Good News : ಸಿಲಿಂಡರ್ ದರ ನಿಗದಿ’ಗೆ ಕೇಂದ್ರದಿಂದ ‘ಹೊಸ ಸೂತ್ರ’, ಅಗ್ಗವಾಗಲಿದೆ ಗ್ಯಾಸ್ -ಕೇಂದ್ರದಿಂದ ಮಹತ್ವದ ನಿರ್ಧಾರ

ಸಾಮಾನ್ಯ ಜನತೆಗೆ ಬೆಲೆ ಏರಿಕೆಯ ಬಿಸಿಯಲ್ಲಿ ತತ್ತರಿಸಿ ಹೋಗಿದ್ದು, ಈ ನಡುವೆ ಗ್ರಾಹಕರಿಗೆ ಕೊಂಚ ರಿಲೀಫ್ ಆಗುವ ಸಿಹಿ ಸುದ್ದಿ ನೀಡಲು ಸರ್ಕಾರ ಮುಂದಾಗಿದೆ. ಹೌದು!!!. ಸದ್ಯದಲ್ಲೇ ಎಲ್ ಪಿಜಿ ಸಿಲಿಂಡರ್ ನ ಬೆಲೆಯಲ್ಲಿ   ಇಳಿಕೆ ಕಂಡುಬರುವ ಸಂಭವಗಳು ದಟ್ಟವಾಗಿದೆ. ಬೆಲೆ ಏರಿಕೆ ಬೇಗುದಿಯಲ್ಲಿ ಇರುವ ಜನತೆಗೆ ಕೊಂಚ ಮಟ್ಟಿಗೆ ರಿಲೀಫ್ ನೀಡುವ ಸಲುವಾಗಿ  ಕೇಂದ್ರ ಸರ್ಕಾರ ಶೀಘ್ರದಲ್ಲೇ ಗ್ಯಾಸ್ ಬೆಲೆ ಇಳಿಕೆ ಮಾಡುವ  ಮೂಲಕ ನೆರವಾಗಲಿದೆ ಎನ್ನಲಾಗುತ್ತಿದೆ.

 

ಹಾಗಾಗಿ, ಕೈಗೆ ಎಟಕುವ ದರದಲ್ಲಿ ಗ್ಯಾಸ್ ಸೇವೆ ನೀಡಲು  ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಯೋಜನೆಯು LPG ಮತ್ತು CNG ಗ್ಯಾಸ್ ಎರಡರ ಬೆಲೆಯನ್ನು  ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿದೆ.ಇತ್ತೀಚೆಗೆ ದಿನನಿತ್ಯದ ಪ್ರತಿಯೊಂದು ವಸ್ತುಗಳ ಬೆಲೆಯಲ್ಲಿಯು ಏರಿಕೆ ಕಂಡಿದ್ದು, ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದರ ನಡುವೆ, ಗ್ಯಾಸ್ ಬೆಲೆ ಏರಿಕೆಯು ಕೂಡ  ಜನರಿಗೆ ನುಂಗಲಾಗದ ಬಿಸಿ ತುಪ್ಪದಂತೆ ಪರಿಣಮಿಸಿತ್ತು . ಆದ್ರೆ, ಸದ್ಯ ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಮಿತಿ ನಿಗದಿ ಮಾಡಿ ಜನತೆಗೆ ಗುಡ್ ನ್ಯೂಸ್ ನೀಡಲು ಅಣಿಯಾಗಿದೆ ಎನ್ನಲಾಗಿದೆ.

ಹಾಗಾಗಿ, ಸಮಿತಿಯು ಗ್ಯಾಸ್ ಬೆಲೆಯನ್ನು ನಿಯಂತ್ರಿಸಲು ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದು, ಇದರ ಅಡಿಯಲ್ಲಿ, ಸಾರ್ವಜನಿಕ ವಲಯದ ಉದ್ಯಮಗಳ ಹಳೆಯ ವಲಯದಿಂದ ಬರುವ ನೈಸರ್ಗಿಕ ಅನಿಲದ ಬೆಲೆ ಮಿತಿಯನ್ನು  ನಿಗದಿಪಡಿಸಲು ಯೋಜನೆ ರೂಪಿಸಲಾಗಿದೆ.
ಈ ನಿರ್ಧಾರವು CNG ಮತ್ತು PNG ಎರಡರ ಬೆಲೆಗಳಲ್ಲಿಯೂ ಕೂಡ  ಕಡಿತ ಮಾಡಲಾಗಲಿದೆ.

ಹೊಸ ಸೂತ್ರ ರಚನೆಯ ಪ್ರಕಾರ,  ಕಷ್ಟಕರ ಪ್ರದೇಶಗಳಿಗೆ ವಿವಿಧ ಸಲಹೆಗಳನ್ನು ನೀಡಬಹುದು. ಅಲ್ಲದೆ, ಕೆಲ ಪ್ರದೇಶಗಳಿಗೆ ಸಂಬಂಧಿಸಿದಂತೆ ಸರ್ಕಾರವು ವಿಭಿನ್ನ ಸೂತ್ರಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದು,ಇನ್ನು ಅಸ್ತಿತ್ವದಲ್ಲಿರುವ ಹೆಚ್ಚಿನ ಪಾವತಿ ದರದ ಸೂತ್ರವನ್ನು ಮುಂದುವರಿಸುವ ಸಾಧ್ಯತೆ ಕೂಡ ಇದೆ.

ಕೆಲ ಮೂಲಗಳ ಪ್ರಕಾರ ಯೋಜನಾ ಆಯೋಗದ ಮಾಜಿ ಸದಸ್ಯ ಕಿರೀತ್ ಎಸ್ ಪರೇಖ್ ನೇತೃತ್ವದಲ್ಲಿ ಈ ಸಮಿತಿ ಸಭೆ ನಡೆದಿದೆ ಎನ್ನಲಾಗಿದ್ದು, ಅಂತಿಮ ನಿರ್ಧಾರ ಕೈಗೊಂಡ ಬಳಿಕ  ಸಮಿತಿಯು ತನ್ನ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ.

Leave A Reply

Your email address will not be published.