ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿಯರು
ಕಾಲ ಬದಲಾದಂತೆ ಹೆಚ್ಚಿನವರು ಹಿಂದೂ ಸಂಸ್ಕೃತಿಯ ಕಡೆಗೆ ಅಸಡ್ಡೆ ತೋರುವ ಜೊತೆಗೆ ಮುಸ್ಲಿಂ ಸಮುದಾಯದ ಕಡೆಗೆ ವಾಲುತ್ತಿದ್ದು, ಅದರಲ್ಲೂ ಕೂಡ ಮತಾಂತರ ಪ್ರಕ್ರಿಯೆ ತೆರೆ ಮರೆಯಲ್ಲಿ ನಡೆಯುತ್ತಿರುವ ನಡುವೆ ಮುಸ್ಲಿಂ ಸಮುದಾಯದ ಯುವತಿಯರು ಹಿಂದೂ ಸಂಪ್ರದಾಯದ ಅನುಸಾರ ಮದುವೆಯಾಗಿರುವ ವಿಶೇಷ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಇಬ್ಬರು ಮುಸ್ಲಿಂ ಯುವತಿಯರು ಹಿಂದು ಧರ್ಮಕ್ಕೆ ಮತಾಂತರಗೊಂಡು ಹಿಂದು ಯುವಕರನ್ನು ದೇವಸ್ಥಾನದಲ್ಲಿ ವಿವಾಹವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರು ಹಿಂದು ಧರ್ಮಕ್ಕೆ ಮತಾಂತರವಾಗಿದ್ದು, ಇಬ್ಬರೂ ಕೂಡ ಬರೇಲಿಯ ದೇವಸ್ಥಾನದಲ್ಲಿ ತಾವು ಇಷ್ಟಪಟ್ಟ ಹಿಂದು ಹುಡುಗರನ್ನು ಹಿಂದು ಸಂಪ್ರದಾಯದಂತೆ ವಿವಾಹವಾಗಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಈ ಮದುವೆಯನ್ನು ಸ್ಥಳೀಯ ಆರ್ಯ ಸಮಾಜ ಮಂದಿರದಲ್ಲಿ ನೋಂದಣಿ ಮಾಡಲಾಗಿದ್ದು, ಮದುವೆಯ ಬಳಿಕ ಮಾತನಾಡಿದ ಈ ಯುವತಿಯರು, ‘ನಮಗೆ ಹಿಂದು ಧರ್ಮದಲ್ಲಿ ನಂಬಿಕೆಯಿದ್ದು, ಮಹಿಳೆಯರಿಗೆ ಮುಸ್ಲಿಂ ಸಮಾಜದಲ್ಲಿ ಯಾವುದೇ ಗೌರವ ಲಭ್ಯವಾಗುವುದಿಲ್ಲ.
ಎಲ್ಲೆಂದರಲ್ಲಿ ಯಾವ ಕಾರಣವೂ ಇಲ್ಲದೆ ಮೂರು ಬಾರಿ ತಲಾಕ್ ಹೇಳಿದರೆ ಅಲ್ಲಿ ಸಂಬಂಧ ಮುಕ್ತಾಯವಾಗುತ್ತದೆ. ಇನ್ನು ಹಲಾಲ್ ಅನ್ನು ಎಲ್ಲಿ ಬೇಕಾದರೂ, ಯಾವ ವಿಚಾರದಲ್ಲಿ ಬೇಕಾದರೂ ಅನ್ವಯಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.
