ಪಾಕಿಸ್ತಾನ, ಇಂಗ್ಲೆಂಡ್ ನಲ್ಲಿ ಮೊಬೈಲ್ ಡೇಟಾಗೆ ಎಷ್ಟು ಜಾರ್ಜ್ ಮಾಡ್ತಾರೆ ಗೊತ್ತಾ!! ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬ ಮಾಯಾವಿಯ ಬಳಕೆ ಆರಂಭವಾದ ಬಳಿಕ ಎಲ್ಲರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ನಂಟು ಬೆಸೆದುಕೊಂಡು ಬಿಟ್ಟಿದೆ. ಇಷ್ಟೇ ಅಲ್ಲದೆ, ಬದಲಾವಣೆಯ ಗಾಳಿ ಬೀಸಿ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಾಗಿ ದಿನಂಪ್ರತಿ ನವೀನ ಮಾದರಿಯ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧನಗಳು ಕೂಡ ಕಡಿಮೆಯೇನಿಲ್ಲ!!!
ಈ ನಡುವೆ ಟೆಕ್ನಾಲಜಿ (Technology) ಬೆಳೆಯುತ್ತಿದ್ದಂತೆ, ಟೆಲಿಕಾಂ ಕ್ಷೇತ್ರದಲ್ಲಿ ಕೂಡ ಮಹತ್ತರ ಬದಲಾವಣೆಗಳಾಗಿ, ಭಾರತದಲ್ಲಿ ಈಗ 5G ಟ್ರೆಂಡ್ ನಡೆಯುತ್ತಿವೆ. ಮೆಟ್ರೋ ನಗರಗಳಲ್ಲಿ ಹೈ ಸ್ಪೀಡ್ 5ಜಿ ಸೇವೆಯನ್ನು ಪಡೆಯುತ್ತಿದ್ದು, ಇದಕ್ಕೆ ತಕ್ಕಂತೆ ಟೆಲಿಕಾಂ (Telecom) ಕಂಪನಿಗಳು ಕೂಡ ತಮ್ಮ ರೀಚಾರ್ಜ್ ಪ್ಲಾನ್ ಅಲ್ಲಿ ಬದಲಾವಣೆಯ ಮಾಡಿ ಬೆಲೆಯಲ್ಲಿ ಹೆಚ್ಚಳ ಕೂಡ ಮಾಡುತ್ತಿದ್ದಾರೆ.
ಇಂದು ಸ್ಮಾರ್ಟ್ಫೋನ್ ಬಳಕೆ ಮಾಡದೇ ಇರುವವರೆ ವಿರಳ ಹಾಗಾಗಿ, ಇಂಟರ್ನೆಟ್ ಬೆಲೆ ಏರಿಕೆ ಕಾಣುತ್ತಲಿದೆ. ಭಾರತದಲ್ಲಿ 4G ಸೇವೆಯ ಬಳಿಕ, ಇಂಟರ್ನೆಟ್ ಬೆಲೆ ಏರಿಕೆ ಕಂಡಿದ್ದರೂ ಕೂಡ, ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ, ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ (Internet) ಸೇವೆ ನೀಡುತ್ತಿರುವ ಕೆಲವೇ ದೇಶಗಳಲ್ಲಿ ಭಾರತ ಕೂಡ ಒಂದು ಹೇಳಿದರೆ ಅಚ್ಚರಿಯಾಗಬಹುದು. ಆದರೂ ಕೂಡಾ ಇದೆ ನಿಜ!!
ಇದೀಗ ವಿಶ್ವದಾದ್ಯಂತ ಮೊಬೈಲ್ ಡೇಟಾ ದ ಬೆಲೆ 2022 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಅನೇಕ ದೇಶಗಳನ್ನು ಹಿಂದಕ್ಕೆ ಸರಿಸಿ, ಭಾರತ ಮೂರನೇ ಅಗ್ರ ಸ್ಥಾನ ಬಾಚಿಕೊಂಡಿದೆ.
