Infertility in India: ದೇಶದಲ್ಲೇ ಇಲ್ಲಿನ ಪುರುಷರಲ್ಲಿ ವೀರ್ಯಾಣು ಸಮಸ್ಯೆ ಅತ್ಯಧಿಕ: ಸಮೀಕ್ಷೆ
ರಾಜ್ಯದ ಪುರುಷರಲ್ಲಿ ಉಲ್ಬಣಿಸಿರುವ ವೀರ್ಯಾಣು ಬಿಕ್ಕಟ್ಟನ್ನು ಅಧ್ಯಯನ ಮಾಡಿದಾಗ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಹೌದು ಅದರಲ್ಲೂ ನಗರಗಳಲ್ಲಿ ಸಂತಾನ ಸಮಸ್ಯೆ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದೆ. ನಗರದಲ್ಲಿರುವ ಬಹುಪಾಲು ಜನರ ಜೀವನ ಶೈಲಿ ಜಡ. ಇದುವೇ ಸಂತಾನಹೀನತೆಯ ಸಮಸ್ಯೆಗೆ ಪ್ರಧಾನ ಕಾರಣ ಆಗಿರಬಹುದು ಅದಲ್ಲದೆ ಅತಿ ಜಿಡ್ಡಿನ ಆಹಾರ, ಕಲಬೆರಿಕೆ ಆಹಾರ ದೇಹವನ್ನು ಜಡತ್ವಕ್ಕೆ ಪ್ರೇರೆಪನೆ ನೀಡುತ್ತದೆ. ಒತ್ತಡ, ಎಡೆಬಿಡದ ಕೆಲಸ, ಅತಿಯಾದ ಕುಡಿತದ ಚಟ, ತಡವಾದ ಮದುವೆ, ಸಮಯಪಾಲನೆ ಮುಂತಾದವುಗಳಿಂದ ಮನುಷ್ಯ ಮರೆ ಮಾಚಿದ್ದಾನೆ. ಹೌದು ರಾಜ್ಯದ ಪುರುಷರಲ್ಲಿ ಉಲ್ಬಣಿಸಿರುವ ವೀರ್ಯಾಣು ಬಿಕ್ಕಟ್ಟನ್ನುಹಿಕ ಚಟುವಟಿಕೆಗೆ ಅವಕಾಶವೇ ಇಲ್ಲದ ಜಡ ಜೀವನ ಶೈಲಿ ರೂಢಿಸಿಕೊಂಡ ಯುವಜನರಲ್ಲಿ ವೀರ್ಯಾಣು ಸಮಸ್ಯೆ ಹೆಚ್ಚಾಗಿದೆ ಎಂಬ ಮಾಹಿತಿ ಸತ್ಯಂಶ ಅಧ್ಯಯನ ಮೂಲಕ ಬೆಳಕಿಗೆ ಬಂದಿದೆ.
ಮುಖ್ಯವಾಗಿ ಪಶ್ಚಿಮ ಬಂಗಾಳದ ಪುರುಷರಲ್ಲಿ ‘ವೀರ್ಯ ವಿರೂಪ’ ಸಮಸ್ಯೆ ಗರಿಷ್ಟ ಪ್ರಮಾಣದಲ್ಲಿದ್ದು, ಸಂತಾನಹೀನತೆ ಬಿಕ್ಕಟ್ಟು ಹೆಚ್ಚಿದೆ ಎಂದು ಸಮೀಕ್ಷೆ ವರದಿಯೊಂದು ತಿಳಿಸಿದೆ.
