ಓದುಗರೇ ನಿಮಗೊಂದು ಚಾಲೆಂಜ್ | ನಿಮ್ಮ ಕಣ್ಣಿನ ದೃಷ್ಟಿ ಪಕ್ಕಾ ಪರ್ಫೆಕ್ಟ್ ಆಗಿದ್ರೆ ಈ ಫೋಟೋದಲ್ಲಿರೋ ಮೊಸಳೆಯನ್ನು ಪತ್ತೆ ಹಚ್ಚಿ

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ.ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

 

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು,ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ.ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಮೊಸಳೆಯನ್ನು ಹುಡುಕುವುದು.

ಫೋಟೋದಲ್ಲಿ ನೀವು ನೆಲದ ಮೇಲೆ ಒಂದಿಷ್ಟು ಆಹಾರ ಪದಾರ್ಥಗಳು ಮತ್ತು ಅದರ ಹಿಂದೆ ಗಿಡಗಂಟಿಗಳನ್ನು ಕಾಣಬಹುದು. ಇವುಗಳ ನಡುವೆ ಒಂದು ಮೊಸಳೆ ಇದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ಒಂದನ್ನೊಂದು ಬೆರೆತು ಹೋಗಿವೆ. ಹೀಗಾಗಿ ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಮೊಸಳೆ ಫೋಟೋದ ಯಾವ ಭಾಗದಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರುವಾಗಿದೆ ತಲೆಗೆ ಬುದ್ದಿ ಕೊಟ್ಟು ನಿಮ್ಮ ಮೆದುಳಿನ ಸಾಮರ್ಥ್ಯವನ್ನು ಪತ್ತೆಹಚ್ಚಿ.

ಹುಡುಕಾಟ ನಡೆಸಿದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ, ಹುಡುಕಿ ಸಾಕಾಗಿ ಚಾಲೆಂಜ್ ಅಲ್ಲಿ ಸೋತ್ರೀ ಅಂತ ಒಪ್ಪಿಕೊಂಡೋರು ಮಾತ್ರ ಈ ಕೆಳಗಿನ ಚಿತ್ರ ನೋಡಿ. ಒಂದು ವೇಳೆ ನೀವು ಮೊದಲೇ ಪತ್ತೆ ಹಚ್ಚಿದ್ರಿ ಎಂದಿದ್ರೆ ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದೆ ಎಂದು ಭಾವಿಸಿಕೊಳ್ಳಿ. ಇಲ್ಲಿಯವರೆಗೆ ಮೊಸಳೆಯನ್ನು ಗುರುತಿಸಲು ಆಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿರುವವರು ಈ ಕೆಳಗಿನ ಚಿತ್ರವನ್ನು ನೋಡಿ ಉತ್ತರ ಪಡೆದುಕೊಳ್ಳಿ.

Leave A Reply

Your email address will not be published.