ಕೇವಲ ರೂ.3500 ಪಾವತಿಸಿ, ಈ ಬೈಕ್ ನಿಮ್ಮದಾಗಿಸಿಕೊಳ್ಳಿ | ಈ ಚಾನ್ಸ್ ಮಿಸ್ ಮಾಡ್ಕೋಬೇಡಿ ಬೈಕ್ ಪ್ರಿಯರೇ
ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಹಲವಾರು ಆಫರ್ಗಳನ್ನು ತರುತ್ತಲೇ ಇದೆ. ಅಲ್ಲದೆ ಹೊಸ ಹೊಸ ಬೈಕುಗಳು ಮಾರುಕಟ್ಟೆಗೆ ಬರುತ್ತಿದೆ.
ಬೈಕ್ ಎಂದರೆ ಹುಡುಗರಿಗೆ ಪಂಚ ಪ್ರಾಣ ಆದರೆ ಸದ್ಯ ಬಜೆಟ್ ನಿರ್ಬಂಧಗಳಿಂದ ಈ ಬೈಕ್ ಎಲ್ಲರಿಗೂ ಲಭ್ಯವಿಲ್ಲ. ಸ್ವಲ್ಪ ಹೆಚ್ಚು ದುಡಿದು ಹಣ ಇರುವವರು ಮಾತ್ರ ಈ ಬೈಕ್ ಖರೀದಿಸುತ್ತಾರೆ. ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಲು ಒಂದೂವರೆ ಲಕ್ಷಕ್ಕೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ಆದರೆ ಸಂಪೂರ್ಣ ಮೊತ್ತವನ್ನು ಏಕಕಾಲದಲ್ಲಿ ಪಾವತಿಸಲು ಸಾಧ್ಯವಾಗದವರಿಗೆ EMI ಆಯ್ಕೆಗಳು ಲಭ್ಯವಿದೆ. ನಿಮಗೆ ತಿಂಗಳಿಗೆ ರೂ.3,500 ಉಳಿಸುವ ಭರವಸೆ ಇದ್ದರೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಖರೀದಿ ಮಾಡಬಹುದು. ಹೌದು ರಾಯಲ್ ಎನ್‌ಫೀಲ್ಡ್ ಇದಕ್ಕಾಗಿ ಇಎಂಐ ಆಯ್ಕೆಗಳನ್ನು ನೀಡುತ್ತಿದೆ.
ಸದ್ಯ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಆನ್ ರೋಡ್ ಬೆಲೆ ರೂ.1,88,000 ರಿಂದ. ಕೇವಲ ರೂ.9,000 ಡೌನ್ ಪಾವತಿಯನ್ನು ಪಾವತಿಸುವ ಮೂಲಕ ನೀವು EMI ನಲ್ಲಿ ಬುಲೆಟ್ ಬೈಕ್ ಅನ್ನು ಹೊಂದಬಹುದು.
ನೀವು ಸುಮಾರು 60 ತಿಂಗಳುಗಳು, 48 ತಿಂಗಳುಗಳು ಮತ್ತು 36 ತಿಂಗಳುಗಳ EMI ಆಯ್ಕೆಯನ್ನು ಆಯ್ಕೆ ಮಾಡಬಹುದು. ನೀವು 60-ತಿಂಗಳ ಅವಧಿಯನ್ನು ಆರಿಸಿದರೆ, ನೀವು ರೂ.3,525 EMI ಅನ್ನು ಪಾವತಿಸಬೇಕಾಗುತ್ತದೆ, ನೀವು 48-ತಿಂಗಳ ಅವಧಿಯನ್ನು ಆರಿಸಿದರೆ, ನೀವು ರೂ.4,131 EMI ಅನ್ನು ಪಾವತಿಸಬೇಕಾಗುತ್ತದೆ ಮತ್ತು ನೀವು 36-ತಿಂಗಳ ಅವಧಿಯನ್ನು ಆರಿಸಿದರೆ, ನೀವು ರೂ.5,156 ಇಎಂಐ ಪಾವತಿಸಬೇಕು.
ರಾಯಲ್ ಎನ್ ಫೀಲ್ಡ್ ಬುಲೆಟ್ ವಿಶೇಷತೆ :
- ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, 346ಸಿಸಿ ಎಂಜಿನ್ ಹೊಂದಿದೆ. ಈ ಎಂಜಿನ್‌ನಲ್ಲಿರುವ ಏರ್-ಕೂಲ್ಡ್ ಫ್ಯೂಲ್-ಇಂಜೆಕ್ಟ್ ತಂತ್ರಜ್ಞಾನವು ಗರಿಷ್ಠ ಟಾರ್ಕ್ 28 ಎನ್‌ಎಂ, 19.36 ಪಿಎಸ್ ಶಕ್ತಿಯನ್ನು ಉತ್ಪಾದಿಸುತ್ತದೆ.
- ಇದು 5-ಸ್ಪೀಡ್ ಟ್ರಾನ್ಸ್ಮಿಷನ್ ಹೊಂದಿದೆ. ಬೈಕ್‌ನ ಬ್ರೇಕಿಂಗ್ ವ್ಯವಸ್ಥೆಯು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂದಿನ ಚಕ್ರಗಳಲ್ಲಿ ಡ್ರಮ್ ಬ್ರೇಕ್ ಜೊತೆಗೆ ಸಿಂಗಲ್ ಚಾನೆಲ್ ಎಬಿಎಸ್ ಸಿಸ್ಟಮ್ ಅನ್ನು ಒಳಗೊಂಡಿದೆ.
- ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಲೀಟರ್ 37 ಕಿಮೀ ಮೈಲೇಜ್ ನೀಡುತ್ತದೆ. ಓನಿಕ್ಸ್ ಬ್ಲಾಕ್, ಬುಲೆಟ್ ಸಿಲ್ವರ್, ರೀಗಲ್ ರೆಡ್, ಜೆಟ್ ಬ್ಲಾಕ್, ರಾಯಲ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಇಎಸ್ ಮಾದರಿಯೂ ಇದೆ.
ಅದಲ್ಲದೆ ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್‌ನಿಂದ ಸೂಪರ್ ಮೆಟಾರ್ 650 ಮಾದರಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದಿದೆ. ಸೂಪರ್ ಮೆಟಾರ್ 650 ಸೂಪರ್ ಮೆಟಾರ್ 650 ಟೂರರ್ ಮಾದರಿಗಳನ್ನು ಪರಿಚಯಿಸಿತು. ಇದು ಸುಮಾರು 47 bhp ಪವರ್ ಮತ್ತು 52 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ತೂಕ 241 ಕೆ.ಜಿ. ಇದು 15.7 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಆಸ್ಟ್ರಲ್ ಬ್ಲ್ಯಾಕ್, ಆಸ್ಟ್ರಲ್ ಬ್ಲೂ, ಆಸ್ಟ್ರಲ್ ಗ್ರೀನ್, ಇಂಟರ್ ಸ್ಟೆಲ್ಲರ್ ಗ್ರೇ, ಇಂಟರ್ ಸ್ಟೆಲ್ಲರ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.
ಇನ್ನೇಕೆ ತಡ ಯುವಕರು ತಮ್ಮ ಟ್ರೆಂಡಿಗೆ ತಕ್ಕಂತೆ ಈ ಬೈಕನ್ನು ಕೇವಲ 3,500 ರೂ ಇದ್ದರೆ ನಿಮ್ಮದಾಗಿಸಿಕೊಳ್ಳಬಹುದು.