Skin Care: ಸುಂದರಿಯರೇ..ನೀವು ಪಾರ್ಲರ್ ಗೆ ಹೋಗೋ ಅವಶ್ಯಕತೆಯೇ ಇಲ್ಲಾ! ಮನೆಯಲ್ಲೇ ಈ ಒಂದು ವಸ್ತುವಿನಿಂದ ಫೇಶಿಯಲ್ ತಟ್ಟನೆ ರೆಡಿ ಮಾಡಿ

ಸುಂದರವಾಗಿ ಕಾಣೋದು ಯಾರಿಗೆ ಇಷ್ಟ ಇಲ್ಲ ಹೇಳಿ ಎಲ್ಲರಿಗೂ ಇಷ್ಟಾನೆ. ಪ್ರತಿಯೊಬ್ಬ ಮಹಿಳೆಯೂ ತಮ್ಮ ತ್ವಚೆಯ ಆರೈಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಕೆಲವರು ತಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ನಾನಾ ರೀತಿಯ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುತ್ತಾರೆ. ಇನ್ನೂ ಹಲವರು ಫೇಶಿಯಲ್​ ಮಾಡಿಸಲು ಪಾರ್ಲರ್ ಹೋಗುತ್ತಾರೆ. ಆದರೆ ಅಲ್ಲೂ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುತ್ತಾರೆ. ಅದರ ಬದಲು ಮನೆಯಲ್ಲಿಯೇ ಕೇವಲ ಒಂದು ವಸ್ತು ಬಳಸಿ ಸುಲಭವಾಗಿ ಫೇಶಿಯಲ್ ಮಾಡಿಕೊಳ್ಳಬಹುದು. ಆ ಒಂದು ವಸ್ತು ಯಾವುದು? ಹೇಗೆ ಫೇಶಿಯಲ್ ಮಾಡೋದು? ಇದರ ವಿವರ ಇಲ್ಲಿದೆ.

 

ಮನೆಯಲ್ಲಿಯೇ ಮಾಡಬಹುದಾದ ವಿವಿಧ ಫೇಶಿಯಲ್‌ಗಳು ಇವೆ. ಆದರೆ ಒಂದು ವಸ್ತುವಿನಿಂದ ವಿವಿಧ ಫೇಶಿಯಲ್ ಕೂಡ ಮಾಡಬಹುದು. ಆ ವಸ್ತು ಯಾವುದೆಂದರೆ, ಅಲೋವೆರಾ. ಇದರಿಂದ ನೀವು ಮನೆಯಲ್ಲಿಯೇ ಅಲೋವೆರಾ ಫೇಶಿಯಲ್ ಮಾಡಿಕೊಳ್ಳಬಹುದು. ಹೇಗೆ ಎಂಬುದು ಇಲ್ಲಿದೆ.

  • ಕೇವಲ ಆಲೋವೆರಾವನ್ನು ಬಳಸಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಬಹುದು. ನೀವು ಇನ್ನಷ್ಟು ಸುಂದರವಾಗಿ ಕಾಣಬಹುದು. ಹೇಗೆಂದರೆ, ಈ ಅಲೋವೆರಾ ಜೆಲ್ ಗೆ ಸ್ವಲ್ಪ ಅರಿಶಿನ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದನ್ನು ಮುಖಕ್ಕೆ ಹಚ್ಚಿ, ಸುಮಾರು 30 ನಿಮಿಷಗಳ ಬಳಿಕ ಮುಖವನ್ನು ತೊಳೆಯಿರಿ.
  • ಇನ್ನೂ ಅಲೋವೆರಾ ಮತ್ತು ಶ್ರೀಗಂಧದ ಪುಡಿಯಿಂದ ಫೇಶಿಯಲ್ ಮಾಡಬಹುದು. ಶ್ರೀಗಂಧದ ಪುಡಿ ಮತ್ತು ಅಲೋವೆರಾ ಜೆಲ್ ಅನ್ನು ಮಿಕ್ಸ್ ಮಾಡಿ, ನಂತರ ನಿಮ್ಮ ಮುಖಕ್ಕೆ ಹಚ್ಚಿ. ಹಾಗೂ 15 ನಿಮಿಷಗಳ ನಂತರ ಮುಖ ತೊಳೆಯಿರಿ. ಈ ಫೇಶಿಯಲ್ ನಿಮ್ಮ ಮುಖದಲ್ಲಿರುವ ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
  • ಅಲೋವೆರಾ ಮತ್ತು ಜೇನುತುಪ್ಪದ ಫೇಶಿಯಲ್ ಕೂಡ ಉತ್ತಮವಾಗಿದೆ. ಹೆಚ್ಚಾಗಿ ಈ ಎರಡನ್ನೂ ತ್ವಚೆಯ ಆರೈಕೆಗೆ ಬಳಸುತ್ತಾರೆ. ಜೇನುತುಪ್ಪ ತಿನ್ನಲು ಮಾತ್ರ ಸಿಹಿಯಲ್ಲ ತ್ವಚೆಗೂ ಸಿಹಿ. ಅಲೋವೆರಾ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, 20 ನಿಮಿಷದ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
  • ಅಲೋವೆರಾ ಮತ್ತು ನಿಂಬೆರಸ ಕೇವಲ ತ್ವಚೆಯ ಆರೈಕೆಗೆ ಮಾತ್ರವಲ್ಲ ಕೂದಲ ಆರೈಕೆಗೆ ಸಹ ಸಹಕಾರಿಯಾಗಿದೆ. ಅಲೋವೆರಾ ಜೆಲ್ ಮತ್ತು ನಿಂಬೆರಸ ಮಿಕ್ಸ್ ಮಾಡಿ. ನಂತರ ಮುಖಕ್ಕೆ ಹಚ್ಚಿ. 1 ಗಂಟೆಯ ಬಳಿಕ ಮುಖ ತೊಳೆಯಿರಿ.
  • ಹಾಗೇ ಅಲೋವೆರಾ ಫೇಶಿಯಲ್ ಅನ್ನು ಅಕ್ಕಿಹಿಟ್ಟು ಬಳಸಿ ಕೂಡ ಮಾಡಬಹುದು. ಅಕ್ಕಿಹಿಟ್ಟಿಗೆ ನೀರು ಹಾಕದೆ ಅದಕ್ಕೆ ಅಲೋವೆರಾ ಜೆಲ್ ಅನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ನಂತರ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ಮುಖ ತೊಳೆಯಿರಿ.
  • ಇನ್ನೂ ತುಪ್ಪದಲ್ಲಿ ಆರೋಗ್ಯಕರ ಅಂಶ ಹೊಂದಿದ್ದು ಅದನ್ನು ತಿನ್ನುವುದಿಂದ ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲ. ಮುಖಕ್ಕೆ ಹಚ್ಚುವುದರಿಂದ ಸಹ ಹಲವು ಪ್ರಯೋಜನವಿದೆ. ಅಲೋವೆರಾ ಜೆಲ್ ಗೆ ಸ್ವಲ್ಪ ಪ್ರಮಾಣದ ತುಪ್ಪವನ್ನು ಸೇರಿಸಿ, ಎರಡನ್ನೂ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

Leave A Reply

Your email address will not be published.