ಹಾಗಾದರೆ ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಇತರೆ ದೇಶಗಳಲ್ಲಿ 1GB ಇಂಟರ್ನೆಟ್ ಬೆಲೆ ಎಷ್ಟು?.ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ:
ಜಗತ್ತಿನಲ್ಲೇ ಅತ್ಯಂತ ಅಗ್ಗ ಹಾಗೂ ಕೈಗೆ ಎಟಕುವ ದರದಲ್ಲಿ ಇಂಟರ್ನೆಟ್ ಸೇವೆ ನೀಡುತ್ತಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದ್ದು, ಇತ್ತೀಚೆಗಷ್ಟೆ Cable.co.uk ಇದರ ಬಗ್ಗೆ ಸಮೀಕ್ಷೆ ನಡೆಸಿದೆ.
ವಿಶ್ವದ ಅತ್ಯಂತ ಅಗ್ಗದ ದರದಲ್ಲಿ ಇಸ್ರೇಲ್ ಇಂಟರ್ನೆಟ್ ಸೇವೆ ದೊರೆಯುತ್ತಿದ್ದು, ಇದೊಂದು ಚಿಕ್ಕ ದೇಶವಾಗಿದ್ದರು ಸಹಿತ, ತಂತ್ರಜ್ಞಾನದ ವಿಷಯದಲ್ಲಿ ಮುಂದಿದೆ. ಇಸ್ರೇಲ್‌ನಲ್ಲಿ ಕೇವಲ $0.04 ಬೆಲೆಯಲ್ಲಿ 1GB ಮೊಬೈಲ್ ಡೇಟಾ ಪಡೆಯಬಹುದಾಗಿದೆ. ಅಂದರೆ, ಭಾರತೀಯ ಮೌಲ್ಯದ ಪ್ರಕಾರ 3.27 ರೂಪಾಯಿಗೆ ಇಂಟರ್ನೆಟ್ ಸೇವೆ ದೊರೆಯುತ್ತದೆ.
ಇದೆ ರೀತಿ, ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ಒದಗಿಸುತ್ತಿರುವ ಎರಡನೇ ದೇಶ ಇಟಲಿಯಾಗಿದ್ದು, ಈ ಪಟ್ಟಿಯಲ್ಲಿ ಫ್ರಾನ್ಸ್ ನಂತರ ಇದು ಎರಡನೇ ಯುರೋಪಿಯನ್ ದೇಶವಾಗಿ ಹೊರಹೊಮ್ಮಿದೆ. ಇಟಲಿಯಲ್ಲಿ, ಬಳಕೆದಾರರು 1GB ಡೇಟಾಕ್ಕೆ $0.12 ಪಾವತಿಸುತ್ತಾರೆ. ಭಾರತೀಯ ಮೌಲ್ಯದ ಪ್ರಕಾರ 1GB ಮೊಬೈಲ್ ಡೇಟಾಕ್ಕೆ ಸುಮಾರು 9.80 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಈ ಮೊದಲೇ ಹೇಳಿದಂತೆ, ಮೂರನೇ ಸ್ಥಾನದಲ್ಲಿ ಭಾರತವಿದ್ದು, ಇಲ್ಲಿ 1GB ಡೇಟಾದ ಬೆಲೆ $0.17 (ಅಂದಾಜು 13.88 ರೂ.). ಸದ್ಯಕ್ಕೆ ಜಿಯೋ ಟೆಲಿಕಾಂ ಕಂಪನಿ ಭಾರತದಲ್ಲಿ 15 ರೂಪಾಯಿಗೆ 1GB ಡೇಟಾವನ್ನು ನೀಡುತ್ತಿದೆ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಪಾರುಪತ್ಯ ಕಾಯ್ದು ಕೊಂಡಿರುವ ರಿಲಯನ್ಸ್ ಜಿಯೋ ಸದ್ಯ ಕಡಿಮೆ ಬೆಲೆಗೆ ಹೆಚ್ಚಿನ ಸ್ಪೀಡ್ನಲ್ಲಿ ಇಂಟರ್ ನೆಟ್ ಸೇವೆ ನೀಡುತ್ತಿದೆ.233 ದೇಶಗಳಲ್ಲಿ 5,292 ಮೊಬೈಲ್ ಡೇಟಾ ಯೋಜನೆಗಳಿಂದ ಡೇಟಾವನ್ನು ವಿಶ್ಲೇಷನೆ ನಡೆಸಿದ್ದು, 1GB ಮೊಬೈಲ್ ಡೇಟಾದ ವೆಚ್ಚದ ಆಧಾರದಲ್ಲಿ ಶ್ರೇಯಾಂಕವನ್ನು ಪ್ರಕಟ ಮಾಡಲಾಗಿದೆ.
