ಸಾನಿಯಾ ಶೋಯೆಬ್ ಸಂಬಂಧದಲ್ಲಿ ಹುಳಿ ಹಿಂಡಿದ ಯುವತಿಯಿಂದ ಬಂತು ಶಾಕಿಂಗ್ ಹೇಳಿಕೆ!!!

ಭಾರತೀಯ ಟೆನ್ನಿಸ್‌ ತಾರೆ ಸಾನಿಯಾ ಮತ್ತು ಶೋಯೆಬ್ ಅವರ ವಿಚ್ಛೇದನದ ವದಂತಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಕೇಳಿ ಬರುತ್ತಿತ್ತು . ಇದೆಲ್ಲದರ ನಡುವೆ, ಈ ಜೋಡಿಗಳಿಬ್ಬರು ಹೊಸ ಕಾರ್ಯಕ್ರಮವನ್ನು ಒಟ್ಟಿಗೆ ಘೋಷಿಸುವ ಮೂಲಕ ಎಲ್ಲರಿಗೆ ಶಾಕ್ ನೀಡಿದ್ದರು. ಒಟಿಟಿ ಪ್ಲಾಟ್‌ಫಾರ್ಮ್‌ `ದಿ ಮಿರ್ಜಾ ಮಲಿಕ್ ಶೋʼ ಎಂಬ ಶೀರ್ಷಿಕೆಯ ಮೂಲಕ ದಂಪತಿಗಳಿಬ್ಬರು ತೆರೆಮೇಲೆ ಬರಲಿದ್ದಾರೆ ಎಂಬ ಸುದ್ದಿಯ ಜೊತೆಗೆ ಒಟಿಟಿ ಪ್ಲಾಟ್‌ಫಾರ್ಮ್‌ ಉರ್ದುಫ್ಲಿಕ್ಸ್‌ ಕಾರ್ಯಕ್ರಮದ ಪೋಸ್ಟರ್ ಕೂಡ ಬಿಡುಗಡೆ ಮಾಡಿತ್ತು.

ಪಾಕಿಸ್ತಾನಿ ಮಾಡೆಲ್ ಮತ್ತು ನಟಿ ಆಯೇಷಾ ಒಮರ್ ಅವರ ಹೆಸರು ಕ್ರಿಕೆಟಿಗ ಶೋಯೆಬ್ ಮಲಿಕ್‌ ಅವರ ಜೊತೆಗೆ ಆಗಾಗ ಕೇಳಿ ಬರುತ್ತಿತ್ತು .ಈ ನಡುವೆ ಇಬ್ಬರು ಮದುವೆ ಕೂಡ ನಡೆಯಲಿದೆ ಎಂಬ ಚರ್ಚೆ ಅಭಿಮಾನಿಗಳ ನಡುವೆ ನಡೆಯುತ್ತಿತ್ತು. ಇಷ್ಟೇ ಅಲ್ಲದೆ, ಇದಕ್ಕೆ ಇಂಬು ನೀಡುವಂತೆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಫೋಟೋ ನೋಡಿದ ನೆಟ್ಟಿಗರು ಶೋಯೆಬ್‌ ಆಯೇಷಾ ನಡುವೆ ಲವ್ ಇದೆ ಎಂದು ಕಲ್ಪಿಸಿಕೊಂಡಿದ್ದರು ಅಲ್ಲದೆ, ಸಾನಿಯಾ ಮತ್ತು ಶೋಯೆಬ್ ವಿಚ್ಛೇದನಕ್ಕೆ ಇದೇ ಕಾರಣ ಎಂದು ಕೂಡ ಹೇಳಲಾಗಿತ್ತು.

