ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ರಾಜ್ಯ ಸರಕಾರದಿಂದ ಭರ್ಜರಿ ಗುಡ್ ನ್ಯೂಸ್!
ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು ಜನ ಸಾಮಾನ್ಯರಿಗೆ ಮನೆ ಖರೀದಿ ಹೊರೆ ಇಳಿಕೆ ಮಾಡಿದೆ.
ಮುಖ್ಯಮಂತ್ರಿಗಳ ಒಂದು ಲಕ್ಷ ಬಹು ಮಹಡಿ ವಸತಿ ಯೋಜನೆ ಅಡಿಯಲ್ಲಿ ಮನೆ ಖರೀದಿ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡಲಾಗಿದೆ. ಸಾಮಾನ್ಯ ವರ್ಗದವರಿಗೆ ಪ್ರತಿ ಮನೆಗೆ 7.9 ಲಕ್ಷ ರೂ. ನಿಗದಿಯಾಗಿದ್ದು ಇದನ್ನು 6.5 ಲಕ್ಷ ರೂಗೆ ಇಳಿಕೆ ಮಾಡಲಾಗಿದೆ.
ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 7.10 ಲಕ್ಷ ರೂ.ನಿಗದಿಯಾಗಿದ್ದು, ಈ ಮೊತ್ತವನ್ನು 6 ಲಕ್ಷ ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸರ್ಕಾರದಿಂದಲೇ ಮೂಲ ಸೌಕರ್ಯ ಬಾಬ್ತು 2.09 ಲಕ್ಷ ರೂ. ಭರಿಸಲಾಗುವುದು. ಹೀಗೆ ಮುಖ್ಯಮಂತ್ರಿಗಳ ಒಂದು ಲಕ್ಷ ಬಹು ಮಹಡಿ ವಸತಿ ಯೋಜನೆ ಅಡಿಯಲ್ಲಿ ಮನೆ ಖರೀದಿ ಮೊತ್ತವನ್ನು ಸರ್ಕಾರ ಮತ್ತಷ್ಟು ಇಳಿಕೆ ಮಾಡಿ ಹೊರೆ ಕಡಿಮೆ ಮಾಡಿದೆ.