Career Options: ಮಹಿಳೆಯರೇ ನಿಮಗಿದು ಬೆಸ್ಟ್ ಆಫ್ಶನ್ | ಮನೆಯಲ್ಲಿದ್ದುಕೊಂಡೇ ನೀವು ಕರಿಯರ್ ಆಯ್ಕೆ ಮಾಡಿ ಸಂಪಾದಿಸಿ!

“ಉದ್ಯೋಗಂ ಪುರುಷ ಲಕ್ಷಣಂ” ಎಂಬ ಹಿಂದಿನವರ ನಂಬಿಕೆಯನ್ನು ತಳ್ಳಿ ಹಾಕಿ, “ಉದ್ಯೋಗಂ ಮನುಷ್ಯ ಲಕ್ಷಣಂ” ಎಂದು ಬದಲಾಯಿಸಿ, ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಎಂಬಂತೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಆದರೆ ಇನ್ನೂ ಹಲವು ಮಹಿಳೆಯರಿಗೆ ಮನೆಯಿಂದ ಆಚೆ ಹೋಗಿ ಉದ್ಯೋಗ ಮಾಡುವುದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು. ಹಾಗಂತ ನೀವು ಮನೆಯಲ್ಲೇ ಇದ್ದೀರಾ, ಸಂಪಾದಿಸಬಾರದು ಅಂತಲ್ಲಾ. ನೀವು ದುಡಿಯಬಹುದು. ಮನೆಯಲ್ಲೇ ಇದ್ದೂ ನೀವು ಸಂಪಾದನೆ ಮಾಡ್ಬೋದು!

ಹೌದು, ಅನೇಕ ವೃತ್ತಿಗಳನ್ನು ಮಹಿಳೆಯರು ಮನೆಯಲ್ಲಿದ್ದುಕೊಂಡೇ ಮಾಡಬಹುದಾಗಿದ್ದೂ, ತಮ್ಮದೇ ಆದ ಕರಿಯರ್​ ಅನ್ನು ಹೊಂದಬಹುದು. ಹೇಗೆ ಅಂತೀರಾ? ಇಲ್ಲಿದೆ ನಿಮಗೆ ಸೂಕ್ತವಾದ ಮನೆಯಲ್ಲೇ ಕೈ ತುಂಬಾ ಹಣಗಳಿಸುವ ಕೆಲಸದ ಆಯ್ಕೆಗಳು.

ಬ್ಯೂಟಿ ಸಲೂನ್: ಬ್ಯೂಟಿ ಸಲೂನ್ ಇದೀಗ ಅತೀ ಲಾಭದಾಯಕ ಕ್ಷೇತ್ರವಾಗಿದ್ದೂ, ಮಹಿಳೆಯರಿಗೆ ಬಹಳ ಜನಪ್ರಿಯ ವ್ಯಾಪಾರವಾಗಿದೆ. ಇತ್ತೀಚಿನ ದಿನಗಳಲ್ಲಿ, ಪ್ರತಿ ಗಲ್ಲಿ ಗಲ್ಲಿಗಳಲ್ಲೂ ಬ್ಯೂಟಿ ಸಲೂನ್‌ಗಳು ತೆರೆಯುತ್ತಿವೆ. ನಿಮ್ಮ ಬ್ಯೂಟಿಷಿಯನ್ ಕೋರ್ಸ್ ಮತ್ತು ತರಬೇತಿಯನ್ನು ನೀವು ಪೂರ್ಣಗೊಳಿಸಿದರೆ, ಮನೆಯಲ್ಲೇ ಪಾರ್ಲರ್ ಅನ್ನು ತೆರೆಯಬಹುದು ಹಾಗೂ ಉತ್ತಮ ಲಾಭಗಳಿಸಬಹುದು.

ಆಹಾರ ವ್ಯಾಪಾರ: ಮಹಿಳೆಯರು ಅಡುಗೆ ವ್ಯಾಪಾರ ಮಾಡಬಹುದು. ನೀವು ಅಡುಗೆ ಮಾಡಲು ಇಷ್ಟಪಡುತ್ತಿದ್ದರೆ, ಇದು ನಿಮಗೆ ಹೇಳಿ ಮಾಡಿಸಿದ ವೃತ್ತಿ. ಇದು ತುಂಬಾ ಸುಲಭ ಮತ್ತು ಲಾಭದಾಯಕ ವ್ಯವಹಾರವಾಗಿದೆ.

