ಆಲಂಕಾರು : ಮುಸ್ಲಿಂ ಯುವಕನ ಬಾಡಿಗೆ ಮನೆಯಲ್ಲಿ ಹಿಂದೂ ಯುವತಿ ಪತ್ತೆ

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಲವ್ ಜಿಹಾದ್ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಕರಾವಳಿ ಜಿಲ್ಲೆಯಲ್ಲೂ ಕೂಡ ತರೆಮರೆಯಲ್ಲಿ ಕೆಲವೊಂದು ಮತಾಂತರ ಪ್ರಕರಣಗಳು ನಡೆಯುತ್ತಿವೆ ಎನ್ನುವ ಆರೋಪವು ಕೇಳಿಬಂದಿವೆ.
ಈ ನಡುವೆ, ಆಲಂಕಾರಿನ ಹಿಂದೂ ಯುವತಿ ಅನ್ಯಕೋಮಿನ ಯುವಕನ ಜೊತೆಗೆ ಓಡಾಟ ನಡೆಸಿರುವ ಘಟನೆ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ರವಿವಾರ ಸಂಜೆ ನಡೆದಿದೆ.ಹಿಂದೂ ಯುವತಿಯನ್ನು ಮಂಜೇಶ್ವರ ಮುಡಿಪಿನವರು ಎಂದು ತಿಳಿದು ಬಂದಿದ್ದು, ಈ ನಡುವೆ ಅನ್ಯಕೋಮಿನ ಯುವಕನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.

ಅನ್ಯಕೋಮಿನ ಯುವಕ ತನ್ನ ಕೆಲಸದ ನೆಪದಲ್ಲಿ ಕೊಂತೂರು ಪೆರಾಬೆ ಕ್ರಾಮದ ಕೋಚಕಟ್ಟೆಯಲ್ಲಿ ಬಾಡಿಗೆ ರೂಮಿನಲ್ಲಿ ತಂಗಿದ್ದ ಅಲ್ಲದೆ,ಹಿಂದೂ ಯುವತಿಯನ್ನು ಅಲ್ಲಿಗೆ ಬರಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಹಿಂದೂ ಯುವತಿಯು ಅನ್ಯಕೋಮಿನ ಯುವಕನ ಜೊತೆಗೆ ಒಂದೇ ರೂಮಿನಲ್ಲಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೂಮಿಗೆ ತಲುಪಿದ ಕೂಡಲೇ ಹಿಂದೂ ಯುವತಿ ಹಾಗೂ ಅನ್ಯಕೋಮಿನ ಯುವಕ ಇಬ್ಬರೂ ಹಿಂಬಾಗಿನ ಮೂಲಕ ಪರಾರಿಯಾಗಿದ್ದಾರೆ .

ಸ್ಥಳೀಯರ ಮಾಹಿತಿ ಅನ್ವಯ ಆ ರೂಮಿನಲ್ಲಿ ಇಬ್ಬರು ಅನ್ಯಕೋಮಿನ ಯುವಕರಿದ್ದರು ಎನ್ನಲಾಗಿದ್ದು, ಯುವತಿಯನ್ನು ಕರೆತಂದ ಯುವಕನ ಹೆಸರು ಸವಾದ್‌ ಎಂದು ತಿಳಿದು ಬಂದಿದೆ. ಹಾಗಾಗಿ, ಸ್ಥಳೀಯರ ಮಾಹಿತಿ ಅನ್ವಯ, ಹಿಂದೂ ಯುವತಿಯ ಜೊತೆಗೆ ರೂಮಿನಲ್ಲಿದ್ದ ಇಬ್ಬರೂ ಯುವಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಅಷ್ಟಕ್ಕೇ ಸುಮ್ಮನಾಗದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಯುವತಿಯ ಬಗ್ಗೆ ಮಾಹಿತಿ ಕಲೆ ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ, ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ವಿಚಾರಣೆ ನಡೆಸಿದ ಬಳಿಕ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

Leave A Reply

Your email address will not be published.