ಚೀನಾ ಮಾಜಿ ಅಧ್ಯಕ್ಷ ‘ಜಿಯಾಂಗ್ ಜೆಮಿನ್’ ನಿಧನ

ಚೀನಾದ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಚೀನಾದ ಸರ್ಕಾರಿ ಮಾಧ್ಯಮಗಳ ಪ್ರಕಾರ, ಜೆಮಿನ್, ಲ್ಯುಕೇಮಿಯಾ ಕಾಯಿಲೆಗೆ ಬಲಿಯಾಗಿದ್ದಾರೆ. ಈ ಕಾರಣದಿಂದಾಗಿ, ಅವರ ದೇಹದ ಅನೇಕ ಭಾಗಗಳು ಕೆಲಸ ಮಾಡುವುದನ್ನ ನಿಲ್ಲಿಸಿದ್ದು, ಇಂದು ನಿಧನರಾಗಿದ್ದಾರೆ.

1989ರ ಟಿಯಾನನ್ಮೆನ್ ಸ್ಕ್ವೇರ್ ಪ್ರತಿಭಟನೆಯ ನಂತರ ಜಿಯಾಂಗ್ ಜೆಮಿನ್ ಅವ್ರನ್ನ ಚೀನಾ ದೇಶವನ್ನ ಮುನ್ನಡೆಸಲು ಆಯ್ಕೆ ಮಾಡಲಾಯಿತು. ಅದ್ರಂತೆ, ಸುಮಾರು ಒಂದು ದಶಕಗಳ ಕಾಲ ಚೀನಾವನ್ನ ಆಳಿದ್ದು, ಕೋವಿಡ್ ನಿರ್ಬಂಧಗಳಿಂದಾಗಿ ಚೀನಾದ ವಿವಿಧ ನಗರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿರುವ ಸಮಯದಲ್ಲಿ ಜಿಯಾಂಕ್ ಅವರ ಸಾವು ಸಂಭವಿಸಿದೆ.

 

Leave A Reply

Your email address will not be published.