ಪಾಸ್ತಾ ಕಂಪನಿಯ ಮೇಲೆ ಬರೋಬ್ಬರಿ 40 ಕೋಟಿ ಮೊಕದ್ದಮೆ ಹೂಡಿದ ಮಹಿಳೆ | ಕಾರಣ ಕೇಳಿದರೆ ನೀವು ಹೀಗೂ ಇದೆಯಾ ಅಂತೀರಾ…

ಪಾಸ್ತಾ ಕಂಪನಿಯ ಮೇಲೆ ಮಹಿಳೆಯೊಬ್ಬರು ಬರೋಬ್ಬರಿ 40 ಕೋಟಿ ಮೊಕದ್ದಮೆ ಹೂಡಿದ್ದಾರೆ. ಇನ್ನೂ ಇದರ ಕಾರಣ ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ!

ಫ್ಲೋರಿಡಾದ ಮಹಿಳೆಯೊಬ್ಬರು 3.5 ನಿಮಿಷದಲ್ಲಿ ಪಾಸ್ತಾ ರೆಡಿ ಆಗಲಿಲ್ಲ ಎಂದು ಅಸಮಾಧಾನಗೊಂಡು ಅಮೇರಿಕನ್ ಆಹಾರ ಕಂಪನಿ ಕ್ರಾಫ್ಟ್ ಹೈಂಜ್ ವಿರುದ್ಧ 40 ಕೋಟಿ ರೂ. ಗೂ ಹೆಚ್ಚು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.

ಪಾಸ್ತಾ ಪ್ಯಾಕೆಟ್ ನ ಮೇಲೆ 3.5 ನಿಮಿಷದಲ್ಲಿ ಪಾಸ್ತಾ ರೆಡಿ ಆಗುತ್ತದೆ ಎಂದು ಬರೆದಿತ್ತು. ಆದರೆ ಪಾಸ್ತಾ ತಯಾರಾಗಲು ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಸಮಾಧಾನಗೊಂಡ ಫ್ಲೋರಿಡಾದ ಮಹಿಳೆಯೊಬ್ಬರು ಅಮೇರಿಕನ್ ಆಹಾರ ಕಂಪನಿ ಕ್ರಾಫ್ಟ್ ಹೈಂಜ್ ವಿರುದ್ಧ 40 ಕೋಟಿ ರೂ. ಹೆಚ್ಚು ಮೊಕದ್ದಮೆ ಹೂಡಿದ್ದಾರೆ. ಹಾಗೂ ಕ್ರಾಫ್ಟ್ ಹೈಂಜ್ ಕಂಪನಿ (ಕೆಹೆಚ್‌ಸಿ) ಫೆಡರಲ್ ಕಾನೂನನ್ನು ಉಲ್ಲಂಘಿಸಿದೆ ಎಂದು ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಸಲ್ಲಿಸಿ ಅಮಂಡಾ ರಮಿರೆಜ್ ಆರೋಪಿಸಿದ್ದಾರೆ.

ಇನ್ನೂ ಪಾಸ್ತಾ ಕಂಪೆನಿಯ ವಿರುದ್ಧ ಮಹಿಳೆಯ ದೂರು ಏನಾಗಿತ್ತೆಂದರೆ, ವೆಲ್ವೀಟಾ ಪಾಸ್ತಾ ಮತ್ತು ಚೀಸ್ 3½ ನಿಮಿಷಗಳಲ್ಲಿ ಸಿದ್ಧವಾಗುತ್ತದೆ ಎಂದು ಉತ್ಪನ್ನದ ಪ್ಯಾಕೆಟ್‌ನಲ್ಲಿ ತಿಳಿಸಲಾಗಿದೆ. ಇದು ಮ್ಯಾಕರೋನಿ ಪಾಸ್ತಾ ಮೈಕ್ರೋವೇವ್‌ನಲ್ಲಿ ಬೇಯಿಸಲು ತೆಗೆದುಕೊಳ್ಳುವ ಸಮಯವಾಗಿದೆ. ಆದರೆ ಪ್ಯಾಕೆಟ್ ನಲ್ಲಿ ಸೂಚಿಸಿದ ಸಮಯದಲ್ಲಿ ಪಾಸ್ತಾ ಸಿದ್ಧವಾಗುತ್ತಿಲ್ಲ ಎಂದು ಮಹಿಳೆ ಆಕ್ರೋಶಗೊಂಡು ದೂರು ನೀಡಿದ್ದಾರೆ.

ಆದರೆ ಡಬ್ಲ್ಯುಎಫ್‌ಎಲ್‌ಎ ವರದಿಯ ಪ್ರಕಾರ, ಈ ಪ್ರಕ್ರಿಯೆ ಹಲವಾರು ಹಂತಗಳನ್ನು ಒಳಗೊಂಡಿರುವ ಕಾರಣ ಈ ಉತ್ಪನ್ನವನ್ನು ತಯಾರಿಸಲು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಫ್ಲೋರಿಡಾದ ದಕ್ಷಿಣ ಜಿಲ್ಲೆಗಾಗಿ ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ತಿಳಿಸಿದೆ.

ಮಹಿಳೆಯು ಅಕ್ಟೋಬರ್ ಮತ್ತು ನವೆಂಬರ್ 2022ರ ನಡುವೆ ಮ್ಯಾಕ್ ಮತ್ತು ಚೀಸ್ ಕಪ್‌ಗಳನ್ನು ಖರೀದಿಸಿದ್ದರು ಎಂದು ಮೋಕದ್ದಮೆಯಲ್ಲಿ ಹೇಳಲಾಗಿದೆ. ಆದರೆ ಆಕೆ ತನ್ನ ಪಾಸ್ತಾವನ್ನು ತಯಾರಿಸಲು ತೆಗೆದುಕೊಂಡ ಸಮಯವನ್ನು ಅದರಲ್ಲಿ ನೀಡಿಲ್ಲ. ಹಾಗೂ ಮಹಿಳೆ, ಕಂಪನಿಯು ಬರೋಬ್ಬರಿ 40 ಕೋಟಿ 80 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇನ್ನೂ ಕ್ರಾಫ್ಟ್ ಹೈಂಜ್ ಕಂಪನಿಯು ಮೊಕದ್ದಮೆಯ ಬಗ್ಗೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದು, ಇದೊಂದು ‘ಕ್ಷುಲ್ಲಕ ಮೊಕದ್ದಮೆ’ ಎಂದು ಹೇಳಿದೆ. ಹಾಗೂ ಮಹಿಳೆಗೆ ಪರಿಹಾರ ನೀಡುವ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

Leave A Reply

Your email address will not be published.