ಅಧ್ಯಯನ ವರದಿಗಳ ಪ್ರಕಾರ ಗರ್ಭಧಾರಣೆ ಸಮಸ್ಯೆಯು ದೇಶದಲ್ಲಿ ತೀವ್ರಗೊಂಡಿದ್ದು, ಇದಕ್ಕೆ ವೈದ್ಯಕೀಯ ಪರಿಹಾರದ ದಾರಿ ಹುಡುಕುವವರ ಪ್ರಮಾಣ ಏರಿಕೆಯಾಗಿದೆ. ವೈದ್ಯಕೀಯ ಪರಿಹಾರಗಳಲ್ಲಿ ಇನ್-ವಿಟ್ರೊ ಫರ್ಟಿಲೈಜಷನ್ (ಐವಿಎಫ್) ಪ್ರಧಾನವಾಗಿದೆ. ಈ ಚಿಕಿತ್ಸೆಗೆ ಒಳಗಾಗುವ ಬಂಗಾಳಿಗಳ ಸಂಖ್ಯೆ ದೇಶದಲ್ಲಿಯೇ ಅತಿ ಗರಿಷ್ಟ ಆಗಿದೆ ಎಂಬ ಮಾಹಿತಿ ನೀಡಿದೆ.
ನಗರದಲ್ಲಿರುವ ಬಹುಪಾಲು ಜನರ ಜೀವನ ಶೈಲಿ ಜಡ. ಇದುವೇ ಸಂತಾನಹೀನತೆಯ ಸಮಸ್ಯೆಗೆ ಪ್ರಧಾನ ಕಾರಣ ಎನ್ನುತ್ತವೆ ಅಧ್ಯಯನ ವರದಿಗಳು. ಅತಿ ಜಿಡ್ಡಿನ ಆಹಾರ, ಕಲಬೆರಿಕೆ ಕಾಟವು ದೇಹವನ್ನು ಆಂತರಿಕವಾಗಿ ಸಮಸ್ಯೆಗಳ ತಾಣವಾಗಿ ಮಾಡಿದೆ. ಒತ್ತಡ ಕೂಡ ಮತ್ತೊಂದು ಕಾರಣ. ಎಡೆಬಿಡದ ಕೆಲಸ, ಅತಿಯಾದ ಕುಡಿತದ ಚಟ, ತಡವಾದ ಮದುವೆ, ಸಮಯಪಾಲನೆ ಸಮಸ್ಯೆಯು ಫಲವತ್ತತೆ ಬಿಕ್ಕಟ್ಟನ್ನು ಹೆಚ್ಚಿಸಿವೆ ಎನ್ನುತ್ತವೆ ಸಮೀಕ್ಷೆಗಳು.
ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಐವಿಎಫ್ ಚಿಕಿತ್ಸೆಗೆ ಬಂದ 64,452 ಜೋಡಿಯನ್ನು ಪರೀಕ್ಷೆಗೆ ಒಳಪಡಿಸಿದ ತಜ್ಞರ ತಂಡಕ್ಕೆ ಬೆಚ್ಚಿಬೀಳಿಸುವ ಮಾಹಿತಿ ಪತ್ತೆಯಾಗಿದೆ. ಇವರಲ್ಲಿ ಶೇ.86ರಷ್ಟು ಪುರುಷರಿಗೆ ಗಂಭೀರ ಸಮಸ್ಯೆಗಳಿವೆ. ಅವರ ಮೂರಲ್ಲಿ ಒಂದು ವೀರ್ಯಾಣು ವಿರೂಪಗೊಂಡು, ಫಲಸೃಷ್ಟಿ ಸಾಮರ್ಥ್ಯ ಕಳೆದುಕೊಂಡಿದೆ. ದಂಪತಿ ಬಂಜೆತನಕ್ಕೆ ವೀರ್ಯಾಣು ವಿರೂಪ ಸಮಸ್ಯೆಯ ಪಾಲು ಶೇ. 