ಮದುವೆಯ ಸಮಯದಲ್ಲಿ ಕೂಡಾ ಕೆಲಸದಲ್ಲಿ ಮಗ್ನನಾದ ವರ | ಅಂದ್ಹಾಗೆ ವಧು ಈತನನ್ನು ನೋಡಿ ಏನೆಂದಳು ಗೊತ್ತೇ ?
ಜಗತ್ತು ಎಂದು ಕೇಳರಿಯದ ಕೋರೋನಾ ಮಹಾಮಾರಿಗೆ ಇಡೀ ಜಗತ್ತೇ ತತ್ತರಿಸಿದ್ದು ಗೊತ್ತೇ ಇದೆ. ಈ ನಡುವೆ ರೋಗ ಹರಡುವ ಭೀತಿಯಿಂದ ವರ್ಕ್ ಫ್ರಮ್ ಹೋಮ್ ಅನ್ನುವ ಕಾನ್ಸೆಪ್ಟ್ ಬಂದು ನಾಲ್ಕು ಗೋಡೆಯ ನಡುವೆ ಬಂಧಿಯಾಗಿ, ಕೈಯಲ್ಲಿ ಲಾಪ್ ಟಾಪ್ ಹಿಡಿದು ಕುಳಿತರೆ ಹಗಲು ರಾತ್ರಿಗಳ ಪರಿವೆ ಇಲ್ಲದ ದುಡಿಮೆ!!!
ಈ ವರ್ಕ್ ಫ್ರಮ್ ಹೋಮ್ ಜನರಲ್ಲಿ ಎಷ್ಟು ಪ್ರಭಾವ ಬೀರಿದೆ ಎಂದರೆ ಹೊರ ಜಗತ್ತಿನ ಪರಿವೇ ಇಲ್ಲದೇ ಗಾಣದೆತ್ತಿನಂತೆ ದುಡಿಯುವುದೆ ಆಗಿಬಿಟ್ಟಿದೆ!! ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದು ವೈರಲ್ ಆಗಿದ್ದು , ವರನೊಬ್ಬನ ಅವಸ್ಥೆ ಕಂಡು ನೆಟ್ಟಿಗರು ಅಯ್ಯೋ!!! ಎಂತಾ ಕಾಲ ಬಂತಪ್ಪಾ!!! ಎಂದು ಆಡಿಕೊಳ್ಳುತ್ತಿದ್ದಾರೆ!! ಅಷ್ಟಕ್ಕೂ ಅಸಲಿ ಕಹಾನಿ ಏನು?? ಅಂತ ನಾವು ಹೇಳ್ತೀವಿ ಕೇಳಿ!!!
ಕೊಲ್ಕತ್ತ ವರಮಹಾಶಯನೊಬ್ಬ ತನ್ನದೇ ಮದುವೆ ನಡೆಯುತ್ತಿದ್ದರೂ ಆಫೀಸಿನ ಕೆಲಸದಲ್ಲಿ ಮುಳುಗಿ ಹೋಗಿದ್ದರೆ, ಮತ್ತೊಂದೆಡೆ ಪುರೋಹಿತರು ಅವರ ಪಾಡಿಗೆ ತಾವು ಮದುವೆಯ ವಿಧಿ ವಿಧಾನಗಳನ್ನು ನಡೆಸುತ್ತಿದ್ದಾರೆ. ಮತ್ತೊಂದೆಡೆ ವರ ಮಹಾಶಯ ಲ್ಯಾಪ್ ಟಾಪ್ ಹಿಡಿದು ಆಫೀಸ್ ಕೆಲಸದಲ್ಲಿ ಮುಳುಗಿದ್ದು ನೋಡಿದವರು ಯಾರದ್ದೋ ಬೇರೆಯವರ ಮದುವೆ ಇರಬೇಕೇನೋ ಎಂದುಕೊಂಡರು ಅಚ್ಚರಿಯಿಲ್ಲ.
ಈ ಫೋಟೋ ನೋಡಿದ ನೆಟ್ಟಿಗರಂತೂ ವರನ ಅವಸ್ಥೆ ಕಂಡು ಮರುಗುತ್ತಿದ್ದಾರೆ. ಕೊಲ್ಕತ್ತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದ್ದು, ಸದ್ಯ ಈ ಫೋಟೋ ಎಲ್ಲೆಡೆ ಹರಿದಾಡಿ ಸಂಚಲನ ಮೂಡಿಸಿದೆ.ವರ್ಕ್ ಫ್ರಮ್ ಹೋಮ್ ಎಷ್ಟು ಜನರ ಮೇಲೆ ಪ್ರಭಾವ ಬೀರಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ವರದಿಯಾಗಿದೆ.
ಕೆಲವೊಂದು ಕಂಪೆನಿಗಳು ಎಂತಹ ಪರಿಸ್ಥಿತಿ ಬಂದರೂ ರಜೆ ನೀಡುವುದಿಲ್ಲ!! ಹಾಗಾಗಿ, ಉದ್ಯೋಗಿಗಳು ವಿಧಿ ಇಲ್ಲದೇ, ವ್ಯಕ್ತಿಗಳು ತಾವು ಹೋದಲ್ಲಿ ಬಂದಲ್ಲಿ ಲ್ಯಾಪ್ ಟಾಪ್ ಅನ್ನು ಒಯ್ದು ಕೆಲಸದಲ್ಲಿ ನಿರತಾಗಿರುತ್ತಾರೆ. ಇಲ್ಲಿ ಮದುಮಗನ ತನ್ನ ಮದುವೆಯ ದಿನ ಮದುವೆ ಶಾಸ್ತ್ರ ನಡೆಯುತ್ತಿದ್ದರೆ ಇತ್ತ ವರ ಕೈಯಲ್ಲಿ ಲ್ಯಾಪ್ ಟಾಪ್ ಹಿಡಿದುಕೊಂಡು ಕೆಲಸದಲ್ಲೇ ಮಗ್ನನಾಗಿದ್ದು, ಈ ಫೋಟೋ ನೋಡಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಭರಿತವಾಗಿ ಕೆಲವರು ಪ್ರತಿಕ್ರಿಯೆ ನೀಡಿದ್ದರೆ, ಮತ್ತೆ ಕೆಲವರು ಇದೊಂದು ಆಘಾತಕಾರಿ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ವ್ಯಕ್ತಿ, ” ನನಗೆ ಇದು ತಮಾಷೆಯಾಗಿ ಕಂಡು ಬರುತ್ತಿಲ್ಲ . ಇದರ ಜೊತೆಗೆ ಯಾವುದೇ ಸಂಸ್ಥೆಯು ತನ್ನ ಉದ್ಯೋಗಿಯನ್ನು ಅವನ ಮದುವೆಯ ದಿನವೂ ಕೆಲಸ ಮಾಡಿಸುವ ಹಂತಕ್ಕೆ ಹೋಗುವುದಿಲ್ಲ “ಎಂದು ಕಾಮೆಂಟ್ ಮಾಡಿದ್ದಾರೆ.. ಬೆಕ್ಕಿಗೆ ಆಟ..ಇಲಿಗೆ ಪ್ರಾಣಸಂಕಟ ಎಂಬಂತೆ ನೋಡುಗರಿಗೆ ತಮಾಷೆಯಾಗಿ ಕಾಣುವ ಈ ಫೋಟೋ ಆದರೆ, ವರನಿಗೆ ಮಾತ್ರ ನುಂಗಲಾರದ ಬಿಸಿ ತುಪ್ಪದಂತೆ ಪರಿಣಮಿಸಿರುವುದಂತು ಸುಳಲ್ಲ!!