Shraddha Walker Murder Case : ನನ್ನನ್ನು ಗಲ್ಲಿಗೇರಿಸಿದರೂ ಪಶ್ಚಾತ್ತಾಪವಿಲ್ಲ – ಅಫ್ತಾಬ್

ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ ಘಟನೆಯೆಂದರೆ ಶ್ರದ್ದಾ ವಾಕರ್ ಹತ್ಯಾಕಾಂಡ. 35 ಪೀಸ್ ತುಂಡು ಮಾಡಿ ಹೀನಾಯ ಕೃತ್ಯ ಎಸಗಿರುವ ಆರೋಪಿ ಅಫ್ಲಾಬ್ ಪೂನಾವಾಲನನ್ನು ಬಂಧಿಸಿದ್ದೂ, ಆತನ ಮೇಲೆ ಸುಳ್ಳುಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯ ನಂತರ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಶ್ರದ್ದಾ ಮಾತ್ರವಲ್ಲದೆ ಅನೇಕ ಹಿಂದೂ ಯುವತಿಯರೇ ಇವನ ಟಾರ್ಗೆಟ್ ಆಗಿತ್ತೆಂದು ವರದಿಯೊಂದು ಪ್ರಕಟಿಸಿದೆ.

ಹೌದು, ದೆಹಲಿಯ 35 ಪೀಸ್ ಮರ್ಡರ್ ಕುಖ್ಯಾತಿಯ ಪ್ರಮುಖ ಆರೋಪಿಯನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದಾಗ ಶ್ರದ್ಧಾಳನ್ನು ಕೊಂದಿರುವುದಕ್ಕೆ ಯಾವುದೇ ಪಶ್ಚಾತಾಪವಿಲ್ಲ. ಇದಕ್ಕಾಗಿ ನನಗೆ ಗಲ್ಲುಶಿಕ್ಷೆ ವಿಧಿಸಿದರೂ ಸ್ವರ್ಗದಲ್ಲಿ ನಾನು ಖುಷಿಯಾಗಿರುತ್ತೇನೆ ನನ್ನನ್ನು ನಾನು ಹೀರೋ ಎಂದೇ ಭಾವಿಸುತ್ತೇನೆ. ಅಲ್ಲದೇ ಇದಕ್ಕಾಗಿ ಸ್ವರ್ಗಕ್ಕೆ ಹೋದರೂ ಅಲ್ಲಿ ನೀಡಲಾಗುವ ಅಪ್ಸರೆಯರ ಜೊತೆ ಸಂತೋಷವಾಗಿರುತ್ತೇನೆ ಎಂದು ಹೇಳಿದ್ದಾನೆಂದು ವರದಿಯಾಗಿದೆ.

ಅಲ್ಲದೇ ನಾನು ಬಂಬಲ್ ಆಯಪ್ ಬಳಸಿ ಹಿಂದು ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದೆ. ಶ್ರದ್ಧಾಳನ್ನು ಕೊಲೆ ಮಾಡಿದ ಬಳಿಕ ಮನೋವೈದ್ಯೆಯನ್ನು ಮನೆಗೆ ಕರೆಸಿಕೊಂಡಿದ್ದೆ. ಆಕೆಯೊಂದಿಗೆ ಸಂಬಂಧ ಬೆಳೆಸಲು ಶ್ರದ್ಧಾಳ ಉಂಗುರವನ್ನು ಆಕೆಗೆ ನೀಡಿದ್ದೆ. ಆಕೆ ಸಹ ಹಿಂದೂ. ಜೊತೆಗೆ ಶ್ರದ್ಧಾ ಸೇರಿದಂತೆ ಇನ್ನೂ 20 ಹಿಂದೂ ಯುವತಿಯರ ಜೊತೆ ನನಗೆ ಸಂಪರ್ಕ ಇತ್ತು ಅಲ್ಲದೇ ಮತ್ತಷ್ಟು ಹಿಂದೂ ಮಹಿಳೆಯರ ಜೊತೆ ನಾನು ಮಾತನಾಡುತ್ತಿದ್ದೆ ಎಂದು ಹೇಳಿದ್ದಾನೆಂದು ಮೂಲಗಳನ್ನು ಉಲ್ಲೇಖಿಸಿ ‘ದೈನಿಕ್ ಜಾಗರಣ್’ ವರದಿ ಮಾಡಿದೆ. ಈ ರೀತಿ ಹೇಳಿರುವುದು ಆತನ ಉದ್ದೇಶದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

ಪೊಲೀಸರಿಗೆ ಸುಳ್ಳುಪತ್ತೆ ಪರೀಕ್ಷೆ ವೇಳೆ ಅಫ್ತಾಬ್ ನೀಡಿರುವ ಮಾಹಿತಿಯಿಂದಾಗಿ ತನಿಖೆಗೆ ಬಹಳ ಸಹಕಾರಿಯಾಗಿದ್ದೂ, ಪರೀಕ್ಷೆಯ ಬಳಿಕ ಆತನ ಮನೆಯಿಂದ 5 ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ಉಳಿದ ಸಾಕ್ಷ್ಯಗಳನ್ನು ಶೀಘ್ರವಾಗಿ ಪತ್ತೆ ಹಚ್ಚುತ್ತೇವೆ ಎಂದು ವರದಿ ತಿಳಿಸಿದೆ.

Leave A Reply

Your email address will not be published.