ಈ ಅಪರೂಪದ ಮದುವೆ ಸಮಾರಂಭವು ಬರೇಲಿಯ ಮೇದಿನಾಥ್‌ನ ಅಗಸ್ತ್ಯ ಮುನಿ ಆಶ್ರಮದಲ್ಲಿ ನಡೆದಿದ್ದು, ಪಂಡಿತ್ ಕೆಕೆ ಶಂಕಾಧರ್ ಇಬ್ಬರೂ ಯುವತಿಯರ ಮದುವೆಯನ್ನು ನೆರವೇರಿಸಿಕೊಟ್ಟಿದ್ದಾರೆ. ಮದುವೆಯ ವೇಳೆ ಇಬ್ಬರೂ ಯುವತಿಯರು ಸಪ್ತಪದಿ ತುಳಿದಿದ್ದು ಮಾತ್ರವಲ್ಲ, ಅವರ ಬೇಡಿಕೆಯ ಮೇಲೆಗೆ ಪತಿಯರು ಹಣೆಗೆ ಕುಂಕುಮ ಹಾಗೂ ಮಂಗಳ ಸೂತ್ರ ಕಟ್ಟಿದ್ದಾರೆ. ಬಳಿಕ ಪಂಡಿತ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಮದುವೆಗೂ ಮುನ್ನ ಇಬ್ಬರನ್ನು ಶುದ್ದೀಕರಣ ಮಾಡಿ ಹಿಂದು ಧರ್ಮಕ್ಕೆ ಸೇರ್ಪಡೆ ಮಾಡಲಾಗಿದ್ದು, ಹಿಂದು ಧರ್ಮಕ್ಕೆ ಸೇರಿದ ಬಳಿಕ ಅವರ ಹೊಸ ಹೆಸರಿನ ಮೂಲಕ ನಾಮಕರಣ ಮಾಡಲಾಗಿದೆ. ಇರಾಮ್ ಜೈದಿ ತನ್ನ ಹೆಸರನ್ನು ಸ್ವಾತಿ ಎಂದಾಗಿ, ಶಹನಾಜ್ ತನ್ನ ಹೆಸರನ್ನು ಸುಮನ್ ಆಗಿ ಬದಲಾಯಿಸಿಕೊಂಡಿದ್ದಾರೆ.
ಮದುವೆಯ ಬಳಿಕ ಪತಿ ಅಜಯ್ ಕುಮಾರ್ ಜೊತೆ ಸುಮನ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಆ ಬಳಿಕ, ಪೊಲೀಸರ ಎದುರು ನಾನು ವಯಸ್ಕಳಾಗಿದ್ದು, ನನ್ನ ಸ್ವ ಇಚ್ಛೆಯಂತೆಯೇ ಹಿಂದು ಧರ್ಮ ಸ್ವೀಕಾರ ಮಾಡಿದ್ದೇನೆ. ಇದಕ್ಕೆ ಯಾರ ಒತ್ತಾಯ ಕೂಡ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ದೇವಸ್ಥಾನದಲ್ಲಿ ಅಜಯ್ ಎನ್ನುವವರನ್ನು ವಿವಾಹವಾಗಿದ್ದು, ಈಗ ನನ್ನ ಜೀವನಕ್ಕೆ ಜೀವ ಕಂಟಕವಿದ್ದು, ನನ್ನ ಕುಟುಂಬ ಸದಸ್ಯರಿಂದ ಜೀವ ಬೆದರಿಕೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ.
ಹಾಗಾಗಿ, ಎಸ್‌ಎಸ್‌ಪಿ ಅಖಿಲೇಶ್ ಚೌರಾಸಿಯಾ ವೇಳೆ ಭದ್ರತೆ ನೀಡುವ ಭರವಸೆ ನೀಡಿದ್ದಾರೆ. ಈ ಸಂದರ್ಭ ನಿನ್ನ ಸಲುವಾಗಿ ಆಕೆ ತನ್ನ ಧರ್ಮ ಬಿಟ್ಟುಬಂದಿದ್ದಾಳೆ ಹಾಗಾಗಿ,ಯಾವುದೇ ಕಾರಣಕ್ಕೂ ಹುಡುಗಿಗೆ ಕಿರುಕುಳ ನೀಡಬಾರದು ಎಂದು ಪೊಲೀಸರು ವರನಿಗೆ ಎಚ್ಚರಿಕೆ ನೀಡಿದ್ದಾರೆ.
