Smart Watches : ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್ ಗಳಿಗೆ ಡಿಮಾಂಡಪ್ಪೋ ಡಿಮಾಂಡು!
ಬದಲಾಗುತ್ತಿರುವ ಈ ಸ್ಮಾರ್ಟ್ ಯುಗದಲ್ಲಿ ತಂತ್ರಜ್ಞಾನವು ಮುಂದುವರೆದಿದೆ. ಸಮಯ ನೋಡಲು ಮಾತ್ರ ಸೀಮಿತವಾಗಿದ್ದ ವಾಚ್, ಈಗ ಎಲ್ಲಾ ಸೇವೆಗಳನ್ನು ನೀಡುತ್ತಿದೆ. ಕರೆ ಮಾಡಲು, ನಮ್ಮ ದೈನಂದಿನ ಚಟುವಟಿಕೆ ಹಾಗೂ ಆರೋಗ್ಯ ಮಾಹಿತಿಯನ್ನು ತಿಳಿದುಕೊಳ್ಳಲು ಇದು ಸಹಕಾರಿಯಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್ ಗಳಿಗೆ ಡಿಮಾಂಡ್ ಹೆಚ್ಚುತ್ತಲೇ ಇದೆ.
ಇದೀಗ ಕೌಂಟರ್ ಪಾಯಿಂಟ್ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಸ್ಮಾರ್ಟ್ವಾಚ್ನ ಮಾರುಕಟ್ಟೆಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತವು ಈಗ ಸ್ಮಾರ್ಟ್ ವಾಚ್‌ಗಳ ಮೊದಲ ಮಾರುಕಟ್ಟೆಯಾಗಿದೆ ಎಂದು ವರದಿ ಮಾಡಿದೆ. 2020 ರ ನಾಲ್ಕನೇ ತ್ರೈಮಾಸಿಕದಿಂದ 2022 ರ ಎರಡನೇ ತ್ರೈಮಾಸಿಕದವರೆಗೆ ಉತ್ತರ ಅಮೇರಿಕಾ ಶೇಕಡಾ 21% ರಷ್ಟು ಬೆಳವಣಿಗೆಯೊಂದಿಗೆ ಸ್ಮಾರ್ಟ್ವಾಚ್ನ ದೊಡ್ಡ ಮಾರುಕಟ್ಟೆಯಾಗಿತ್ತು. ಆದರೆ ಭಾರತದ ಈಗಿನ ಅದ್ಭುತ ಬೆಳವಣಿಗೆಯಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.
ಭಾರತದ ಸ್ಮಾರ್ಟ್ ವಾಚ್ ಮಾರುಕಟ್ಟೆ ಮೂರನೇ ತ್ರೈಮಾಸಿಕದಲ್ಲಿ ಅತ್ಯಂತ ವೇಗದಲ್ಲಿ ಬೆಳೆದು ದೊಡ್ಡ ಮಾರುಕಟ್ಟೆಯಾಗಿದೆ ಎಂದು ಹಿರಿಯ ವಿಶ್ಲೇಷಕರಾಗಿರುವ ಅಂಶಿಕಾ ಜೈನ್ ಹೇಳಿದ್ದಾರೆ. 2022 ರ ಮೂರನೇ ತ್ರೈಮಾಸಿಕದಲ್ಲಿ, ಭಾರತೀಯ ಸ್ಮಾರ್ಟ್ ವಾಚ್ ಮಾರುಕಟ್ಟೆಯು 171 ಪ್ರತಿಶತದಷ್ಟು ಅಭಿವೃದ್ಧಿ ಹೊಂದಿದ್ದೂ, ಕಳೆದ ವರ್ಷದ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿಯ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ವಾಚ್ ಮಾರುಕಟ್ಟೆಯಿಂದ ಸ್ಮಾರ್ಟ್ವಾ ಚ್ಗಳ ಬೇಡಿಕೆ 30 ಪ್ರತಿಶತದಷ್ಟು ಹೆಚ್ಚಾಗಿದೆ.
ಅಂಶಿಕಾ ಜೈನ್ ಹೇಳುವ ಪ್ರಕಾರ, ಮೂರನೇ ತ್ರೈಮಾಸಿಕದಲ್ಲಿ ಹಬ್ಬದ ಸೀಸನ್ ಇರುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ. ಹಾಗಾಗಿ ಭಾರತೀಯ ಬ್ರಾಂಡ್‌ಗಳು ಸ್ಥಳೀಯ ಉತ್ಪಾದನೆಗೆ ಆದ್ಯತೆ ನೀಡುತ್ತವೆ ಮತ್ತು ಕೈಗೆಟುಕುವ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸುವಿದರಿಂದ ಮಾರುಕಟ್ಟೆಯ ಬೆಳವಣಿಗೆಗೆ ಕಾರಣವಾಗಿದೆ ಎಂದಿದ್ದಾರೆ. ಮತ್ತೊಂದು ಸಂಶೋಧನಾ ವಿಶ್ಲೇಷಕ ವೂಜಿನ್ ಸನ್ ಅವರು ಸ್ಮಾರ್ಟ್ ವಾಚ್‌ಗಳ ಪ್ರಕಾರಗಳಲ್ಲಿ, ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುವ ಸ್ಮಾರ್ಟ್‌ವಾಚ್‌ಗಳು ಮತ್ತು ಹಗುರವಾದ ಆವೃತ್ತಿಗಳು ಈಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಹಾಗಾಗಿ ಜಾಗತಿಕ ಮಾರುಕಟ್ಟೆ ಈ ಬ್ರಾಂಡ್ಗಳ ಮೇಲೆ ಹೆಚ್ಚು ಒಲವು ತೋರುತ್ತಿದೆ ಎಂದಿದ್ದಾರೆ.
ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಾಯ್ಸ್ ಸ್ಮಾರ್ಟ್ವಾಚ್ನ ಮಾರಾಟವು 218 ಪ್ರತಿಶತದಷ್ಟು ಬೆಳೆದಿದೆ. ಇದರೊಂದಿಗೆ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಅಗ್ರ ಸ್ಥಾನವನ್ನು ತಲುಪಿದೆ. ಮುಂದಿನದು ಫೈರ್ ಬೋಲ್ಟ್ ವಾಚ್‌ಗಳು ಸ್ಥಾನವನ್ನು ಪಡೆದುಕೊಂಡರೆ, ಹೊಸದಾಗಿ ಬಿಡುಗಡೆಯಾದ ಆ್ಯಪಲ್ ವಾಚ್ 8 ಸೀರಿಸ್ ಸ್ಮಾರ್ಟ್ವಾಚ್ನ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಲೇ ಇದೆ.
ಈ ಸ್ಮಾರ್ಟ್ವಾಚ್ಗಳ ಬೇಡಿಕೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಗ್ರಾಹಕರ ಗಮನ ಸೆಳೆಯಲು ಕಂಪನಿಗಳು ಹೊಸ ಹೊಸ ವೈಶಿಷ್ಟ್ಯಗಳನ್ನೊಳಗೊಂಡ ಸ್ಮಾರ್ಟ್ವಾಚ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.