ನಿಮಗಿದು ಗೊತ್ತೇ ? ವೈನ್ ಬಾಟಲ್ 500 ಎಂಎಲ್ ಬಾಟಲ್ ದೊರೆಯದೆ, 750 ಎಂಎಲ್ ಬಾಟಲ್ ದೊರೆಯಲು ಕಾರಣವೇನೆಂದು?
ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ ಎಂಟ್ರಿ ಕೊಡದೆ ಇದ್ದರೆ ಮನಕ್ಕೆ ಸಮಾಧಾನವೇ ಇರುವುದಿಲ್ಲ!! ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!! ಅದೇ ಮದ್ಯದ ಬಾಟಲಿ ಗಾತ್ರ ಎಷ್ಟಿರುತ್ತೆ ?? ಅದಕ್ಕೆ ಕಾರಣ ಏನು ಅಂತ ಯಾವತ್ತಾದರೂ ಯೋಚನೆ ಮಾಡಿದ್ದೀರಾ?? ಖಂಡಿತಾ ಇರಲಿಕ್ಕಿಲ್ಲ!!
ವೈನ್ ಹೆಸರು ಕೇಳ್ತಿದ ಕೂಡಲೇ ಹೆಚ್ಚಿನವರು ಕೆಲವರು ನೈಟ್ ಮೂಡ್ ಗೆ ಹೋಗಿ ಬಿಡ್ತಾರೆ!! ಮತ್ತೆ ಕೆಲವರು ಪಾರ್ಟಿ ಮೂಡ್ ನ ಡ್ರೀಮ್ ಅಲ್ಲೇ ಇರಬಹುದು. ಇತ್ತೀಚಿನ ದಿನಗಳಲ್ಲಿ ಆಲ್ಕೋಹಾಲ್ ಸೇವನೆ ಕಾಮನ್ ಆಗಿಬಿಟ್ಟಿದೆ. . ಮಹಿಳೆಯರಿಂದ ಹಿಡಿದು ಮಕ್ಕಳು ಕೂಡ ವೈನ್ ಸವಿ ನೋಡುವುದರಲ್ಲಿ ಗಂಡಸರಿಗೆ ಸಾಥ್ ನೀಡುತ್ತಿದ್ದಾರೆ. ಸಾಮಾನ್ಯವಾಗಿ ವೈನ್ ಹಳೆಯದಾದಷ್ಟು ರುಚಿ ಹೆಚ್ಚಾಗಿರುತ್ತದೆ. ವೈನ್ ನಲ್ಲಿ ಅಡಕವಾಗಿರುವ ಕೆಮಿಕಲ್ ನಿಂದ ವೈನ್ ರುಚಿ ಹೆಚ್ಚಾಗುತ್ತಾ ಹೋಗುತ್ತವೆ. ಇದೇ ಕಾರಣಕ್ಕೆ ಹಳೆ ವೈನ್ ಗೆ ಬೆಲೆ ಹೆಚ್ಚಿರುತ್ತದೆ.
ಈಗ ನಾವು ಅಸಲಿ ವಿಚಾರಕ್ಕೆ ಬರೋಣ!! ನಾವು ವೈನ್ ಬಾಟಲಿ ಬಗ್ಗೆ ನಿಮಗೆಷ್ಟು ಗೊತ್ತು!!
ನೀವು ಯಾವುದೇ ವೈನ್ (Wine ) ಶಾಪಿಗೆ ಹೋಗಿ ವೈನ್ ಬಾಟಲಿ (Bottle) ಕೇಳಿದರೂ ಕೂಡ, ನಿಮಗೆ 500 ಮಿಲಿ ಲೀಟರ್ ಬಾಟಲಿ ಸಿಗಲ್ಲ ಜೊತೆಗೆ ಒಂದು ಲೀಟರ್ ಬಾಟಲಿಯಲ್ಲೂ ಮದ್ಯ (Alcohol) ಸಿಗಲ್ಲ!! ನಿಮಗೆ ಬಾರ್ ಮಾಲೀಕ 750 ಮಿಲಿ ಲೀಟರ್ ಬಾಟಲಿಯೆ ಕೊಡೋದು!! ಕೆಲವರು ಈ ವಿಚಾರ ಗಮನಿಸಿರಬಹುದು ಮತ್ತೆ ಕೆಲವರು ವೈನ್ ಸಿಕ್ಕಿದ ಖುಷಿಯಲ್ಲಿ ಬಾಟಲಿ ಜೊತೆಗೆ ಮನೆ ಕಡೆ ಸವಾರಿ ಮಾಡಿರುತ್ತಾರೆ.
ಆರಂಭದಲ್ಲಿ ಮದ್ಯವನ್ನು ಬ್ಯಾರಲ್ (Barrel) ನಲ್ಲಿ ಇರಿಸುವ ಕ್ರಮ 18ನೇ ಶತಮಾನ ಶುರುವಾಗಿದ್ದು ಜನರು ಬದಲಾದಂತೆ ಬದುಕುವ ಶೈಲಿ ಬದಲಾದಂತೆ ಮದ್ಯವನ್ನು ಇಡುವ ವ್ಯವಸ್ಥೆ ಕೂಡ ಬದಲಾಗಿದೆ. ಮದ್ಯವನ್ನು ಇಡಲು ಗಾಜಿನ ಬಾಟಲಗಿಂತ ಯೋಗ್ಯವಾದದ್ದು ಮತ್ತೊಂದು ಇಲ್ಲ ಎಂಬ ವಿಚಾರ ಕಂಡುಕೊಂಡರು.. ಆ ದಿನಗಳಲ್ಲಿ ಬಾಟಲಿಗಳನ್ನು ತಯಾರಿಸಲು ‘ಗ್ಲಾಸ್ ಬ್ಲೋಯಿಂಗ್’ ತಂತ್ರವನ್ನು ಬಳಸಲಾಗುತ್ತಿತ್ತು .
