ಆಂಧ್ರ ಸಿಎಂ ಸಹೋದರಿಯ ಕಾರನ್ನು ಟೋಯಿಂಗ್​ ಮಾಡಿದ ತೆಲಂಗಾಣ ಪೊಲೀಸ್ ಶಾಕಿಂಗ್‌ ವಿಡಿಯೋ ವೈರಲ್

ವೈಎಸ್ಆರ್ ತೆಲಂಗಾಣ ಪಕ್ಷದ (YSRTP) ಅಧ್ಯಕ್ಷೆ ವೈ.ಎಸ್ ಶರ್ಮಿಳಾ ಕುಳಿತಿದ್ದ ಕಾರನ್ನ ಹೈದರಾಬಾದ್ ಪೊಲೀಸರು ಎಳೆದೊಯ್ದಿದ್ದಾರೆ. ಅದ್ರಂತೆ, ಆಂಧ್ರಪ್ರದೇಶದ ಸಿಎಂ ವೈಎಸ್ ಜಗನ್ ಅವರ ಸಹೋದರಿ ಶರ್ಮಿಳಾ ಹೈದರಾಬಾದ್’ನ ಬೇಗಂಪೇಟ್ನಲ್ಲಿರುವ ಕ್ಯಾಂಪ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ವಾರಂಗಲ್ ಜಿಲ್ಲೆಯಲ್ಲಿ ಸೋಮವಾರ ನಡೆದ ಪಾದಯಾತ್ರೆ ವೇಳೆ ಟಿಆರ್ಎಸ್ ಕಾರ್ಯಕರ್ತರು ತಮ್ಮ ಕಾರವಾನ್ ಮೇಲೆ ನಡೆಸಿದ ಹಲ್ಲೆಗೆ ಪ್ರತಿಯಾಗಿ ವೈಎಸ್ಆರ್ಟಿಪಿ ನಾಯಕಿ ಶರ್ಮಿಳಾ ಮತ್ತು ಪಕ್ಷದ ಇತರ 50 ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಆಡಳಿತಾರೂಢ ಟಿಆರ್ಎಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಎಲ್ಲಾ ನಾಯಕರನ್ನ ಹೈದರಾಬಾದ್ ಪೊಲೀಸರು ಮಂಗಳವಾರ ಶಿಬಿರದ ಕಚೇರಿಯಲ್ಲಿ ವಶಕ್ಕೆ ಪಡೆದರು.

ಸಿಎಂ ನಿವಾಸಕ್ಕೆ ಘೇರಾವ್ ಹಾಕಲು ಪ್ರಗತಿ ಭವನಕ್ಕೆ ಹೋಗಲು ಯತ್ನಿಸಿದ ವೈ.ಎಸ್.ಶರ್ಮಿಳಾ ಅವರನ್ನ ಸೋಮಜಿಗುಡದಿಂದ ಬಂಧಿಸಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. ಪೊಲೀಸರು ಅವರನ್ನ ಸ್ಥಳೀಯ ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು.

ಈ ಹಿಂದೆ ವರದಿಯಾಗಿರುವಂತೆ, ಶರ್ಮಿಳಾ ಅವರ ಪಾದಯಾತ್ರೆಯನ್ನ ಪೊಲೀಸರು ತಡೆದು, ಚೆನ್ನರಾವ್ಪೇಟ ಮಂಡಲದಲ್ಲಿ ಅವರೊಂದಿಗೆ ಬರುತ್ತಿದ್ದ ಅವರ ಮತ್ತು ವೈಎಸ್ಆರ್ಟಿಪಿ ನಾಯಕರು ಮತ್ತು ಕಾರ್ಯಕರ್ತರನ್ನ ಬಂಧಿಸಿದರು. ವೈಎಸ್ಆರ್ಟಿಪಿ ಕಾರ್ಯಕರ್ತರು ಬಂಧನವನ್ನ ಪ್ರತಿರೋಧಿಸಲು ಪ್ರಯತ್ನಿಸಿದರು ಮತ್ತು ಪೊಲೀಸರು ಮತ್ತು ಟಿಆರ್ಎಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದರು. ಪರಿಸ್ಥಿತಿಯನ್ನ ನಿಯಂತ್ರಿಸಲು ಪೊಲೀಸರು ಸೌಮ್ಯ ಬಲವನ್ನ ಬಳಸಿದರು.

Leave A Reply

Your email address will not be published.