ಇರಾಮ್ ಹಾಗೂ ಆದೇಶ್ ಕುಮಾರ್ ಕಳೆದ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದು, ಸ್ವಾತಿ ಎಂದು ಹೆಸರು ಬದಲಿಸಿಕೊಂಡಿರುವ ಇರಾಮ್‌ಗೆ ಈಗ 19 ವರ್ಷವಾಗಿದ್ದು, ದಾಖಲೆಗಳ ಪ್ರಕಾರ ನನ್ನ ಜನನ 2004ರ ಜನವರಿ 1 ರಂದು ಆಗಿದೆ. ನಾನು ವಯಸ್ಕಳಾಗಿದ್ದು, ನನ್ನ ಮದುವೆಯಾಗುವ ಹುಡುಗನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ತನಗಿದೆ ಎಂದು ಹೇಳಿದ್ದಾರೆ.
ಅಷ್ಟೆ ಅಲ್ಲದೆ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಈ ಧರ್ಮವನ್ನು ಸ್ವೀಕರಿಸಿದ್ದು, ಮುಂದೆ ಹಿಂದುವಾಗಿ ಬದುಕುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ನಾವಿಬ್ಬರೂ ಒಂದೇ ಗ್ರಾಮದವರಾಗಿದ್ದು, ಮೊದಲು ಒಳ್ಳೆಯ ಸ್ನೇಹಿತರಾಗಿದ್ದು, ನನ್ನ ಪ್ರೀತಿಯ ಕಾರಣಕ್ಕಾಗಿ ಈ ನಿರ್ಧಾರ ಮಾಡಿದ್ದೇನೆ ಎಂದಿದ್ದು, ಬದುಕಿದರೂ ಒಟ್ಟಿಗೆ, ಸತ್ತರೂ ಒಟ್ಟಿಗೆ ಎಂದು ತೀರ್ಮಾನ ಮಾಡಿದ ಬಳಿಕವೇ ಹಿಂದು ಧರ್ಮಕ್ಕೆ ಸೇರಿ ದೇವಸ್ಥಾನದಲ್ಲಿ ವಿವಾಹವಾಗಿದ್ದೇನೆ ಎಂದಿದ್ದಾರೆ.
ಅಜಯ್ ಅವರನ್ನು ಪ್ರೀತಿಸಿದ್ದು, ಪ್ರತಿ ದಿನ ನಾನು ಟಿವಿಯಲ್ಲಿ ತಲಾಕ್ ಕುರಿತಾದ ಸುದ್ದಿಯನ್ನು ನೋಡಿ ಬೇಸತ್ತು, ಅಪ್ಪನ ಮನೆಯನ್ನು ಬಿಟ್ಟು ಅತ್ತೆಯ ಮನೆಗೆ ಬರುವ ಯುವತಿ ತನ್ನ ಜೀವಮಾನ ಪೂರ್ತಿ ಇದೇ ಹೆದರಿಕೆಯಲ್ಲಿ ಇರುತ್ತಾಳೆ ಜೊತೆಗೆ ಕೊನೆಗೆ ಒಂದೇ ಸಮನೆ ಮೂರು ಬಾರಿ ತಲಾಕ್ ಎಂದು ವಿಚ್ಛೇದನ ನೀಡಲಾಗುತ್ತದೆ. ಆ ಕಾರಣದಿಂದಾಗಿ ನಾನು ಹಿಂದು ಆಗಲು ತೀರ್ಮಾನ ಮಾಡಿದ್ದು, ಹಿಂದೂ ಧರ್ಮದಲ್ಲಿ ಸೊಸೆಯು ಮುಸಲ್ಮಾನರಂತೆ ಪರದೆಯ ಅಡಿಯಲ್ಲಿಯೇ ಬದುಕುವುದಿಲ್ಲ ಎಂದು ತಮ್ಮ ಮತಾಂತರದ ಹಿಂದೆ ಇರುವ ಉದ್ದೇಶವನ್ನು ಸ್ವಾತಿ ತಿಳಿಸಿದ್ದಾರೆ.