ಕೇಶರಾಶಿ ಉದುರುವ ಸಮಸ್ಯೆಯಿಂದ ಮುಕ್ತಿ ಬೇಕೇ | ಹಾಗಿದ್ರೆ ಬಳಸಿ ಸಿಂಪಲ್ ಆಗಿ ತಯಾರಾಗೋ ಈ ಹೇರ್ ಟಾನಿಕ್
ಕೇಶರಾಶಿಯನ್ನು ಸುಂದರವಾಗಿ ಇರಿಸಿಕೊಳ್ಳಲು ಯಾರು ತಾನೇ ಇಷ್ಟ ಪಡೋದಿಲ್ಲ ಹೇಳಿ. ಹೀಗಾಗಿ, ಅದರ ಹೊಳಪು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಕೂಡ ಪ್ರಯತ್ನಿಸೋದು ಕಾಮನ್. ಆದ್ರೆ, ಅದೆಷ್ಟೇ ಆರೈಕೆ ಮಾಡಿದರು ಕೂದಲು ಉದುರುವ ಸಮಸ್ಯೆ ಮಾತ್ರ ನಿವಾರಣೆ ಆಗೋದೇ ಇಲ್ಲ.
ವಿಷ್ಯ ಏನಪ್ಪಾ ಅಂದ್ರೆ, ನಾವು ಯಾವ ರೀತಿಯ ಔಷಧಿ ಬಳಸುತ್ತೇವೆ ಅದರ ಮೇಲೆ ನಿಂತಿರುತ್ತದೆ. ಹೌದು. ಕೂದಲ ಆರೈಕೆಗೆ ಉತ್ತಮ ಹೇರ್ ಟಾನಿಕ್ ಬಳಸಿದರೆ ಸಮಸ್ಯೆ ನಿಲ್ಲುತ್ತದೆ. ದಪ್ಪ ಮತ್ತು ಹೊಳೆಯುವ ಕೂದಲು ಹೊಂದಲು ನೀವು ಸಹ ಮನೆಯಲ್ಲೇ ಹೇರ್ ಟಾನಿಕ್ ತಯಾರಿಸಿ ಬಳಕೆ ಮಾಡಬಹುದು. ಇದರಿಂದ ಹದಿನೈದು ದಿನಗಳಲ್ಲಿ ಕೂದಲು ಉದುರುವುದು ನಿಲ್ಲುವ ಜೊತೆಗೆ ಫಲಿತಾಂಶ ಸಿಗುತ್ತದೆ. ಹೇರ್ ಟಾನಿಕ್ ಬಳಸುವುದರಿಂದ ಡ್ಯಾಂಡ್ರಫ್ ಮತ್ತು ನೆತ್ತಿಯ ತುರಿಕೆ ಕಡಿಮೆ ಆಗುತ್ತದೆ. ಹಾಗಿದ್ರೆ ಬನ್ನಿ ಹೇಗದನ್ನ ನಿವಾರಣೆ ಮಾಡೋದೆಂದು ನೋಡೋಣ.
ಮೆಂತ್ಯ ಮತ್ತು ಬೆಟ್ಟದ ನೆಲ್ಲಿಕಾಯಿ ಟಾನಿಕ್ ತಯಾರಿಸಲು 20 ಗ್ರಾಂ ಒಣಗಿದ ಬೆಟ್ಟದ ನೆಲ್ಲಿಕಾಯಿ, 3 ಟೀ ಚಮಚ ಮೆಂತ್ಯ ಬೀಜ ಮತ್ತು 10 ಗ್ರಾಂ ಶಿಕಾಕಾಯಿಯನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಎರಡು ಲೋಟ ನೀರು ಹಾಕಿ ರಾತ್ರಿಯಿಡಿ ಇಡಿ. ಬೆಳಿಗ್ಗೆ ಕಡಿಮೆ ಉರಿಯಲ್ಲಿ ಕುದಿಸಿ. ನೀರು ಅರ್ಧ ಉಳಿದಿರುವಾಗ ಅದನ್ನು ಫಿಲ್ಟರ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
ನಂತರ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ, ಶಾಂಪೂ ಮಾಡಿದ ನಂತರ ಮೆಂತ್ಯ-ಆಮ್ಲಾ ಟಾನಿಕ್ ಅನ್ನು ಕೂದಲಿನ ಬೇರುಗಳಿಗೆ ಸಿಂಪಡಿಸಿ. ನಂತರ ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಇದನ್ನು ಎಣ್ಣೆ ಮಸಾಜ್ ಜೊತೆ ಬಳಸಬಹುದು.
