ತ್ರಿಶೂರ್‌ ದೇಗುಲದಲ್ಲಿ ನವದಂಪತಿಗಳ ಮೇಲೆ ಆನೆ ದಾಳಿಯ ಶಾಕಿಂಗ್‌ ವಿಡಿಯೋ ವೈರಲ್‌ | ವೀಕ್ಷಿಸಿ

ನವವಿವಾಹಿತ ದಂಪತಿ ಕೇರಳದ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಂತೆಯೇ ಆನೆಯೊಂದು ಆಕ್ರೋಶಗೊಂಡು ದಾಳಿ ಮಾಡಲು ಮುಂದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 


ನವೆಂಬರ್ 10 ರಂದು ಗುರುವಾಯೂರ್ ದೇವಾಲಯವಿರುವ ತ್ರಿಶೂರ್‌ನಲ್ಲಿ ಈ ಘಟನೆ ನಡೆದಿದೆ. ಇದು ದೇವಾಲಯದಲ್ಲಿ ಸೇರಿದ್ದ ಭಕ್ತರನ್ನು ಬೆಚ್ಚಿ ಬೀಳಿಸಿದೆ. ಈ ವಿಡಿಯೋವನ್ನು ಛಾಯಾಗ್ರಾಹಕ ವೆಡ್ಡಿಂಗ್ ಮೊಜಿತೋ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/reel/ClTPBa_paoq/?utm_source=ig_web_copy_link


ಫೋಟೋಶೂಟ್‌ಗಾಗಿ ನವವಿವಾಹಿತ ದಂಪತಿ ದೇವಾಲಯದ ಒಳಾಂಗಣವನ್ನು ತಲುಪುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರ ಹಿಂದೆಯೇ ಆನೆ ನಿಂತಿತ್ತು. ಕ್ಯಾಮರಾಮನ್ ವಧು ಮತ್ತು ವರನ ಫೋಟೋಗಳನ್ನು ಕ್ಲಿಕ್ ಮಾಡಲು ಪ್ರಾರಂಭಿಸುತ್ತಿದ್ದಂತೆ, ಆನೆ ಆಕ್ರಮಣಕಾರಿಯಾಗಿ ತಿರುಗಿ ಮಾವುತ ಮೇಲೆ ದಾಳಿ ಮಾಡಿದೆ.


ಆನೆಯು ತನ್ನ ಸೊಂಡಿಲಿನಿಂದ ವ್ಯಕ್ತಿಯನ್ನು ತಿವಿಯಲು ಪ್ರಯತ್ನಿಸಿತು, ಆದರೆ ಅವನು ಕೆಳಗೆ ಬಿದ್ದ . ಕೂಡಲೇ ಎದ್ದು ತಪ್ಪಿಸಿಕೊಂಡನು. ತಕ್ಷಣ ಆನೆಯ ಮೇಲೆ ಕುಳಿತ ಎರಡನೇ ಮಾವುತ ಆನೆಯನ್ನು ಸಮಾಧಾನಪಡಿಸಿದನು.
ನಾವು ಫೋಟೋಗೆ ಪೋಸ್ ನೀಡುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಎಲ್ಲರೂ ಕಿರುಚುತ್ತಾ ಓಡಲು ಪ್ರಾರಂಭಿಸಿದರು. ಅವಳು ನನ್ನ ಕೈ ಹಿಡಿದು ಓಡಿಹೋದಳು ಎಂದು ವರ ಘಟನೆಯ ಕುರಿತಂತೆ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಕೇರಳದ ಕೊಲ್ಲಂ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಕಾಡಾನೆಗಳು ತುಳಿದು ಕೊಂದಿದ್ದವು. 50ರ ಆಸುಪಾಸಿನ ವ್ಯಕ್ತಿ ದಟ್ಟ ಅರಣ್ಯದ ಮೂಲಕ ಹಾದುಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೂರು ಆನೆಗಳ ಗುಂಪು ದಾಳಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.