BBK9 : ಹೆಂಡ್ತಿ ಕಾಲಿಗೆ ಬಿದ್ದು ಆಶೀರ್ವಾದ ಕೇಳಿದ ರೂಪೇಶ್‌ ರಾಜಣ್ಣ | ನಿಮ್ಮ ಮೇಲೆ ಗೌರವ ಇನ್ನಷ್ಟು ಹೆಚ್ಚಾಯ್ತು ಎಂದ ಅಭಿಮಾನಿಗಳು

ಕನ್ನಡಿಗರಲ್ಲಿ ಮನೆ ಮಾಡಿರುವ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗಾಗಲೇ ನಮಗೆ ಗೊತ್ತೇ ಇದೆ. ಬಿಗ್ ಬಾಸ್ ನ ಸ್ಪರ್ಧಿಗಳಲ್ಲಿ ದಿನೇ ದಿನೇ ಕಳೆದ ಹಾಗೆಯೇ ಕಾಂಪಿಟೇಶನ್​ ಹೆಚ್ಚಾಗ್ತನೇ ಇದೆ. ಈಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದಾರೆ . ಪ್ರವೀಣರು ಅಂದ್ರೆ ಈಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ನವೀನರಾಗಿ ಈ ಬಾರಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇದ್ದಾರೆ. ಅವರು ಸಹ ಮೊದಲನೇ ವಾರಕ್ಕೆ ಹೋಗ್ತಾರೆ ಎಂದು ಹೇಳಲಾಗ್ತಿತ್ತು. ಆದ್ರೆ 10ನೇ ವಾರದಲ್ಲೂ ಇದ್ದಾರೆ.

 

ಕನ್ನಡ ಹೋರಾಟಗಾರರಾಗಿರುವ ರೂಪೇಶ್ ರಾಜಣ್ಣ ಸದಾ ಗಲಾಟೆ ಮಾಡುತ್ತಲೇ ಇರುತ್ತಾರೆ. ನ್ಯಾಯಕ್ಕಾಗಿ ನಾನು ಹೋರಾಡಲು ಸದಾ ಮುಂದೆ ಇರುತ್ತೇನೆ ಎಂದು ಹೇಳುತ್ತಾರೆ. ಮನೆಯ ಹಲವು ಸದಸ್ಯರ ನಡುವೆ ಹಲವು ಬಾರಿ ಜಗಳ ಆಗಿದೆ. ಆದ್ರೂ ಮುಗ್ಧರು ಈ ರಾಜಣ್ಣ. ಜಗಳ ಎಲ್ಲಾ ಮುಗಿದ ಮೇಲೆ ಅವರೇ ಹೋಗಿ ಮಾತನಾಡಿಸುತ್ತಾರೆ ಇದು ಅವರ ವಿಶೇಷತೆ.

ಬಿಗ್ ಶೋ ಶುರುವಾಗಿ 9 ವಾರ ಕಳೆದಿದೆ. 10ನೇ ವಾರ ನಡೆಯುತ್ತಿದೆ. ಎಲ್ಲರೂ ತಮ್ಮ ಮನೆಯವರನ್ನು ಮಿಸ್ ಮಾಡಿಕೊಂಡಿದ್ದಾರೆ. ಅದಕ್ಕೆ ಬಿಗ್ ಬಾಸ್ ಮನೆಯವರನ್ನು ಕರೆಸಿದ್ದಾರೆ. ಮನೆಯವರ ಜೊತೆ ಮಾತನಾಡಬೇಕು ಎಂಬ ಸ್ಪರ್ಧಿಗಳ ಬಹುದಿನದ ಹಂಬಲವನ್ನು ಬಿಗ್ ಬಾಸ್ ನೆರವೇರಿಸಿದ್ದಾರೆ.

ಸದ್ಯ ಪತ್ನಿಗಾಗಿ ಕಾದ ರೂಪೇಶ್ ರಾಜಣ್ಣ ಅವರು ತಮ್ಮ ಮನೆಯವರು ಬರುತ್ತಾರೆ ಎಂದು ತುಂಬಾ ಆಸೆಯಲ್ಲಿ ಇದ್ದರು. ಆದರೆ ಮನೆಯ ಲೈಟ್ ಆಫ್ ಆದ್ರೂ ಬರಲಿಲ್ಲ. ನಂತರ ಬೇಸರ ಮಾಡಿಕೊಂಡು ಮಲಗಿ ಬಿಟ್ರು. ಆದರೆ ಎಲ್ಲರೂ ಮಲಗಿದ ಮೇಲೆ ರೂಪೇಶ್ ರಾಜಣ್ಣ ಪತ್ನಿ ಬರುತ್ತಾರೆ. ರಾಜಣ್ಣ ಖುಷಿಯಿಂದ ಕುಣಿದಾಡ್ತಾರೆ.

ವಿಶೇಷ ಎಂದರೆ ಹೆಂಡ್ತಿಯನ್ನು ನೋಡ್ತಿದ್ದಂತೆ ರೂಪೇಶ್ ರಾಜಣ್ಣ ತಾವೇ ಪತ್ನಿ ಕಾಲಿಗೆ ಬಿದ್ದಿದ್ದಾರೆ. ಭಾವುಕರಾಗಿ ಅವರ ಆಶೀರ್ವಾದ ಕೇಳಿದ್ದಾರೆ. ಅವರು ಹೆಂಡ್ತಿ ಈ ರೀತಿ ಮಾಡಬೇಡಿ, ಮೇಲೆ ಏಳಿ ಎಂದಿದ್ದಾರೆ. ನಂತರ ಭಾವುಕರಾಗಿದ್ದಾರೆ. ತುಂಬಾ ದಿನ ಆದ ಮೇಲೆ ನೋಡಿದ್ದು ಖುಷಿಯಾಯ್ತು ಎಂದಿದ್ದಾರೆ.

ಅಲ್ಲದೇ ಈ ವಾರ 10 ಜನರಲ್ಲಿ ರೂಪೇಶ್ ರಾಜಣ್ಣ ಮಾತ್ರ ನಾಮಿನೇಟ್ ಆಗಿಲ್ಲ. ಉಳಿದ ಸದಸ್ಯರೆಲ್ಲಾ ನಾಮಿನೇಟ್ ಆಗಿದ್ದಾರೆ. ರೂಪೇಶ್ ರಾಜಣ್ಣ ಗೆಲ್ಲಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ ಇದ್ದಾರೆ.

ಈಗಾಗಲೇ ರೂಪೇಶ್ ರಾಜಣ್ಣ ತಮ್ಮ ನೇರ ನುಡಿ, ಮಾತಿನಿಂದ ಕನ್ನಡ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಪ್ರತಿ ವಾರ ನಾಮಿನೇಟ್ ಆದಾಗಲೂ ಸೇವ್ ಆಗ್ತಾರೆ. ಅಲ್ಲದೇ ರೂಪೇಶ್ ರಾಜಣ್ಣ ನೀವು ತುಂಬಾ ಇಷ್ಟ ಎಂದು ಕಾಮೆಂಟ್ ಮಾಡಿರುವುದಲ್ಲದೆ. ಅಲ್ಲದೇ ಹೆಂಡ್ತಿ ಕಾಲಿಗೆ ಬಿದ್ದದ್ದನ್ನು ನೋಡಿ ನಿಮ್ಮ ಮೇಲೆ ಇನ್ನೂ ಗೌರವ ಹೆಚ್ಚಾಯ್ತು ಎಂದು ಜನರು ಅಭಿಮಾನ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.