ಷಷ್ಠಿ ಸಂಭ್ರಮದ ನಡುವೆ ಕುಕ್ಕೆಗೆ ಇಲ್ಲದಾಯಿತು ಸರಿಯಾದ ಬಸ್ ವ್ಯವಸ್ಥೆ!! ಕೆ.ಎಸ್.ಆರ್.ಟಿ.ಸಿ ಗೆ ಸಾರ್ವಜನಿಕರ ಧಿಕ್ಕಾರ!!
ಕಡಬ: ಕುಕ್ಕೇ ಸುಬ್ರಹ್ಮಣ್ಯದಲ್ಲಿ ಷಷ್ಠಿ ರಥೋತ್ಸವದ ನಡುವೆ ಸಾರ್ವಜನಿಕರು ಪಾದರಾಡುವಂತಹ ಪರಿಸ್ಥಿತಿಗೆ ಕೆ.ಎಸ್.ಆರ್.ಟಿ.ಸಿ ಕಾರಣವಾಯಿತು.
ದಕ್ಷಿಣ ಭಾರತದ ಅತ್ಯಂತ ಪವಿತ್ರ ನಾಗ ಕ್ಷೇತ್ರವಾದ ಕುಕ್ಕೇ ಸುಬ್ರಮಣ್ಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಷಷ್ಠಿ ಸಂಭ್ರಮವಿದ್ದು,ಹೊರ ಊರುಗಳಿಂದ ಆಗಮಿಸುವ ಭಕ್ತಾದಿಗಳಿಗಿಂತಲೂ ಈ ದಿನ ಗ್ರಾಮೀಣ ಭಾಗದಿಂದ ಬರುವಂತಹ ಭಕ್ತಾದಿಗಳೇ ಹೆಚ್ಚಿರುತ್ತಾರೆ.
ಇದೆಲ್ಲದರ ನಡುವೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ಹೋಗುವ ಭಕ್ತಾದಿಗಳು ಮುಂಜಾನೆ ಸುಮಾರು ಆರರಿಂದಲೇ ರಸ್ತೆ ಬದಿ ನಿಂತಿದ್ದು, ಸಮಯಕ್ಕೆ ಸರಿಯಾಗಿ ಬರುವ ಬಸ್ಸು ಬಾರದೆ ಪರದಾಡಿದಲ್ಲದೇ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಒಂದು ಬಸ್ಸು ಬಂದರೂ ಮೆಟ್ಟಿಲಲ್ಲಿ ನಿಂತು ಪ್ರಯಾಣಿಸುವ ಪರಿಸ್ಥಿತಿ ಎದುರಾಯಿತು.
ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕರು ಪರದಾಡುವಂತೆ ಮಾಡಿದ ಕೆ ಎಸ್ ಆರ್ ಟಿ ಸಿ ವಿರುದ್ಧ ಸಾರ್ವಜನಿಕರೇ ಕಿಡಿಕಾರಿದ್ದಾರೆ.