61ರಷ್ಟಿದೆ,” ಎಂಬುವುದು ಜನವರಿ-ಅಕ್ಟೋಬರ್ ನಡುವೆ ಬಂಗಾಳದಲ್ಲಿ ನಡೆದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಈಗಾಗಲೇ ರಾಜ್ಯದ ಪುರುಷರಲ್ಲಿ ಉಲ್ಬಣಿಸಿರುವ ವೀರ್ಯಾಣು ಬಿಕ್ಕಟ್ಟನ್ನು ಮೂರು ವಿಧಗಳಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ”ವೀರ್ಯಾಣು ಸಂಖ್ಯೆ, ಅವುಗಳ ಚಲನಶೀಲತೆ ಮತ್ತು ವಿರೂಪ, ಈ ಮಾನದಂಡದ ಅಡಿ ಅಧ್ಯಯನ ಮಾಡಲಾಗಿದೆ. ಸಂತಾನಹೀನತೆ ಸಮಸ್ಯೆ ಎದುರಿಸುತ್ತಿರುವ ಗಂಡಸರಲ್ಲಿ ಶೇ. 80ರಷ್ಟು ಮಂದಿಗೆ ಗಂಭೀರ ಸಮಸ್ಯೆಗಳಿವೆ. ಪುರುಷರಲ್ಲಿನ ವೀರ್ಯಾಣು ಸಮಸ್ಯೆ 2018ರಲ್ಲಿ ಶೇ. 79ರಷ್ಟಿತ್ತು. 2021ರಲ್ಲಿ ಅದರ ಪ್ರಮಾಣ ಶೇ. 96ಕ್ಕೆ ಏರಿಕೆಯಾಗಿದೆ. ನಾವು ಅಧ್ಯಯನಕ್ಕೆ ಒಳಪಡಿಸಿದ ಪುರುಷರಲ್ಲಿ ಶೇ. 10.8ರಷ್ಟು ಮಂದಿಗೆ ವೀರ್ಯಾಣುಗಳ ಸಂಖ್ಯೆ ಶೂನ್ಯವಾಗಿದೆ,” ಎಂದು ಇಂದಿರಾ ಐವಿಎಫ್ ಕೇಂದ್ರದ ಎಂಡಿ ನಿತೀಜ್ ಮುರ್ಡಿಯಾ ಹೇಳಿದ್ದಾರೆ.
ಇಡೀ ದೇಶದಲ್ಲಿಯೇ ‘ಫಲವತ್ತತೆ’ ಸಮಸ್ಯೆ ವ್ಯಾಪಕಗೊಳ್ಳತೊಡಗಿದೆ. ಬಂಗಾಳವು ಮೊದಲ ಸ್ಥಾನಕ್ಕೆ ಏರಿದೆ. ಆದರೆ ಸಂತಾನ ಪಡೆಯಬೇಕು ಎನ್ನುವ ಧಾವಂತ ಶುರುವಾದಾಗ ಮಾತ್ರ ಮೊದಲ ಹಂತದಲ್ಲಿ ಮಹಿಳೆಯರನ್ನೇ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಮಸ್ಯೆ ಮಾತ್ರ ಇಬ್ಬರಲ್ಲೂ ಸಮನಾಗಿಯೇ ಇದೆ ಎನ್ನುತ್ತಾರೆ ಬಿರ್ಲಾ ಐವಿಎಫ್ ಕೇಂದ್ರದ ಮುಖ್ಯಸ್ಥ ಸೌರನ್ ಭಟ್ಟಾಚಾರ್ಯ.
ಜನರು ಇನ್ನಾದರೂ ತಮ್ಮ ಆಧುನಿಕ ಜೀವನದ ಒಲವು ಮತ್ತು ಕೆಲವೊಂದು ಅಹಿತಕರ ಅಭ್ಯಾಸಗಳನ್ನು ನಿಲ್ಲಿಸುವಲ್ಲಿ ಪ್ರಯತ್ನಿಸಬೇಕಾಗಿದೆ. ಮುಂದಿನ ಪೀಳಿಗೆಯಲ್ಲಿ ವೀರ್ಯಾಣು ಸಮಸ್ಯೆ ಹೆಚ್ಚು ಹೆಚ್ಚು ತಲೆದೋರುವ ಮುನ್ನ ಜಾಗೃತ ವಹಿಸಬೇಕಾಗಿದೆ.