ಚಂದದ ಹುಡುಗಿಯ ಅಂದದ ಚಪ್ಪಲಿ| ಅತ್ಯಾಚಾರ ತಡೆಯೋ ಹೊಸ ಚಪ್ಪಲಿ ರೆಡಿ | ಕಾಮುಕರೇ ಹುಷಾರ್!!!

ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರದ ಸಂಖ್ಯೆ ಹೆಚ್ಚಾಗಿದೆ. ಪ್ರತಿಭಟನೆ ಹೊರತು ಇದನ್ನು ತಡೆಗಟ್ಟುವ ಯಾವುದೇ ಮಾರ್ಗ ಇದುವರೆಗೂ ಕಂಡಿಲ್ಲ. ಆದರೆ ಇದೀಗ ಕಲಬುರಗಿಯ ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರವನ್ನು ತಡೆಯುವ ಚಪ್ಪಲಿಯನ್ನು ತಯಾರಿಸಿದ್ದಾಳೆ. ಇದಂತು ಹೆಣ್ಣು ಮಕ್ಕಳ ಮೇಲೆರಗುವ ಕಾಮುಕರಿಗೆ ತಕ್ಕ ಶಾಸ್ತ್ರಿ ಮಾಡಲಿದೆ.

 

ಹೆಣ್ಣು ಮಕ್ಕಳ ಪಾಲಿಗೆ ಜೀವರಕ್ಷಕ ಆಗಿರುವ ವಿದ್ಯಾರ್ಥಿನಿ ತಯಾರಿಸಿದ ಈ ಚಪ್ಪಲಿಯ ವಿಶೇಷತೆ ಏನು ಅಂತ ನೋಡ್ಲೇಬೇಕು ಅಲ್ವಾ!! ಈ ಚಪ್ಪಲಿ ಮೇಲ್ನೋಟಕ್ಕೆ ಅಂದ, ಚೆಂದವಾಗಿ ಇದ್ರೂ ಅದರ ಅಡಿ ಭಾಗದಲ್ಲಿ ಬ್ಯಾಟರಿ, ವೈರ್​ಗಳೆಲ್ಲ ಇವೆ. ಒಂದು ಚಪ್ಪಲಿ ಎಲೆಕ್ಟ್ರಿಕ್ ಶಾಕ್ ಕೊಟ್ರೆ, ಇನ್ನೊಂದು ಚಪ್ಪಲಿ ಜಿಪಿಎಸ್ ಮೂಲಕ ನಿಮ್ಮ ಲೊಕೇಶನ್ ತೋರಿಸುತ್ತೆ. ಅಲ್ಲದೇ ಈ ಚಪ್ಪಲಿ ಸೈರನ್ ಸಹ ಮೊಳಗಿಸುತ್ತೆ. ಅಬ್ಬಾ..!! ಇಷ್ಟೆಲ್ಲಾ ವಿಶೇಷವಾಗಿದೆ ಈ ಚಪ್ಪಲಿ. ವಿದ್ಯಾರ್ಥಿನಿಯ ಸಾಧನೆಗೆ ಭೇಷ್ ಅನ್ನಲೇಬೇಕು ಹಾಗಿದೆ ಅಲ್ವಾ!

ಈ ಅದ್ಭುತ ಚಪ್ಪಲಿಯನ್ನು ಕಲಬುರಗಿ ನಗರದ ಎಸ್ ಆರ್ ಎನ್ ಮೇಹತಾ ಖಾಸಗಿ ಸ್ಕೂಲ್​ನ 10 ನೇ ತರಗತಿಯ ವಿದ್ಯಾರ್ಥಿನಿಯಾದ ವಿಜಯಲಕ್ಷ್ಮಿ ಬಿರಾದಾರ ಇವರು ತಮ್ಮ ವಿಭಿನ್ನ ಆಲೋಚನೆಯಿಂದ ತಯಾರಿಸಿದ್ದಾರೆ. ಇದರ ತಯಾರಿಗೆ ಆಕೆಯ ವಿಜ್ಞಾನ ಶಿಕ್ಷಕಿ ಸುಮಯ್ಯಾ ಅವರು ನೆರವಾಗಿದ್ದಾರೆ. ಹಾಗೂ ಈ ಅದ್ಭುತ ಚಪ್ಪಲಿಗೆ ಆ್ಯಂಟಿ ರೇಪ್ ಫೂಟ್ವೇರ್ ಅಂತಾ ಹೆಸರಿಟ್ಟಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಈ ಚಪ್ಪಲಿಯನ್ನು ಆವಿಷ್ಕಾರ ಮಾಡಲಾಗಿದೆ. ಎರಡು ಚಪ್ಪಲಿಗಳಲ್ಲೂ ಎರಡು ಬಗೆಯ ಮಹಿಳಾ ಸುರಕ್ಷತೆಯ ತಂತ್ರಜ್ಞಾನ ಅಳವಡಿಸಲಾಗಿದೆ. ಒಂದು ಫುಟ್​ವೇರ್​ನಲ್ಲಿ ವಿದ್ಯುತ್ ಶಾಕ್ ಹಾಗೂ ಇನ್ನೊಂದರಲ್ಲಿ ಜಿಪಿಎಸ್ ಅಳವಡಿಸಲಾಗಿದೆ.

