OnePlus Nord CE 3: ಬಿಡುಗಡೆಗೆ ರೆಡಿ 1ಪ್ಲಸ್ನ ಹೊಸ ಫೋನ್ | ಏನೆಲ್ಲಾ ಫೀಚರ್ಸ್ ಇದೆ ನೋಡಿ
ಪ್ರಸ್ತುತ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್ಫೋನ್ಗಳು ರಿಲೀಸ್ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್ಫೋನ್ ಉಪಯೋಗಿಸದವರು ಯಾರು ಇಲ್ಲ. ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಜೊತೆಗೆ ಈಗಾಗಲೇ ಬಿಡುಗಡೆ ಆಗಿರುವ ಫೋನ್ ಮೇಲೆ ಆಫರ್ ಸಹ ನೀಡಲಾಗುತ್ತಿದೆ. ಅದಲ್ಲದೆ ಉತ್ತಮ ಕ್ಯಾಮೆರಾ, ಹೆಚ್ಚಿನ ಪ್ರೊಸೆಸರ್, ಬ್ಯಾಟರಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಪರಿಚಯ ಮಾಡುತ್ತಿದೆ.
ಹೌದು OnePlus Nord CE 3 ಅನ್ನು 2023 ರ ಆರಂಭದಲ್ಲಿಯೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ.
OnePlus Nord CE 3ಸ್ಮಾರ್ಟ್ ಫೋನಿನ ವಿಶೇಷತೆಗಳು :
• OnePlus Nord CE 3 ನ ವಿನ್ಯಾಸವು ವಿಭಿನ್ನವಾಗಿರುತ್ತದೆ. ಜೊತೆಗೆ ಇದು ಹೆಚ್ಚು ಶಕ್ತಿಯುತ ಪ್ರೊಸೆಸರ್ ಮತ್ತು ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.
• ಅದಲ್ಲದೆ OnePlus Nord CE 3 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಫ್ಲಾಟ್ IPS LCD ಡಿಸ್ಪ್ಲೇಯನ್ನು ಹೊಂದಿರಬಹುದು.
• ಸ್ಕ್ರೀನ್ ಮೇಲ್ಭಾಗದಲ್ಲಿ ಮಧ್ಯದಲ್ಲಿ ಪಂಚ್-ಹೋಲ್ ಕಟೌಟ್ ಕಂಡುಬರುತ್ತದೆ.
• ಇನ್ನು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಚಿಪ್ಸೆಟ್ ಅನ್ನು ಹೊಂದಿರುತ್ತದೆ ಅದು 256GB ಸಂಗ್ರಹಣೆ ಮತ್ತು 12GB RAM ಹೊಂದಿರಬಹುದು.
• OnePlus Nord CE 3 ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಬಹುದು. ಇದು 108 MP ಮುಖ್ಯ ಕ್ಯಾಮೆರಾ, 2FP ಮೈಕ್ರೋ ಕ್ಯಾಮೆರಾ ಮತ್ತು ಡೆಪ್ತ್ ಹೊಂದಿರಬಹುದು.
• OnePlus Nord CE 3 5,000 mAh ಬ್ಯಾಟರಿಯನ್ನು ಹೊಂದಿರಲಿದೆ. ಮತ್ತು ಇದು 67W ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ.
ಈ ಫೋನ್ ಅನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂದು ಕಂಪನಿಯು ಇನ್ನೂ ತಿಳಿಸಿಲ್ಲ. ಆದರೆ, OnePlus Nord CE 3 ಅನ್ನು 2023 ರ ಆರಂಭದಲ್ಲಿಯೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಊಹಿಸಲಾಗಿದೆ.
ಸದ್ಯ ಸ್ಮಾರ್ಟ್ ಫೋನ್ ಖರೀದಿಸುವ ಯೋಚನೆ ಇದ್ದಲ್ಲಿ ನೀವು ಈ ಮೇಲಿನ ಫೋನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ .