲ್ಲಿ ಒಬ್ಬರ ಕೈ ಮೇಲಾಗದಿದ್ದರೆ ಆ ಜಗಳ ಮುಗಿಯುವುದೇ ಇಲ್ಲಾ. ಆದರೆ ಇಲ್ಲೊಂದು ಅಂತಹದ್ದೆ ಜಗಳದಲ್ಲಿ ಸೊಸೆ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

 

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ನಕ್ಕರಗುಂದಿ ಗ್ರಾಮದಲ್ಲಿ ಅತ್ತೆ-ಸೊಸೆಯ ನಡುವೆ 40 ರೂಪಾಯಿ ವಿಚಾರವಾಗಿ ಜಗಳ ನಡೆದಿದೆ. ಈ ಜಗಳದಲ್ಲಿ ಸೊಸೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತ್ತೆ ಭೀಮವ್ವ ಗುಳ್ಳಣ್ಣವರು ನನ್ನ 40 ರೂಪಾಯಿ ನೀನು ತೊಗೊಂಡಿದ್ದೀಯ ಎಂದು ಸೊಸೆ ರಂಗವ್ವ ಗುಳ್ಳಣ್ಣವರ ಮೇಲೆ ಆರೋಪ ಮಾಡಿದ್ದಾರೆ. ಈ ವೇಳೆ ಸೊಸೆ ನಾನು ನಿಮ್ಮ ಹಣವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾಳೆ. ಆದರೂ ಆಕೆಯ ಮಾತನ್ನು ಅತ್ತೆ ನಂಬಲಿಲ್ಲ. ಹೀಗೆ ಅತ್ತೆ, ಸೊಸೆ ನಡುವಿನ ಮಾತು ಜಗಳವಾಗಿ ಮಾರ್ಪಟ್ಟಿದೆ. ನಂತರ ಇವರಿಬ್ಬರ ಜಗಳ ತಾರಕಕ್ಕೇರಿತು. ಪತ್ನಿ ಹಾಗೂ ತಾಯಿಯ ಜಗಳದಿಂದ ಬೇಸತ್ತು ಮಗ ಮಳಿಯಪ್ಪ ಜಗಳ ಬಿಡಿಸಲು ಬಂದಿದ್ದಾನೆ. ಇವರಿಬ್ಬರ ಜಗಳ ನಿಲ್ಲದೇ ಇದ್ದಾಗ ಕೋಪಗೊಂಡ ಆತ ಪತ್ನಿಯ ಕಪಾಳಕ್ಕೆ ಹೊಡೆದಿದ್ದಾನೆ. ಮೊದಲೇ ಅಸ್ತಮಾ, ಬಿ.ಪಿಯಿಂದ ಬಳಲುತ್ತಿದ್ದ ಆಕೆಯ ಪತಿಯ ಒಂದೇ ಏಟಿಗೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ರಂಗವ್ವ ಗುಳ್ಳಣ್ಣ ಅವರು ಮಳಿಯಪ್ಪನವರ ಸೋದರ ಮಾವನ ಮಗಳಾಗಿದ್ದರು. 12 ವರ್ಷದ ಹಿಂದೆಯೇ ಇವರ ಮದುವೆಯಾಗಿತ್ತು. ಮಳಿಯಪ್ಪ ಹಮಾಲಿ ಕೆಲಸ ಮಾಡುತ್ತಿದ್ದ. ಆದರೆ ಇದೀಗ ಕೇವಲ 40 ರೂಪಾಯಿ ಜಗಳದಿಂದ ಪತ್ನಿಯನ್ನು ಕಳೆದುಕೊಂಡ ಜೊತೆಗೆ ತನ್ನ ಕೈಯಿಂದಲೇ ಆಕೆಯ ಸಾವಾಯಿತು. 40 ರೂ. ಒಂದು ಜೀವವನ್ನೇ ಬಲಿ ತೆಗೆದುಕೊಂಡಿತು.

Leave A Reply

Your email address will not be published.