ವಿಜಯಲಕ್ಷ್ಮಿ ಬಿರಾದಾರ ಇವರು ಸತತವಾಗಿ 13 ತಿಂಗಳ ಕಾಲ ಸಂಶೋಧನೆ ನಡೆಸಿ ಮಹಿಳೆಯರ ಸುರಕ್ಷತಾ ಸ್ಮಾರ್ಟ್ ಫುಟ್ ವೇರ್​ ಕಂಡುಹಿಡಿದಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಡಿಯಾ ಇಂಟರ್ನ್ಯಾಷನಲ್ ಇನ್ವೇನ್ಷನ್ ಮತ್ತು ಇನೊವೇಷನ್ ಎಕ್ಸ್ಪೋ -2022 ರಲ್ಲಿ ಈ ಮಹಿಳಾ ಸ್ಮಾರ್ಟ್ ಸೇಫ್ಟಿ ಫುಟ್ ವೇರ್ ಮಾದರಿಗೆ ಬೆಳ್ಳಿ ಪದಕ ಸಿಕ್ಕಿದೆ. ಅಷ್ಟೇ ಅಲ್ಲದೆ 2023 ರಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸೈನ್ಸ್ ಎಕ್ಸ್​ಪೋ-2023 ಕ್ಕೂ ಈ ಸೇಫ್ಟಿ ಫುಟ್ ವೇರ್ ಆಯ್ಕೆ ಆಗಿದೆ. ಇನ್ನೂ ಈ ಇನ್ನೋವೇಷನ್​ಗೆ ಎಲೆಕ್ಟ್ರಾನಿಕ್ ಸರ್ಕ್ಯೂಟ್, ಬ್ಯಾಟರಿ, ಸೆಲ್ ಬಳಕೆ ಮಾಡಲಾಗಿದ್ದು, ಚಪ್ಪಲಿ ಧರಿಸಿ ನಡೆದುಕೊಂಡು ಹೋಗುವಾಗ ಬ್ಯಾಟರಿ ಚಾರ್ಜ್ ಆಗುವಂತೆ ಕೆಮಿಕಲ್ ಎನರ್ಜಿಯಿಂದ ಎಲೆಕ್ಟ್ರಿಕಲ್ ಎನರ್ಜಿಯಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಬಳಸಲಾಗಿದೆ.

ಇದರ ಒಂದು ಚಪ್ಪಲಿಯಿಂದ ಮಹಿಳೆಯರ ಮೇಲೆರಗುವ ಹೆಣ್ಣು ಬಾಕರಿಗೆ ಕಿಕ್ ಮಾಡಿದ್ರೆ ಸಾಕು 0.5 ಆ್ಯಂಪ್ಸ್ ವಿದ್ಯುತ್ ಶಾಕ್ ಹೊಡೆಯುತ್ತದೆ. ಹಾಗೇ ಇನ್ನೊಂದು ಫುಟ್ ವೇರ್​ ನಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಬಟನ್ ಒತ್ತಿದ್ರೆ ಸಾಕು ಜಿಪಿಎಸ್ ಮೂಲಕ ಪೋಷಕರಿಗೆ ಮತ್ತು ಪೊಲೀಸರಿಗೆ ಲೊಕೇಷನ್ ಜೊತೆಗೆ ಮಾಹಿತಿ ಕೂಡ ರವಾನೆ ಆಗುತ್ತದೆ.

ಈ ಆ್ಯಂಟಿ ರೇಪ್ ಫೂಟ್ ವೇರ್ ಹೆಣ್ಣು ಮಕ್ಕಳಿಗೆ ತುಂಬಾನೇ ಉಪಯುಕ್ತವಾಗಿದೆ. ತಮ್ಮ ಪ್ರಾಣ ರಕ್ಷಣೆಗೆ ಜೊತೆಯಾಗಿರುತ್ತದೆ. ಹಾಗೂ ಮಹಿಳೆಯರು ಯಾರ ಭಯವೂ ಇಲ್ಲದೆ ತನ್ನ ಬಳಿ ಬಾಡಿಗಾರ್ಡ್ ಇದ್ದಾರೆ ಎಂದು ನಿರಾಳವಾಗಿ ಓಡಾಡಬಹುದಾಗಿದೆ. ಇಂತಹ ಅದ್ಭುತ ಚಪ್ಪಲಿಯನ್ನು ಆವಿಷ್ಕರಿಸಿದ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಿರಾದಾರ ಅವರಿಗೆ ಭೇಷ್ ಅನ್ನಲೇಬೇಕು.

Leave A Reply

Your email address will not be published.