ನಾಲ್ಕು ರಾಜ್ಯದಲ್ಲಿ ಆರು ಮದುವೆಯಾದ ಚಪಲ ಚೆನ್ನಿಗರಾಯ | ಈತ ಕೈಗೆ ಸಿಕ್ಕಿದ್ದೇಗೆ ?

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತು ನಾವು ಕೇಳಿರಬಹುದು. ಆದರೆ ಇಲ್ಲೊಬ್ಬ ಸಾವಿರ ಸುಳ್ಳು ಹೇಳಿ ಆರು ಮದುವೆ ಆಗಿದ್ದಾನೆ. ಸಹಜವಾಗಿ ಒಬ್ಬರನ್ನು ಮದುವೆಯಾಗಿ ಸಂಸಾರ ಸಾಗಿಸುವುದು ಅಷ್ಟೇ ಕಷ್ಟ ಇದೆ ಆದರೆ ಬಿಹಾರದ ಜವತಾರಿ ಗ್ರಾಮದ ಛೋಟು ಕುಮಾರ್ ಎಂಬ ವ್ಯಕ್ತಿ ನಾಲ್ಕು ರಾಜ್ಯದಲ್ಲಿ ಒಟ್ಟು ಆರು ಮಹಿಳೆಯರನ್ನು ಮದುವೆಯಾಗಿ ಸಿಕ್ಕಿ ಬಿದ್ದಿದ್ದಾನೆ.

 

ನವೆಂಬರ್ 28 ರಂದು ಸೋಮವಾರ ಛೋಟು ಕುಮಾರ್‌ ಜಮುಯಿ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಜೊತೆ ನಿಂತಿರುವುದನ್ನು ಛೋಟು ಕುಮಾರ್‌ ಅವರ ಹಿಂದಿನ ಪತ್ನಿ ಮಂಜು ಅವರ ತಮ್ಮ ಅಂದರೆ ಮೈದುನ ವಿಕಾಸ್ ಎನ್ನುವವರು ಗಮನಿಸಿದ್ದು, ವಿಕಾಸ್‌ ಕೋಲ್ಕತ್ತಾಕ್ಕೆ ಹೋಗಲು ಅಲ್ಲಿಗೆ ಬಂದಿದ್ದರು. ಆಗ ಛೋಟು ಅವರನ್ನು ನೋಡಿ ಕುಟುಂಬದವರಿಗೆ ಮಾಹಿತಿ ನೀಡುತ್ತಾರೆ.

ಛೋಟು ಕುಮಾರ್‌ ಆರ್ಕೆಸ್ಟ್ರಾ ತಂಡವೊಂದರಲ್ಲಿ ಗಾಯಕನಾಗಿದ್ದು, ಬೇರೆ ಬೇರೆ ಕಡೆ ಗಾಯನ ಮಾಡಿ, ಅಲ್ಲಿ ಮದುವೆಯಾಗುತ್ತಿದ್ದ, ಒಬ್ಬರನ್ನು ಮದುವೆಯಾಗುವ ಮುನ್ನ ಅವರನ್ನು ಬಳಸಿ ನಂತರ ಮೋಸ ಮಾಡುತ್ತಿದ್ದ ಎಂದು ವಿಕಾಸ್‌ ಆರೋಪಿಸಿದ್ದಾರೆ.

ಪೊಲೀಸರು ಛೋಟುವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಆತ ತಾನು ಆರು ಮಹಿಳೆಯರನ್ನು, ನಾಲ್ಕು ರಾಜ್ಯದಲ್ಲಿ ಮದುವೆಯಾಗಿದ್ದೇನೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

ಛೋಟು ಮಂಜು ಅವರನ್ನು 2018 ರಲ್ಲಿ ಮದುವೆಯಾಗಿದ್ದಾನೆ. ನನ್ನ ಮಗಳಿಗೆ ಇಬ್ಬರು ಮಕ್ಕಳಿವೆ. ಒಂದೂವರೆ ವರ್ಷದ ಹಿಂದೆ ಔಷಧಿ ತರಲೆಂದು ಹೊರಗೆ ಹೋಗಿದ್ದಾನೆ. ಆ ದಿನದಿಂದ ಆತ ಮತ್ತೆಂದೂ ಮನೆಗೆ ವಾಪಸ್‌ ಬರಲಿಲ್ಲ. ಛೋಟು ರಾಂಚಿಯಲ್ಲಿ ಕಲಾವತಿ ದೇವಿ ಎನ್ನುವವಳನ್ನು ಮದುವೆಯಾಗಿದ್ದಾನೆ. ಆಕೆಗೆ ನಾಲ್ಕು ಮಕ್ಕಳಿದ್ದಾರೆ ಎಂದು ಮಂಜು ಅವರ ತಾಯಿ ಕೋಬಿಯಾ ದೇವಿ ಪೊಲೀಸರಿಗೆ ಹೇಳಿದ್ದಾರೆ.

ವಿಕಾಸ್ ಅವರು ತನ್ನ ತಂಗಿ ತನ್ನ ಗಂಡ ಛೋಟುಗಾಗಿ ತುಂಬಾ ದಿನ ಕಾದಿದ್ದಾರೆ. ಆದರೆ ಅವರು ಮರಳಿ ಬರಲಿಲ್ಲವೆಂದು ಪೊಲೀಸರಿಗೆ ವಿಕಾಸ್‌ ಹೇಳಿದ್ದಾರೆ. ಛೋಟು ಎರಡನೇ ಪತ್ನಿಯ ಮನೆಯವರು ಆತನ ಮೇಲೆ ಆರೋಪ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಪ್ರಕರಣ ದಾಖಲಾದರೆ ಪೊಲೀಸರು ತನಿಖೆ ಮಾಡುತ್ತಾರೆ ಎಂದು ವರದಿ ತಿಳಿಸಿದೆ.

ಒಟ್ಟಿನಲ್ಲಿ ಈತ 6 ಜನ ಹೆಣ್ಣುಮಕ್ಕಳ ಜೀವನದಲ್ಲಿ ಆಟವಾಡಿದ್ದಾನೆ. ಈತನಿಗೆ ಸರಿಯಾದ ಶಿಕ್ಷೆ ಆಗದೆ ಇದ್ದರೆ ಇಂತಹ ಮೋಸಗಾರರಿಗೆ ಸಮಾಜದಲ್ಲಿ ಭಯ ಇರುವುದಿಲ್ಲ ಎಂದು ವಿಕಾಸ್ ಕುಟುಂಬಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.