ತನ್ನ ಕುತ್ತಿಗೆಗೆ ತಾನೇ ತ್ರಿಶೂಲವನ್ನು ಚುಚ್ಚಿಕೊಂಡು 65 ಕಿಲೋಮೀಟರ್‌ ನಡೆದ ವ್ಯಕ್ತಿ!

ಈ ಪ್ರಪಂಚನೇ ವಿಚಿತ್ರ. ಇಲ್ಲಿ ಯಾವ ಯಾವ ರೀತಿಯ ಮನುಷ್ಯರು ಇದ್ದಾರೆ ಎಂದು ಊಹಿಸಲೇ ಅಸಾಧ್ಯ. ಯಾಕಂದ್ರೆ, ದಿನದಿಂದ ದಿನಕ್ಕೆ ವಿಚಿತ್ರ ಘಟನೆಗಳು ನಡೆಯುತ್ತಲೇ ಇದ್ದು, ಜಗತ್ತೇ ವಿಚಿತ್ರ ಎಂಬಂತಾಗಿದೆ. ಇದಕ್ಕೆ ಉದಾಹರಣೆಯಾಗಿಯೇ ಇದೆ ಇಲ್ಲೊಂದು ಕಡೆ ನಡೆದ ಘಟನೆ.

 

ಹೌದು. ವ್ಯಕ್ತಿಯೊಬ್ಬ ತನ್ನ ಕುತ್ತಿಗೆಯೇ ತ್ರಿಶೂಲದಿಂದ ಚುಚ್ಚಿಕೊಂಡಿರುವ ವಿಲಕ್ಷಣ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಪ್ರದೇಶದಲ್ಲಿ ನಡೆದಿದ್ದು, ಭಾಸ್ಕರ್ ರಾಮ್ ಎಂಬುವವರೇ ಈ ವ್ಯಕ್ತಿ.

ಭಾಸ್ಕರ್ ರಾಮ್ ಕ್ಷುಲ್ಲಕ ವಿಷಯಕ್ಕೆ ಜಗಳ ಮಾಡಿ ನಂತರ, 150 ವರ್ಷಗಳಷ್ಟು ಹಳೆಯ ತ್ರಿಶೂಲದಿಂದ ಗಂಟಲು ಚುಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ 65 ಕಿಲೋಮೀಟರ್‌ ಕ್ರಮಿಸಿ ಆಸ್ಪತ್ರೆಗೆ ಬಂದಿದ್ದಾನೆ. ಮುಂಜಾನೆ 3 ಗಂಟೆಗೆ NRS ಆಸ್ಪತ್ರೆಗೆ ತೆರಳಿದ್ದಾರೆ. ಆತನನ್ನು ಕಂಡು ಕೋಲ್ಕತ್ತಾದ ಎನ್‌ಆರ್‌ಎಸ್ ಆಸ್ಪತ್ರೆಯ ಸಿಬ್ಬಂದಿಗೆ ಅಚ್ಚರಿಯಾಗಿದೆ.

ತನ್ನ ಕುತ್ತಿಗೆಯೇ ಚುಚ್ಚಿಕೊಂಡ 30 ಸೆಂ.ಮೀ ಉದ್ದದ ತ್ರಿಶೂಲವನ್ನು ಸುಮಾರು ಒಂದೂವರೆ ಶತಮಾನಗಳ ಕಾಲ ಅವರ ಮನೆಯಲ್ಲಿ ಸಂರಕ್ಷಿಸಲಾಗಿದ್ದು, ಅದನ್ನು ಪೂಜಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಆದ್ರೆ, ತ್ರಿಶೂಲವನ್ನು ಚುಚ್ಚಿಕೊಂಡರು ಭಾಸ್ಕರ್ ರಾಮ್ ಗೆ ನೋವು ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿ ವೈದ್ಯರಿಗೆ ಆಶ್ಚರ್ಯವಾಗಿದೆ. ತಕ್ಷಣವೇ ಚಿಕಿತ್ಸೆ ನೀಡಿದ ಎನ್‌ಆರ್‌ಎಸ್ ಆಸ್ಪತ್ರೆ ವೈದ್ಯರು ಶೀಘ್ರ ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ಆತನ ಕುತ್ತಿಗೆಯಿಂದ ತ್ರಿಶೂಲ ಹೊರತೆಗೆದಿದ್ದಾರೆ.

Leave A Reply

Your email address will not be published.