ಈ ಸಮೀಕ್ಷೆಯ ಅನುಸಾರ ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯ ಬಳಕೆದಾರರಿಗೆ ಕಡಿಮೆ ಬೆಲೆಗೆ ಡೇಟಾ ಪ್ಯಾಕ್ ದೊರೆಯುತ್ತಿದೆ. ಇಲ್ಲಿ 1GB ಡೇಟಾದ ಬೆಲೆ $0.17 (ಅಂದಾಜು 13.88 ರೂ.)ಆಗಿದೆ.
ನಾಲ್ಕನೇ ಸ್ಥಾನದಲ್ಲಿ ಫ್ರಾನ್ಸ್ ದೇಶವಿದ್ದು, ಇಲ್ಲಿ ಬಳಕೆದಾರರು 1GB ಡೇಟಾಕ್ಕಾಗಿ $0.23 ಪಾವತಿಸಬೇಕಾಗುತ್ತದೆ . ಅಂದರೆ, ಭಾರತೀಯ ಕರೆನ್ಸಿಯ ಪ್ರಕಾರ ಅಂದಾಜು 18.78 ರೂ. ಎನ್ನಬಹುದಾಗಿದೆ. ಈ ದೇಶದಲ್ಲಿ ನೆಟ್‌ವರ್ಕ್ ಸೌಕರ್ಯ ಅಭಿವೃದ್ಧಿ ಪಡೆದಿದ್ದು, ಹೆಚ್ಚಿನವರು ಇಂಟರ್ನೆಟ್ ಮೇಲೆ ಅವಲಂಬಿತರಾಗಿದ್ದಾರೆ.
ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ಒದಗಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ. 1GB ಮೊಬೈಲ್ ಡೇಟಾದ ಬೆಲೆ $0.36, ಅಂದರೆ ಭಾರತೀಯ ಮೌಲ್ಯದ ಪ್ರಕಾರ 29.40 ರೂ.ಆಗಿದೆ.
ಅದೇ ರೀತಿ, ಕೆನಡಾದಲ್ಲಿ 1GB ಇಂಟರ್ನೆಟ್‌ನ ಬೆಲೆ $5.94 (ಸುಮಾರು 485ರೂ.). ಅಮೆರಿಕನ್ನರು 1GB ಇಂಟರ್ನೆಟ್ಗೆ USD 3.12 ಪಾವತಿ ಮಾಡುತ್ತಿದ್ದು. ಅಂದಾಜಿನ ಪ್ರಕಾರ, ಸುಮಾರು 254 ರೂಪಾಯಿ ಪಾವತಿಸಬೇಕಾಗುತ್ತದೆ. ಇಂಗ್ಲೆಂಡ್ನಲ್ಲಿ 1GB ಇಂಟರ್ನೆಟ್ ಬೆಲೆ USD 0.79 ಆಗಿದೆ.
ಎಲ್ಲ ದೇಶಗಳಿಗೆ ಹೋಲಿಸಿದರೆ ಸೇಂಟ್ ಹೆಲೆನಾ ಅತ್ಯಂತ ದುಬಾರಿ ಇಂಟರ್ನೆಟ್ ಬೆಲೆ ಹೊಂದಿರುವ ದೇಶವಾಗಿದೆ. ಇಲ್ಲಿ 1GB ಮೊಬೈಲ್ ಡೇಟಾ ಬೆಲೆ $ 41.06, ಅಂದರೆ ಸುಮಾರು 3,350 ರೂಪಾಯಿ ಪಾವತಿಸಬೇಕಾಗುತ್ತದೆ.