ಶೋಯೆಬ್ ಮಲಿಕ್ ಹಾಗೂ ಆಯೇಶಾ ಒಮರ್ ಬಗ್ಗೆ ಎಲ್ಲೆಡೆ ಹರಿದಾಡುತ್ತಿರುವ ಗಾಳಿಸುದ್ದಿಗಳಿಗೆ ಬ್ರೇಕ್ ನೀಡುವ ಸಲುವಾಗಿ, ಆಯೇಶಾ ಒಮರ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗುವ ಪ್ಲಾನ್ ಇದೆಯಾ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಆಯೇಶಾ.ಉತ್ತರಿಸಿದ್ದು, ತಾನು ಮದುವೆಯಾಗುವ ಯೋಜನೆಯಲ್ಲಿ ನಿಜಾವಾಗಿಯೂ ಇಲ್ಲ. ಅಷ್ಟೆ ಅಲ್ಲದೆ, ತಾನು ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ ಅವರಿಗೆ ತುಂಬಾ ಗೌರವ ನೀಡುವ ಜೊತೆಗೆ ಶೋಯೆಬ್‌ ತನ್ನ ಒಳ್ಳೆಯ ಗೆಳೆಯ ಎಂದಿದ್ದಾರೆ. ಇದೆಲ್ಲದರ ಹೊರತಾಗಿ, ಶೋಯೆಬ್ ಅವರ ಪತ್ನಿಯ ಜೊತೆ ಸಂತೋಷವಾಗಿ ಸುಖಿ ಜೀವನ ನಡೆಸುತ್ತಿದ್ದಾರೆ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇತ್ತೀಚೆಗಷ್ಟೇ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಅವರಿಬ್ಬರು ಡೈವೋರ್ಸ್‌ ಪಡೆಯಲಿದ್ದಾರೆ ಎಂಬ ವಿಚಾರ ಎಲ್ಲೆಡೆ ಸಂಚಲನ ಮೂಡಿಸಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಕೆಲ ವರದಿಗಳು ಕೂಡ ಹೊರ ಬಿದ್ದಿದ್ದವು. ಅಲ್ಲದೆ, ಶೋಯೆಬ್ ಮಲಿಕ್ ಪಾಕ್ ನಟಿಯೊಂದಿಗೆ ಅಕ್ರಮ ಸಂಬಂಧದ ಹಿನ್ನೆಲೆ ಈ ಜೋಡಿ ಡಿವೋರ್ಸ್ ನೀಡಲು ಕಾರಣ ಎಂದು ಕೂಡ ಸುದ್ದಿಯಾಗಿತ್ತು. ಇದೀಗ, ಲಿಂಕ್-ಅಪ್ ರೂಮರ್ಸ್‌ ಬಗ್ಗೆ ಆಯೇಶಾ ಮೌನ ಮುರಿದಿದ್ದು, ಪಾಕ್ ನಟಿ ಆಯೇಶಾ ಒಮರ್ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಭಾರತೀಯ ಟೆನ್ನಿಸ್‌ ತಾರೆ ಸಾನಿಯಾ ಮತ್ತು ಶೋಯೆಬ್ ಅವರ ವಿಚ್ಛೇದನದ ವದಂತಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಕೇಳಿ ಬರುತ್ತಿತ್ತು . ಇದೆಲ್ಲದರ ನಡುವೆ, ಈ ಜೋಡಿಗಳಿಬ್ಬರು ಹೊಸ ಕಾರ್ಯಕ್ರಮವನ್ನು ಒಟ್ಟಿಗೆ ಘೋಷಿಸುವ ಮೂಲಕ ಎಲ್ಲರಿಗೆ ಶಾಕ್ ನೀಡಿದ್ದರು. ಒಟಿಟಿ ಪ್ಲಾಟ್‌ಫಾರ್ಮ್‌ `ದಿ ಮಿರ್ಜಾ ಮಲಿಕ್ ಶೋʼ ಎಂಬ ಶೀರ್ಷಿಕೆಯ ಮೂಲಕ ದಂಪತಿಗಳಿಬ್ಬರು ತೆರೆಮೇಲೆ ಬರಲಿದ್ದಾರೆ ಎಂಬ ಸುದ್ದಿಯ ಜೊತೆಗೆ ಒಟಿಟಿ ಪ್ಲಾಟ್‌ಫಾರ್ಮ್‌ ಉರ್ದುಫ್ಲಿಕ್ಸ್‌ ಕಾರ್ಯಕ್ರಮದ ಪೋಸ್ಟರ್ ಕೂಡ ಬಿಡುಗಡೆ ಮಾಡಿತ್ತು.

