IAF AFCAT Recruitment 2022 | ಭಾರತೀಯ ವಾಯುಪಡೆಯಲ್ಲಿ ಉದ್ಯೋಗ | ಒಟ್ಟು ಹುದ್ದೆ-258, ಅರ್ಜಿ ಸಲ್ಲಿಸಲು ಕೊನೆಯ ದಿನ-ಡಿ.30

ಭಾರತೀಯ ವಾಯುಪಡೆಯಲ್ಲಿ (IAF) ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶವಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಭಾರತೀಯ ವಾಯುಪಡೆಯು ಫ್ಲೈಯಿಂಗ್ ಬ್ರಾಂಚ್‌ನಲ್ಲಿ ಆಫೀಸರ್ (IAF AFCAT), ಗ್ರೌಂಡ್ ಡ್ಯೂಟಿ ಮತ್ತು ಶಿಕ್ಷಣ ಶಾಖೆಯಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ (SSC) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಜೊತೆಗೆ ಬೌತಶಾಸ್ತ್ರ ಶೇ.60 ರಷ್ಟು, ಹಾಗೂ ಇತರೆ ವಿಷಯಗಳಲ್ಲಿ ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕು.

 

ಒಟ್ಟು ಹುದ್ದೆಗಳ ಸಂಖ್ಯೆ- 258

ಅರ್ಹತಾ ಮಾನದಂಡಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಪಾಸ್ ಆಗಿರಬೇಕು. ಜೊತೆಗೆ ಬೌತಶಾಸ್ತ್ರ ಶೇ.60 ರಷ್ಟು, ಹಾಗೂ ಇತರೆ ವಿಷಯಗಳಲ್ಲಿ ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕು.

ವಯೋಮಿತಿ:
ಫ್ಲೈಯಿಂಗ್ ಬ್ರಾಂಚ್ – 20 ರಿಂದ 24 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಗ್ರೌಂಡ್ ಡ್ಯೂಟಿ (ತಾಂತ್ರಿಕ/ತಾಂತ್ರಿಕೇತರ) ಶಾಖೆಗಳು – 20 ರಿಂದ 26 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:
AFCAT ಹುದ್ದೆಗಳಿಗೆ- Rs.250/- ರೂ.
NCC- ಯಾವುದೇ ಶುಲ್ಕವಿಲ್ಲ

ಪ್ರಕ್ರಿಯೆ:
AFCAT ಲಿಖಿತ ಪರೀಕ್ಷೆಯ ನಂತರ ಅಧಿಕಾರಿಗಳ ಗುಪ್ತಚರ ರೇಟಿಂಗ್ ಪರೀಕ್ಷೆ ಮತ್ತು ಚಿತ್ರ ಗ್ರಹಿಕೆ ಮತ್ತು ಚರ್ಚಾ ಪರೀಕ್ಷೆ, ಮಾನಸಿಕ ಪರೀಕ್ಷೆ ಮತ್ತು ಗ್ರೂಪ್ ಟೆಸ್ಟ್​/ಸಂದರ್ಶನ ಸೇರಿದಂತೆ ಮೂರು ಸುತ್ತುಗಳಿರುತ್ತವೆ. ಈ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್​ನಲ್ಲಿ ಅಪ್ಲಿಕೇಶನ್‌ ಸಲ್ಲಿಸಲು ಪ್ರಾರಂಭ ದಿನಾಂಕ – 1 ಡಿಸೆಂಬರ್, 2022
ಆನ್‌ಲೈನ್ ಅಪ್ಲಿಕೇಶನ್‌ ಸಲ್ಲಿಸಲು ಕೊನೆಯ ದಿನಾಂಕ – 30 ಡಿಸೆಂಬರ್, 2022

ಅಧಿಕೃತ ವೆಬ್‌ಸೈಟ್: afcat.cdac.in

Leave A Reply

Your email address will not be published.