Rashmika Mandanna: ಫೇಮಸ್ ಕಂಪೆನಿಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾಗೆ ಕೊಕ್‌ | ಶುಕ್ರ ದೆಸೆ ಹೋಯ್ತು, ಶನಿ ದೆಸೆ ಸ್ಟಾರ್ಟ್‌

ಚಂದನವನದಲ್ಲಿ ಕಿರಿಕ್ ಪಾರ್ಟಿ ಮೂಲಕ ಮಿಂಚಿದ ಕಿರಿಕ್ ಚೆಲುವೆ  ರಶ್ಮಿಕಾ  ಅವರ  ಟೈಮ್  ಯಾಕೋ ಕೈ ಕೊಟ್ಟಂತೆ ಕಾಣುತ್ತಿದೆ. ನ್ಯಾಷನಲ್ ಕ್ರಶ್ ಆಗಿ ಎಲ್ಲೆಡೆ ಫುಲ್ ಹವಾ ಸೃಷ್ಟಿಸಿದ  ರಶ್ಮಿಕಾಇದೀಗ ವಿವಾದಗಳ ಸುಳಿಯಲ್ಲಿ  ಸಿಲುಕಿದ್ದಾರೆ.

 


ಇತ್ತೀಚೆಗಷ್ಟೇ ಕಿರಿಕ್ ಪಾರ್ಟಿ ಸಿನೆಮಾದ ಬಗ್ಗೆ ವ್ಯಂಗ್ಯ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾದ ಬಳಿಕ ರಶ್ಮಿಕಾ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಬ್ಯಾನ್ ಮಾಡುವ ಕುರಿತಾದ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿತ್ತು.  ಇದರ  ಬೆನ್ನಲ್ಲೇ ಪ್ರಮುಖ ಆಭರಣ ಕಂಪೆನಿಯೊಂದು ರಶ್ಮಿಕಾ ಅವರನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ಡಿಸ್ ಮಿಸ್ ಮಾಡಿ ಬಿಟ್ಟಿದ್ದಾರೆ. ಹಾಗಾದ್ರೆ, ಕಿರಿಕ್ ಚೆಲುವೆ ಸಿನಿಮಾ ವೃತ್ತಿ ಜೀವನದ ಮೇಲೂ ಹೊಡೆತ ಬೀಳಲಿದೆಯೇ ಎಂಬ ಬಗ್ಗೆ ಜನರ ನಡುವೆ ಅನುಮಾನ ದಟ್ಟವಾಗಿ ಕಾಡುತ್ತಿದೆ.


ಸ್ಯಾಂಡಲ್​ವುಡ್ ಚೆಲುವೆ ರಶ್ಮಿಕಾ ಮಂದಣ್ಣ ಪುಷ್ಪ ಚಿತ್ರದ ಮೂಲಕ ದೊಡ್ಡ ನೇಮ್ ಫೇಮ್  ಪಡೆದುಕೊಂಡ ಬಳಿಕ  ಬಾಲಿವುಡ್ ಸಿನಿಮಾಗಳಲ್ಲಿ ಚಾನ್ಸ್ ದೊರೆತು ಅಲ್ಲಿಯೂ ಫುಲ್ ಬ್ಯುಸಿ ಆಗಿದ್ದಾರೆ. ಸದ್ಯ ರಶ್ಮಿಕಾ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದು, ಎಲ್ಲರ ಕೋಪಕ್ಕೆ ತುತ್ತಾಗಿದ್ದಾರೆ.  ಕನ್ನಡದ ಕಿರಿಕ್ ಪಾರ್ಟಿ ಎಂಬ ಚಿತ್ರದ  ಮೂಲಕ ಸಿನಿಮಾ ವೃತ್ತಿ ಗೆ ಎಂಟ್ರಿ ಕೊಟ್ಟು ನಟನೆಯಲ್ಲಿ ಸೈ ಎನಿಸಿಕೊಂಡು ರಾತ್ರೋ ರಾತ್ರಿ ಫುಲ್ ಫೇಮಸ್ ಕೂಡ ಆಗಿದ್ದರು. ಈ ಬಳಿಕ ಗೀತಾ ಗೋವಿದಂ ಜೊತೆಗೆ ಅನೇಕ  ತೆಲುಗು ಸಿನಿಮಾದಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗಿ  ಮಿಂಚಿದ್ದಾರೆ.