ಗ್ಲಾಸ್ ಬ್ಲೋಯಿಂಗ್ ತಂತ್ರದಲ್ಲಿ, ಟೊಳ್ಳಾದ ಲೋಹದ ಪೈಪ್‌ನ ಒಂದು ತುದಿಗೆ ಗಾಜನ್ನು ಅಳವಡಿಸಲಾಗುತ್ತಿತ್ತು. ಈ ಬಳಿಕ, ಅದನ್ನು 2000 ಡಿಗ್ರಿಗಿಂತ ಹೆಚ್ಚು ಬಿಸಿಯಲ್ಲಿ ಆಕಾರ ನೀಡಲಾಗುತ್ತಿತ್ತು. ಬಿಸಿ ಗಾಜು, ಪೈಪ್ ನ ಎಲ್ಲ ಕಡೆ ಸುತ್ತಿಕೊಂಡ ಬಳಿಕ ಸ್ಟೀಲ್ ಪ್ಲೇಟ್ ನಲ್ಲಿ ಉರುಳಿಸಿ ಅದಕ್ಕೆ ಆಕಾರ ನೀಡಲಾಗುತ್ತಿತ್ತು. ಈ ಬಳಿಕ, ಟೊಳ್ಳಾದ ಪೈಪ್ ಮೂಲಕ ಗಾಳಿ ಹಾಕುವ ಮೂಲಕ ಗಾಜಿನೊಳಗೆ ಗಾಳಿಯನ್ನು ತುಂಬಿಸಿ, ಬಾಟಲಿಯ ಗಾತ್ರವನ್ನು ಹೆಚ್ಚು ಮಾಡಲಾಗುತ್ತಿತ್ತು.
ಈಗಲೂ ಕೆಲ ಕಂಪನಿಗಳು ಗ್ಲಾಸ್ ಬೋಯಿಂಗ್ ವಿಧಾನವನ್ನೇ ಬಳಸುತ್ತಿವೆ. ಬೇರೆ ಬೇರೆ ಡಿಸೈನ್ ಗೆ ಬೇರೆ ಬೇರೆ ತಂತ್ರಗಳನ್ನು ಬಳಸಿ, ಬೋಯಿಂಗ್ ವಿಧಾನದಲ್ಲಿಯೇ ಬಾಟಲಿ ತಯಾರಿಸುತ್ತಿವೆ.
ಸಾಮಾನ್ಯ ಮನುಷ್ಯನ ಶ್ವಾಸಕೋಶದಲ್ಲಿ ಕೇವಲ 700 ಮಿಲಿಯಿಂದ 800 ಮಿಲಿ ಗಾಳಿಯನ್ನು ಹೊರಗೆ ಬಿಡುವ ಸಾಮರ್ಥ್ಯವಿರುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ 750 ಮಿಲಿ ಲೀಟರನ್ನು ಅತ್ಯುತ್ತಮ ಗಾತ್ರವೆಂದು ಪರಿಗಣಿಸಿಲಾಗಿ, ಹಾಗಾಗಿಯೇ ಆಗಿನ ವೈನ್ ಬಾಟಲಿಗಳು 750 ಮಿಲಿ ಲೀಟರ್ ಗಾತ್ರದಲ್ಲಿ ಇರುತ್ತಿದ್ದವು ಎನ್ನಲಾಗಿದೆ.
ಆಗ ಅನ್ಯ ಮಾರ್ಗವಿಲ್ಲದೆ ಸಾಮರ್ಥ್ಯಕ್ಕೆ ತಕ್ಕಂತೆ ಬಾಟಲಿ ತಯಾರಿಸಲಾಗುತ್ತಿತ್ತು. ಈಗ ಮಷಿನ್ ನಲ್ಲಿ ಬಾಟಲಿ ತಯಾರಾಗುತ್ತದೆ. ಈಗ ಕಂಪನಿಗಳು ವಿಭಿನ್ನ ಆಕಾರವನ್ನು ಬಾಟಲಿಗೆ ನೀಡಿದರು ಕೂಡ 750 ಮಿಲಿ ಲೀಟರ್ ಮಾತ್ರ ಬದಲಾಗಿಲ್ಲ. ಹೊಸ ಹೊಸ ಆಕಾರ ನೀಡಿದ್ರೂ ಗಾತ್ರವನ್ನು ಹಿಂದಿನಂತೆ ಕಾಯ್ದುಕೊಳ್ಳಲು ಎಲ್ಲ ಕಂಪನಿಗಳು ಮುಂದಾಗಿವೆ. ಇದಲ್ಲದೆ ಅಮೆರಿಕಾದಲ್ಲಿ ಬಾಟಲಿಗಳ ಗಾತ್ರ 750 ಎಂಎಲ್ ಇರಬೇಕೆಂದು ನಿಯಮ ಕೂಡ ಮಾಡಲಾಗಿತ್ತು. ಅದನ್ನು ಬೇರೆ ದೇಶದವರು ಕೂಡ ಅನುಕರಣೆ ಮಾಡಿದ್ದಾರೆ. ಇದೇ ಕಾರಣಕ್ಕೆ ಎಲ್ಲ ಮದ್ಯದ ಬಾಟಲಿಗಳ ಗಾತ್ರ 750 ಎಂಎಲ್ ನಲ್ಲಿಯೇ ದೊರೆಯುತ್ತವೆ.