ಮೆಂತ್ಯ ಮತ್ತು ಆಮ್ಲಾ ಟಾನಿಕ್, ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಕೂದಲಿನ ಸಮಸ್ಯೆ ನಿವಾರಿಸುತ್ತದೆ. ಮೆಂತ್ಯ ಬೀಜಗಳು ಕೂದಲಿನ ಬೆಳವಣಿಗೆ ಉತ್ತೇಜಿಸಲು ಮತ್ತು ಕೂದಲನ್ನು ಬಲಪಡಿಸಲು ಸಹಕಾರಿ. ಶಿಕಾಕೈ ಉತ್ಕರ್ಷಣ ನಿರೋಧಕ. ಶಿಕಾಕೈ ಕೂದಲಿನ ತುರಿಕೆ ನಿವಾರಣೆಗೆ ಹಾಗೂ ತಲೆಹೊಟ್ಟು ನಿವಾರಣೆಗೆ ಸಹಕಾರಿ.
ಈರುಳ್ಳಿ ಮತ್ತು ಕರಿಬೇವಿನ ಟಾನಿಕ್:
ಈರುಳ್ಳಿ, ಕರಿಬೇವಿನ ಎಲೆ ಟಾನಿಕ್ ಮಾಡಲು, ಒಂದು ಪಾತ್ರೆಯಲ್ಲಿ 2 ಗ್ಲಾಸ್ ನೀರನ್ನು ಬಿಸಿ ಮಾಡಿ. ಈಗ ಎರಡು ಮಧ್ಯಮ ಗಾತ್ರದ ಈರುಳ್ಳಿ ಕತ್ತರಿಸಿ ಅದರಲ್ಲಿ ಹಾಕಿ. 3 ಚಮಚ ಮೆಂತ್ಯ ಬೀಜಗಳು, 3 ಚಮಚ ಫೆನ್ನೆಲ್ ಬೀಜಗಳು ಮತ್ತು ಎರಡು ಹಿಡಿ ಕರಿಬೇವಿನ ಎಲೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬೇಯಿಸಿ. ನೀರು ಅರ್ಧಕ್ಕೆ ಬಂದಾಗ ಫಿಲ್ಟರ್ ಮಾಡಿ ಮತ್ತು ತಣ್ಣಗಾದ ನಂತರ ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ.
ಈರುಳ್ಳಿ, ಕರಿಬೇವಿನ ಎಲೆ ಟಾನಿಕ್ ಅನ್ನು ಶಾಂಪೂ ಮಾಡಿದ ನಂತರ ಕೂದಲ ಬೇರುಗಳಿಗೆ ಸಿಂಪಡಿಸಬಹುದು. ಇದನ್ನು ಸ್ಪ್ರೇ ಮಾಡಿ ಚೆನ್ನಾಗಿ ಮಸಾಜ್ ಮಾಡಿ. ಮತ್ತು ಒಂದು ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಎಣ್ಣೆ ಮಸಾಜ್ನೊಂದಿಗೆ ಬಳಸಬಹುದು. ಟಾನಿಕ್ ನಲ್ಲಿ ಈರುಳ್ಳಿ ರಸ ಕೂದಲು ಉದುರುವಿಕೆ ತಡೆಯುತ್ತದೆ. ಕೂದಲಿನ ಇತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಕೂದಲಿನ ಬೆಳವಣಿಗೆ ಹೆಚ್ಚಿಸುತ್ತದೆ. ಕೂದಲು ಕಿರುಚೀಲಗಳಿಗೆ ಗಂಧಕವೂ ಅಗತ್ಯ. ಈರುಳ್ಳಿ ರಸದಲ್ಲಿ ಆಂಟಿಆಕ್ಸಿಡೆಂಟ್ಗಳು ಇವೆ. ಇದು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಕರಿಬೇವಿನ ಎಲೆಗಳು ಕೂದಲಿಗೆ ಔಷಧಿ. ಕೂದಲು ಉದುರುವಿಕೆ ತಡೆಯುತ್ತದೆ. ಕೂದಲನ್ನು ಬಲಪಡಿಸುತ್ತದೆ.