Indian Railways: ಕರ್ನಾಟಕದ ರೈಲು ಪ್ರಯಾಣಿಕರಿಗೆ ಬೇಸರದ ಸುದ್ದಿ

ಕರ್ನಾಟಕದ ರೈಲು ಪ್ರಯಾಣಿಕರಿಗೆ ಗಮನಿಸಬೇಕಾದ ಮಾಹಿತಿ. ಜನರು ದೂರದ ಪ್ರಯಾಣ ಇದ್ದಾಗ ರೈಲು ಸಂಚಾರವನ್ನು ಆಯ್ಕೆ ಮಾಡುವುದು ಸಹಜವಾಗಿದೆ. ಆದರೆ ಭಾರತೀಯ ರೈಲ್ವೇಯು ಬೆಂಗಳೂರು ವಿಭಾಗದ ದೊಡ್ಡಜಾಲ, ಆವತಿಹಳ್ಳಿ ರೈಲು ನಿಲ್ದಾಣಗಳನ್ನೂ ಸೇರಿ ಒಟ್ಟು 6 ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ .

ಡಿಸೆಂಬರ್ 1, ಅಂದರೆ ಇಂದಿನಿಂದಲೇ ಬೆಂಗಳೂರು ವಿಭಾಗದ ಒಟ್ಟು 6 ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲಿವೆ ಎಂದು ಮಾಧ್ಯಮ ಒಂದು ವರದಿ ಮಾಡಿದೆ . ಸದ್ಯ ಕೋಲಾರ ಸಮೀಪದ ಹುಡುಕುಲ ಮತ್ತು ಜನ್ನಗಟ್ಟಾ, ಚಿಕ್ಕಬಳ್ಳಾಪುರದ ಗಿಡ್ನಹಳ್ಳಿ ಮತ್ತು ಆಂಧ್ರಪ್ರದೇಶದ ಕೊಟ್ಟಚೆರುವು ರೈಲು ನಿಲುಗಡೆ ನಿಲ್ದಾಣಗಳು ಮುಚ್ಚಲಿವೆ.

ಸದ್ಯ ನೈಋತ್ಯ ರೈಲ್ವೇಯ ನಿಲುಗಡೆ ನಿಲ್ದಾಣಗಳು ಇರುವ ಊರುಗಳ ಖಾಯಂ ನಿವಾಸಿಗಳಿಂದ ಏಜೆಂಟ್​ ಕೆಲಸಕ್ಕೆ ಅರ್ಜಿ ಆಹ್ವಾನಿಸಿದೆ ಎಂದು ಮಾಹಿತಿ ನೀಡಲಾಗಿದೆ.

ಪ್ರಸ್ತುತ ಈ ರೈಲು ನಿಲ್ದಾಣಗಳಲ್ಲಿ ಏಜೆಂಟ್​ಗಳಿಗೆ ಆದಾಯ ಕಡಿಮೆ ಆಗಿದ್ದು, ನಿರುತ್ಸಾಹ ತೋರಿದ ಕಾರಣ ಮುಚ್ಚು ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ. ಏಜೆಂಟ್​ಗಳು ರೈಲು ನಿಲುಗಡೆ ನಿಲ್ದಾಣಗಳಲ್ಲಿ ಮಾರಾಟವಾಗುವ ಟಿಕೆಟ್​ಗಳಿಂದ ಕಮಿಷನ್ ಪಡೆಯುತ್ತಾರೆ. ಟಿಕೆಟ್​ಗಳ ಮಾರಾಟ ಕಡಿಮೆಯಾದ ಕಾರಣ ಅವರ ಆದಾಯವು ಕುಸಿದಿದೆ. ಈ ಎಲ್ಲಾ ಕಾರಣಗಳಿಂದ ಬೆಂಗಳೂರು ವಿಭಾಗದ ಒಟ್ಟು 6 ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲಿವೆ ಎಂಬ ಮಾಹಿತಿಯನ್ನು ಮಾಧ್ಯಮವೊಂದು ಪ್ರಕಟಿಸಿದೆ .

Leave A Reply

Your email address will not be published.