ತೆರೆಮೇಲೆ ಶೀಘ್ರ ಬರಲಿದೆ ಸಿದ್ದರಾಮಯ್ಯ ‘ಬಯೋಪಿಕ್’ | ಕಾಲಿವುಡ್ ನಟ ಈ ಸಿನಿಮಾದ ಹೀರೋ ಅಂತೆ!

ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳಿಗೇನು ಭರವಿಲ್ಲ. ರಾಜಕೀಯ ವ್ಯಕ್ತಿಗಳು, ಸಾಧಕರ ಎಷ್ಟೋ ಬಯೋಪಿಕ್‌ಗಳು ತೆರೆ ಮೇಲೆ ಬಂದು ಕೆಲವು ಗೆದ್ದಿದೆ ಮತ್ತೆ ಕೆಲವು ಸೋತಿವೆ. ಈಗ ಕಾಂಗ್ರೆಸ್ ಮುಖಂಡ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ಮಾಡುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಅನ್ನೋ ಗುಸು ಗುಸು ಮಾತು ಮಾಧ್ಯಮವಲಯದಲ್ಲಿ ಹರಿದಾಡುತ್ತಿದೆ.

 

ಉತ್ತರ ಕರ್ನಾಟಕದ ಮಾಜಿ ಸಚಿವ ಶಿವರಾಜ್ ತಂಗಡಗಿ ಈಗಾಗಲೇ ಸಿದ್ಧರಾಮಯ್ಯ ಬಯೋಪಿಕ್ ಮಾಡುವುದಕ್ಕೆ ವೇದಿಕೆ ರೆಡಿ ಮಾಡಿದ್ದೂ, ಸಿದ್ದರಾಮಯ್ಯ ಅವರ ಬಳಿಗೂ ಚರ್ಚೆ ಮಾಡಿದ್ದಾರಂತೆ. ಉತ್ತರ ಕರ್ನಾಟಕ ಭಾಗದಲ್ಲಿ ಕ್ರಾಂಗ್ರೆಸ್ ಬಲಪಡಿಸಲು ಈ ಸಿನಿಮಾ ಸಹಕಾರಿಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆಂಬ ಮಾಹಿತಿ ವರದಿಯಾಗಿದೆ.

ಸಿದ್ಧರಾಮಯ್ಯ ಅವರ ಬರೋಪಿಕ್ ತೆರೆಮೇಲೆ ತರುವುದಕ್ಕೆ ತೆರೆ ಮರೆಯಲ್ಲಿ ಕಸರತ್ತುಗಳು ನಡೆಯುತ್ತಲೇ ಇದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಮಾಜಿ ಸಿಎಂ ಸಿದ್ಧರಾಮಯ್ಯ ಬಯೋಪಿಕ್‌ಗೆ ಸುಮಾರು 20 ಕೋಟಿ ರೂ. ಬಜೆಟ್ ಅನ್ನು ನಿಗದಿ ಮಾಡಲಾಗಿದ್ದೂ, ತಮ್ಮ ನಾಯಕನ ಸಿನಿಮಾವನ್ನು ಅದ್ಧೂರಿಯಾಗಿ ತೆರೆಮೇಲೆ ತರಲು ಮಾಜಿ ಸಚಿವರು ಮುಂದಾಗಿದ್ದಾರೆ.

ಆದರೆ, ಚುನಾವಣೆ ಸಮಯದಲ್ಲಿ ಬಯೋಪಿಕ್ ಬೇಡ ಎಂದು ಹೇಳುತ್ತಿದ್ದು, ಸದ್ಯ ಚುನಾವಣೆ ಬ್ಯುಸಿಯಲ್ಲಿ ಇರುವುದರಿಂದ ಇನ್ನೊಮ್ಮೆ ಚರ್ಚೆ ಮಾಡಿ ತಿಳಿಸುತ್ತೇನೆಂದು ಸಿದ್ಧರಾಮಯ್ಯ ಅವರು ಬಯೋಪಿಕ್‌ಗೆ ಅನುಮತಿ ಕೊಡಲು ಹಿಂದೇಟು ಹಾಕಿದ್ದಾರೆ.

ಮಾಜಿ ಸಿಎಂ ಸಿದ್ಧರಾಮಯ್ಯರವರ ಬಯೋಪಿಕ್‌ ಚಿತ್ರದ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ವಿಜಯ್ ಸೇತುಪತಿಯೊಂದಿಗೂ ಮಾತುಕತೆ ನಡೆಸಿದ್ದಾರಂತೆ. ಆದರೆ, ಬಯೋಪಿಕ್‌ನಲ್ಲಿ ನಟಿಸುವುದಕ್ಕೆ ವಿಜಯ್ ಸೇತುಪತಿ ಒಪ್ಪಿಗೆ ನೀಡಿದ್ದಾರಾ? ಅನ್ನೋದು ಇನ್ನೂ ತಿಳಿಯಬೇಕಿದೆ.

ಸದ್ಯ ಸಿದ್ಧರಾಮಯ್ಯ ಬಯೋಪಿಕ್ ಬಗ್ಗೆ ರಾಜಕೀಯ ವಲಯದಲ್ಲಿ ಜೋರಾಗಿಯೇ ಚರ್ಚೆ ಆರಂಭ ಆಗಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ತೆರೆಮೇಲೆ ತರಲು ಸಿದ್ಧತೆ ನಡೆಯುತ್ತಿರುವ ಸುದ್ದಿ ಕೇಳಿ ಸಿದ್ದರಾಮಯ್ಯ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Leave A Reply

Your email address will not be published.