ಸಾರ್ವಜನಿಕರೇ ನಿಮಗೊಂದು ಮುಖ್ಯವಾದ ಮಾಹಿತಿ | ಡಿ.2 ರಿಂದ ಈ ರೈಲುಗಳು ಮತ್ತೆ ಆರಂಭ | ಯಾವುದೆಲ್ಲಾ? ಇಲ್ಲಿದೆ ಸಂಪೂರ್ಣ ಪಟ್ಟಿ!!!
ರೈಲ್ವೆ ಪ್ರಯಾಣಿಕರಿಗೆ ಸಂಚರಿಸಲು ನೆರವಾಗುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ವಿವಿಧ ಕಾರಣಗಳಿಂದ ರದ್ದಾಗಿದ್ದ ಹಲವು ರೈಲು ಸೇವೆಗಳು ಪುನಾರಂಭವಾಗಲಿವೆ.
ಈ ಕುರಿತು ನೈಋತ್ಯ ರೈಲ್ವೆ ಪ್ರಕಟಣೆ ನೀಡಿದ್ದು, ಪುನರಾರಂಭಗೊಳ್ಳುವ ರೈಲುಗಳ ಮಾಹಿತಿಯನ್ನು ನೀಡಿದೆ; ರೈಲು ಪ್ರಯಾಣಿಕರಿಗೆ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಡಿಸೆಂಬರ್ 1 ಮತ್ತು 2ರಿಂದ ವಿವಿಧ ರೈಲ್ವೆ ಸೇವೆಗಳು ಲಭ್ಯವಾಗಲಿವೆ.
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಈ ಕುರಿತು ಮಾಹಿತಿ ನೀಡಿದ್ದು, ಹುಬ್ಬಳ್ಳಿ, ಗದಗ, ವಿಜಯಪುರ, ಮಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುವ ಇದಲ್ಲದೆ, ಬೇರೆ ರಾಜ್ಯಗಳಿಗೆ ಸಂಚಾರ ನಡೆಸುವ ಜನರಿಗೆ ರೈಲು ಮತ್ತೆ ಆರಂಭವಾದರೆ ಪ್ರಯೋಜನವಾಗಲಿದೆ.
ಪುನರಾರಂಭಗೊಳ್ಳುವ ರೈಲುಗಳ ಪಟ್ಟಿ ಹೀಗಿದೆ;
ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ( 07378) ರೈಲು ಡಿಸೆಂಬರ್ 1 ರಿಂದ ಮತ್ತೆ ಆರಂಭಗೊಳ್ಳಲಿದ್ದು, ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ( 07377) ಡಿಸೆಂಬರ್ 2ರಿಂದ ಶುರುವಾಗಲಿದೆ.
ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್-ಗದಗ್ ಎಕ್ಸ್‌ಪ್ರೆಸ್ (11139) ಡಿಸೆಂಬರ್ 1ರಿಂದ ಮತ್ತು ಗದಗ್-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಎಕ್ಸ್‌ಪ್ರೆಸ್ (11140) ರೈಲು ಡಿಸೆಂಬರ್ 2ರಿಂದ ಶುರುವಾಗಲಿದೆ.
ಹುಬ್ಬಳ್ಳಿ-ವಿಜಯಪುರ (06919). ವಿಜಯಪುರ-ಹುಬ್ಬಳ್ಳಿ (06920) ಪ್ಯಾಸೆಂಜರ್ ರೈಲು ಡಿಸೆಂಬರ್ 2ರಿಂದ ಮತ್ತೆ ಸಂಚಾರ ಆರಂಭಿಸಲಿದೆ.
ಹುಬ್ಬಳ್ಳಿ-ಸೋಲಾಪುರ್ ಡೈಲಿ ಪ್ಯಾಸೆಂಜರ್ (07332) ರೈಲು ಡಿಸೆಂಬರ್ 2ರಿಂದ ನಿಗದಿತ ಸಮಯಕ್ಕೆ ಸಂಚಾರ ಮಾಡಲಿದೆ. ರೈಲ್ವೇ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಸ್ಥಗಿತಗೊಂಡಿದ್ದ ರೈಲ್ವೇ ಸೇವೆಗಳು ಮತ್ತೆ ಪುನಾರಂಭಗೊಳ್ಳಲಿದ್ದು, ಪ್ರಯಾಣಿಕರಿಗೆ ಸೇವೆಗೆ ಲಭ್ಯವಾಗಲಿದೆ.