KCET 2022 : ಸಿಇಟಿ ಎರಡನೇ ವಿಸ್ತೃತ ಸುತ್ತಿನ ಫಲಿತಾಂಶ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ 2022ರ ಎರಡನೇ ವಿಸ್ತೃತ ಸುತ್ತಿನ ಇಂಜಿನಿಯರಿಂಗ್ ಮತ್ತು ಇತರ ಕೋರ್ಸ್‌ಗಳ ಸೀಟು ಹಂಚಿಕೆಯ ಫಲಿತಾಂಶ ಮತ್ತು ಎರಡನೇ ವಿಸ್ತೃತ ಸುತ್ತಿನ ನಂತರದ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

2022ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ ಮುಂತಾದ ಕೋರ್ಸ್‌ಗಳಿಗಾಗಿ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳ ಪ್ರವೇಶಾತಿಗೆ ಎರಡನೇ ಮುಂದುವರಿದ ಸುತ್ತಿ ಸೀಟು ಹಂಚಿಕೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea ಗೆ ಭೇಟಿ ನೀಡಿ ಫಲಿತಾಂಶ ವನ್ನು ಪಡೆಯಬಹುದಾಗಿದೆ

ಯುಜಿಸಿಇಟಿ 2022ರ ಎರಡನೇ ವಿಸ್ತೃತ ಸುತ್ತಿನ ಫಲಿತಾಂಶ ಚೆಕ್ ಮಾಡುವ ವಿಧಾನ ಹೀಗಿದೆ:

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea ಗೆ ಭೇಟಿ ನೀಡಬೇಕು. ಆ ಬಳಿಕ, ಮುಖಪುಟದಲ್ಲಿ ಯುಜಿಸಿಇಟಿ 2022ರ ಎರಡನೇ ವಿಸ್ತೃತ ಸುತ್ತಿನ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಇದರ ಬಳಿಕ, ಮತ್ತೊಂದು ಪುಟ ತೆರೆದುಕೊಳ್ಳಲಿದ್ದು, ಆ ಪುಟದಲ್ಲಿ ಅಭ್ಯರ್ಥಿಗಳ ಸಿಇಟಿ ನಂಬರ್ ನಮೂದಿಸಿ ‘Submit’ಎಂಬಲ್ಲಿ ಕ್ಲಿಕ್ ಮಾಡಬೇಕು.
ಈ ಬಳಿಕ, ಪರದೆಯ ಮೇಲೆ ಫಲಿತಾಂಶ ದೊರೆಯಲಿದ್ದು, ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

2022ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ ಮುಂತಾದ ಕೋರ್ಸ್‌ಗಳ ಪ್ರವೇಶಾತಿಗೆ ಎರಡನೇ ಮುಂದುವರಿದ ಸುತ್ತಿ ಸೀಟು ಹಂಚಿಕೆಯ ಬಳಿಕದ ವೇಳಾಪಟ್ಟಿ ಹೀಗಿದೆ:
ಸೀಟು ಹಂಚಿಕೆಯ ಬಳಿಕ, ಶುಲ್ಕ ಪಾವತಿ ಯುಜಿಸಿಇಟಿ 2022ರ ದಿನಾಂಕ- 01-12-2022 ರಿಂದ 02-12-2022ರವರೆಗೆ ಹಿಂದಿನ ಸುತ್ತಿನ ಶುಲ್ಕವನ್ನು ಪಾವತಿಸಿದ್ದಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ . ಇದರ ಜೊತೆಗೆ ದಿನಾಂಕ – 01-12-2022 ರಿಂದ 02-12-2022ರವರೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು 03-12-2022 ಕೊನೆಯ ದಿನಾಂಕವಾಗಿದೆ.


ಅಭ್ಯರ್ಥಿಗಳ ಗಮನಕ್ಕೆ ಸಕ್ಷಮ ಪ್ರಾಧಿಕಾರವು ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಇಲ್ಲವೇ ನಿಬಂಧನೆಗಳನ್ನು ಪೂರ್ಣ ಗೊಳಿಸದ ಅಭ್ಯರ್ಥಿಯ ಪ್ರವೇಶವನ್ನು ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳುವ ಹಕ್ಕನ್ನು ಕೆಇಎ ಹೊಂದಿರುತ್ತದೆ.
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿ, ಕಾಲೇಜುಗಳ ಪ್ರವೇಶ ಪಡೆಯಲು ಸೀಟು ಹಂಚಿಕೆಯನ್ನು ಗಮನಿಸಿ, AICTE,COA, NCISM, NC, PCI, ಸರ್ಕಾರ ಸಂಬಂಧಿಸಿದ ವಿಶ್ವವಿದ್ಯಾಲಯಗಳು ಇಲ್ಲವೇ ಅಪೆಕ್ಸ್ ಸಂಸ್ಥೆಗಳು ಕಾಲ ಕಾಲಕ್ಕೆ ನಿಗದಿಪಡಿಸುವ ನಿಯಮಗಳಿಗೆ ಅನುಮೋದನೆಗೆ ತಕ್ಕಂತೆ ಇದರ ಜೊತೆಗೆ ಷರತ್ತುಗಳು ಅನ್ವಯವಾಗುತ್ತವೆ.

Leave A Reply

Your email address will not be published.