ಸದ್ಯ ಬಾಲಿವುಡ್ ನಲ್ಲಿಯೂ ತನ್ನ ಛಾಪು ಮೂಡಿಸಲು  ಹರ ಸಾಹಸ ಪಡುತ್ತಿದ್ದಾರೆ.
ಅಷ್ಟಕ್ಕೂ ಎಲ್ಲರ ಕೆಂಗಣ್ಣಿಗೆ ಗುರಿಯಾಗಲೂ ಕಾರಣವೂ ಇದೆ. ಎಲ್ಲೆಡೆ ಸಂಚಲನ ಮೂಡಿಸಿದ್ದ ಕಾಂತಾರ ಸಿನೆಮಾದ ಬಗ್ಗೆ ರಶ್ಮಿಕಾ ಅವರನ್ನು ಕಾರ್ಯಕ್ರಮ ಒಂದರಲ್ಲಿ ಕೇಳಿದಾಗ, ರಶ್ಮಿಕಾ ಮಂದಣ್ಣ ಅವರು ಕಾಂತಾರವರನ್ನು ನಿಜವಾಗಿಯೂ ಇನ್ನೂ ನೋಡಿಲ್ಲ ಎಂದಿದ್ದಾರೆ .

ಅಷ್ಟೆ ಅಲ್ಲ,ತಮ್ಮ ಯಶಸ್ಸಿನ ಬಗ್ಗೆ ಮೊದಲ ಸಿನಿಮಾದ ಬಗ್ಗೆ ಕೇಳಿದಾಗ ಉತ್ತರ ನೀಡಲು ಕೂಡ ಹಿಂದು ಮುಂದು ನೋಡುತ್ತಿದ್ದ ನಟಿ ಕಿರಿಕ್ ಪಾರ್ಟಿ ಸಿನೆಮಾದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು. ಹೀಗಾಗಿ, ತಮ್ಮ ಮೊದಲ ಸಿನಿಮಾ ಬಗ್ಗೆ ವ್ಯಂಗ್ಯ ಮಾಡಿದ ನಟಿ ಬಗ್ಗೆ ಗಂಭೀರ ವಾದ ಕ್ರಮ ಕೈಗೊಳ್ಳಲು  ಕನ್ನಡ ಇಂಡಸ್ಟ್ರಿ ಅಣಿಯಾಗಿದೆ ಎನ್ನಲಾಗಿದೆ. ನಟಿಯ ನಡೆಗೆ ಜೊತೆಗೆ ತಾನು ನಡೆದು ಬಂದ ಹಾದಿಯ ಜೊತೆಗೆ ತನಗೆ ಅವಕಾಶ ಕೊಟ್ಟವರ ಬಗ್ಗೆಯೇ ಕೇವಲವಾಗಿ ಮಾತನಾಡಿದ್ದು ಕನ್ನಡಿಗರಿಗೆ ಕೋಪ ತರಿಸಿದ್ದು, ಆಕೆಗೆ ಮೊದಲ ಹಿಟ್ ನೀಡಿದ ಇಂಡಸ್ಟ್ರಿಯನ್ನು ಅವಮಾನಿಸಿದ್ದಾರೆ ಎನ್ನಲಾಗಿದೆ.