ಪಾಕಿಸ್ತಾನಿ ಮಾಡೆಲ್ ಮತ್ತು ನಟಿ ಆಯೇಷಾ ಒಮರ್ ಅವರ ಹೆಸರು ಕ್ರಿಕೆಟಿಗ ಶೋಯೆಬ್ ಮಲಿಕ್‌ ಅವರ ಜೊತೆಗೆ ಆಗಾಗ ಕೇಳಿ ಬರುತ್ತಿತ್ತು .ಈ ನಡುವೆ ಇಬ್ಬರು ಮದುವೆ ಕೂಡ ನಡೆಯಲಿದೆ ಎಂಬ ಚರ್ಚೆ ಅಭಿಮಾನಿಗಳ ನಡುವೆ ನಡೆಯುತ್ತಿತ್ತು. ಇಷ್ಟೇ ಅಲ್ಲದೆ, ಇದಕ್ಕೆ ಇಂಬು ನೀಡುವಂತೆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಫೋಟೋ ನೋಡಿದ ನೆಟ್ಟಿಗರು ಶೋಯೆಬ್‌ ಆಯೇಷಾ ನಡುವೆ ಲವ್ ಇದೆ ಎಂದು ಕಲ್ಪಿಸಿಕೊಂಡಿದ್ದರು ಅಲ್ಲದೆ, ಸಾನಿಯಾ ಮತ್ತು ಶೋಯೆಬ್ ವಿಚ್ಛೇದನಕ್ಕೆ ಇದೇ ಕಾರಣ ಎಂದು ಕೂಡ ಹೇಳಲಾಗಿತ್ತು.

ಶೋಯೆಬ್ ಮಲಿಕ್ ಹಾಗೂ ಆಯೇಶಾ ಒಮರ್ ಬಗ್ಗೆ ಎಲ್ಲೆಡೆ ಹರಿದಾಡುತ್ತಿರುವ ಗಾಳಿಸುದ್ದಿಗಳಿಗೆ ಬ್ರೇಕ್ ನೀಡುವ ಸಲುವಾಗಿ, ಆಯೇಶಾ ಒಮರ್ ಪ್ರತಿಕ್ರಿಯೆ ನೀಡಿದ್ದಾರೆ.ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗುವ ಪ್ಲಾನ್ ಇದೆಯಾ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಆಯೇಶಾ ಉತ್ತರಿಸಿದ್ದು, ತಾನು ಮದುವೆಯಾಗುವ ಯೋಜನೆಯಲ್ಲಿ ನಿಜಾವಾಗಿಯೂ ಇಲ್ಲ. ಅಷ್ಟೆ ಅಲ್ಲದೆ, ತಾನು ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ ಅವರಿಗೆ ತುಂಬಾ ಗೌರವ ನೀಡುವ ಜೊತೆಗೆ ಶೋಯೆಬ್‌ ತನ್ನ ಒಳ್ಳೆಯ ಗೆಳೆಯ ಎಂದಿದ್ದಾರೆ.

ಇದೆಲ್ಲದರ ಹೊರತಾಗಿ, ಶೋಯೆಬ್ ಅವರ ಪತ್ನಿಯ ಜೊತೆ ಸಂತೋಷವಾಗಿ ಸುಖಿ ಜೀವನ ನಡೆಸುತ್ತಿದ್ದಾರೆ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Leave A Reply

Your email address will not be published.