ರಾಜ್ಯ ರಾಜಧಾನಿಯಲ್ಲಿ ಮಹಿಳೆಯೋರ್ವಳ ಮೇಲೆ ಡ್ರಾಪ್ ಕೊಡೋ ನೆಪದಲ್ಲಿ ಚಾಲಕನಿಂದಲೇ ಅತ್ಯಾಚಾರ | ಕಾಮಿ ಅರೆಸ್ಟ್!

ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರಕರಣ ಹೆಚ್ಚಳವಾಗುತ್ತಿದೆ. ಈ ಹಿಂದೆ ಬೆಂಗಳೂರಿನಲ್ಲಿ ಕೇರಳ ಮೂಲದ ಯುವತಿಯ ಮೇಲೆ ರ್ಯಾಪಿಡೋ ಚಾಲಕ ಮತ್ತು ಆತನ ಗೆಳೆಯನಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದೊಂದೇ ಅಲ್ಲದೆ ಬಿಹಾರದ ವಿದ್ಯಾರ್ಥಿನಿಯ ಮೇಲೆ ಕೂಡ ಆಕೆಯ ಸಹಪಾಠಿಗಳಿಂದಲೇ ಅತ್ಯಾಚಾರ ನಡೆದಿತ್ತು. ಹೇಳುತ್ತಾ ಹೋದರೆ ಮುಗಿಯದಷ್ಟು ಪ್ರಕರಣಗಳೇ ಇವೆ. ಇದೀಗ ಅಂತಹದ್ದೆ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ.

 

ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಬೆಂಗಳೂರಿನ ಜನತೆ ಬೆಚ್ಚಿಬೀಳುವಂತಾಗಿದೆ. ಈ ಬಾರಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯೊಬ್ಬರನ್ನು ಶಾಲಾ ಬಸ್ಸಿಗೆ ಹತ್ತಿಸಿಕೊಂಡು ಚಾಲಕ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ.

ಮಹಿಳೆಯು ರಸ್ತೆಯ ಬದಿಯಲ್ಲಿ ನಿಂತುಕೊಂಡು ಮನೆಗೆ ಹೋಗಲು ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ಶಾಲಾ ಬಸ್ ಒಂದು ಆಕೆಯ ಮುಂದೆ ಬಂದು ನಿಂತಿದೆ. ಡ್ರಾಪ್ ಕೊಡುವುದಾಗಿ ಹೇಳಿ ಶಾಲಾ ಬಸ್​ಗೆ ಚಾಲಕ ಮಹಿಳೆಯನ್ನು ಹತ್ತಿಸಿಕೊಂಡಿದ್ದಾನೆ. ಸ್ವಲ್ಪ ದೂರ ಸಾಗಿದ ನಂತರ ಶಾಲಾ ಬಸ್ ಅನ್ನು ನಾಗರಬಾವಿ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಖಾಸಗಿ ಶಾಲಾ ಬಸ್ ಚಾಲಕ ಶಿವಕುಮಾರ್ ಎಂಬ ಹೆಣ್ಣುಬಾಕ ಈ ಹೀನಾಯ ಕೃತ್ಯವೆಸಗಿದ್ದಾನೆ. ಅತ್ಯಾಚಾರವೆಸಗಿ ಮಹಿಳೆಗೆ ಬೆದರಿಸಿ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ವೇಳೆ ಮಹಿಳೆ ಬಸ್​ನ ಫೋಟೋ ಕ್ಲಿಕ್ ಮಾಡಿದ್ದಾಳೆ.

ನಂತರ ಸಂತ್ರಸ್ತ ಮಹಿಳೆ ಮನೆಗೆ ಬಂದು ಮಗನಿಗೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ಬಳಿಕ ಪೋಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ನಾಗರಬಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡ ಚಂದ್ರಲೇಔಟ್​ ಪೊಲೀಸರು ಆರೋಪಿ ಚಾಲಕ ಶಿವಕುಮಾರ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಆರೋಪಿ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದಾನೆ.

Leave A Reply

Your email address will not be published.