ಈ ವಿವಾದಗಳಿಂದ ರಶ್ಮಿಕಾ ಮಂದಣ್ಣ ಈಗ ಶನಿ ದೆಸೆ ಶುರುವಾಗಿದೆ ಎನ್ನಲಾಗಿದೆ. ಹಾಗಾಗಿ, ವಿವಾದಗಳಿಂದ ಅವಕಾಶವೊಂದು ಕೈ ಜಾರಿ ಬಿಟ್ಟಿದೆ. ಹೌದು!!! ಆಭರಣ ಮಳಿಗೆಯೊಂದು ರಶ್ಮಿಕಾ ಅವರನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿತ್ತು.  ಆದರೆ, ಇತ್ತೀಚೆಗೆ, ಪ್ರಮುಖ ಜ್ಯುವೆಲ್ಲರಿ ರೀಟೇಲ್ ಕಂಪನಿ ಖಜಾನಾ ಜ್ಯುವೆಲ್ಲರಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ರಶ್ಮಿಕಾ ಅವರನ್ನು ಏಕಾಏಕಿ  ವಜಾ ಮಾಡಲಾಗಿದೆ ಎನ್ನಲಾಗಿದೆ.


ಈ ಮೊದಲು ಅಕ್ಷಯ ತೃತೀಯದಿಂದ ಪ್ರಾರಂಭಿಸಿ, ರಶ್ಮಿಕಾ ಭಾರತದಾದ್ಯಂತ ಪ್ರಿಂಟ್, ಔಟ್​ಡೋರ್ ಮತ್ತು ಟಿವಿ ಜಾಹೀರಾತುಗಳ ಮೂಲಕ ಖಜಾನಾ ಆಭರಣದ ಸುಂದರ ವಿನ್ಯಾಸಗಳನ್ನು ಪ್ರಚಾರ ಮಾಡಲಾಗಿತ್ತು.  ಸದ್ಯ ನಟಿಯ ವಿವಾದಗಳಿಂದ ಕರ್ನಾಟಕ ಇಂಡಸ್ಟ್ರಿಯಲ್ಲಿ ಅವರಿಗೆ ಸಂಪೂರ್ಣ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತಮ್ಮ ರಿಟೇಲ್ ಕಂಪನಿಯ ಇಮೇಜ್ ಗೆ ಪೆಟ್ಟು ಬೀಳಲಿದೆ ಎಂದು ಭಾವಿಸಿ ಖಜಾನಾ ವ್ಯವಸ್ಥಾಪಕರು ನಟಿಯನ್ನು ಅಂಬಾಸಿಡರ್ ಸ್ಥಾನದಿಂದ ವಜಾಗೊಳಿಸಿದ್ದಾರೆ ಎನ್ನಲಾಗುತ್ತದೆ

ಇದೀಗ, ರಶ್ಮಿಕಾ ಜಾಗಕ್ಕೆ  ತ್ರಿಷಾ ಅವರನ್ನು ಕರೆತರಲಾಗಿದೆ ಎಂಬ ಸುದ್ದಿ ಹಬ್ಬಿದ್ದು, ನ್ಯಾಷನಲ್ ಕ್ರಶ್  ರಶ್ಮಿಕಾ ಬದಲಿಗೆ ತ್ರಿಷಾ ಅವರನ್ನು ನೇಮಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.


ಕೆಲವು ಅನಿವಾರ್ಯ ಕಾರಣಗಳಿಂದ ರಶ್ಮಿಕಾ ಬದಲಿಗೆ ತ್ರಿಷಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿದ್ದು ಎಂದು ಜ್ಯುವೆಲ್ಲರಿ ಅಧ್ಯಕ್ಷ ಕಿಶೋರ್ ಕುಮಾರ್ ಜೈನ್ ಹೇಳಿದ್ದಾರೆ.  ಏನೇ ಆದರೂ…ನಟಿ ವಿವಾದಗಳ ಸುಳಿಯಲ್ಲಿ ಸಿಲುಕುತ್ತಾ ಹೋದಂತೆ ಅವಕಾಶ ಕೈ ಜಾರಿ ಹೋಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

Leave A Reply

Your email address will not be published.