ಆನ್‌ಲೈನ್ ಮತ್ತು ಆಫ್‌ಲೈನ್ ಬೋಧನೆಗಳು: ನೀವು ಓದುವುದು ಮತ್ತು ಕಲಿಸುವುದನ್ನು ಇಷ್ಟಪಡುತ್ತಿದ್ದರೆ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಮಕ್ಕಳಿಗೆ ಟ್ಯೂಷನ್​ ಮಾಡುವ ಕಲಿಸುವ ನೀವು ಉತ್ತಮ ಹಣವನ್ನು ಗಳಿಸಬಹುದು. ಇದಲ್ಲದೆ ಕರಕುಶಲ, ಸಂಗೀತ ಅಥವಾ ಇತರ ಕಲಾ ಕ್ಷೇತ್ರಗಳಿಗೆ ಸಂಬಂಧಿಸಿದ ತರಗತಿಗಳಲ್ಲಿ ನೀವು ಪ್ರವೀಣರಾಗಿದ್ದಾರೆ ಕಲಾ ತರಗತಿಯನ್ನು ಸಹ ತೆಗೆದುಕೊಳ್ಳಬಹುದು.

ಗಾರ್ಮೆಂಟ್ ಉದ್ಯಮ: ದೊಡ್ಡ ಉತ್ಪಾದನಾ ಕಂಪನಿಗಳಿಂದ ದೊಡ್ಡ ಪ್ರಮಾಣದಲ್ಲಿ ಬಟ್ಟೆಗಳನ್ನು ಖರೀದಿಸಿ ಅದನ್ನು ಸಣ್ಣ ಪಟ್ಟಣದ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಬೇಕು. ಈ ವೃತ್ತಿಯಲ್ಲಿ ಮಹಿಳಾ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯಿದೆ. ಅಲ್ಲದೇ ಟೈಲರ್ ಗಳಿಗೆ ಇದೀಗ ಅಗಾಧ ಬೇಡಿಕೆಯಿದೆ. ಬಟ್ಟೆಗಳನ್ನು ಹೊಲಿಯುವ ಮೂಲಕ ಹಣ ಸಂಪಾದಿಸಬಹುದು.
ಈ ಉದ್ಯಮವು ಇದೀಗ ಹಣ ಸಂಪಾದನೆಯಲ್ಲಿ ಮುಂಚೂಣಿಯಲ್ಲಿದೆ ಎಂದರೂ ತಪ್ಪಾಗಲಾರದು.

ಮೇಣದಬತ್ತಿ ವ್ಯಾಪಾರ: ಪ್ರಸ್ತುತ ವಿವಿಧ ರೀತಿಯ ಮೇಣದಬತ್ತಿಗಳಿಗೆ ಬೇಡಿಕೆಯಿದೆ. ಹೋಟೆಲ್ ವ್ಯಾಪಾರದಿಂದ ಸ್ಪಾ ವ್ಯಾಪಾರದವರೆಗೆ ಮೇಣದಬತ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಮಹಿಳೆಯರು ತಮ್ಮ ಮನೆಯಲ್ಲಿ ಸ್ಟುಡಿಯೋ ಮಾಡುವ ಮೂಲಕ ಮನೆಯಲ್ಲಿ ಮೇಣದಬತ್ತಿಯ ವ್ಯಾಪಾರವನ್ನು ಪ್ರಾರಂಭಿಸಬಹುದು ಮತ್ತು ಹಣ ಸಂಪಾದಿಸಬಹುದು.

YouTube ಬ್ಲಾಗಿಂಗ್: ನೀವು ಚೆನ್ನಾಗಿ ಬರೆಯುತ್ತಿದ್ದರೆ ಅಥವಾ ಮಾತಾನಾಡುವ ಕಲೆ ನಿಮ್ಮಲ್ಲಿದ್ದರೆ ಮತ್ತು ಕ್ಯಾಮರಾದಲ್ಲಿ ಚೆನ್ನಾಗಿ ಕಾಣುತ್ತಿದ್ದರೆ. ನೀವು ಖಂಡಿತ ಬ್ಲಾಗಿಂಗ್ ಅನ್ನು ಶುರು ಮಾಡಬಹುದು. ಕೆಲವು ಎಡಿಟಿಂಗ್ ಪರಿಕರಗಳನ್ನು ಕಲಿಯುವ ಮೂಲಕ ನೀವು ನಿಮ್ಮ ಬ್ಲಾಗ್ ಚಾನಲ್ ಅನ್ನು ತೆರೆಯಬಹುದು ಆರಂಭದಲ್ಲಿ ನೀವು ಈ ಕೆಲಸವನ್ನು ಉಚಿತವಾಗಿ ಮಾಡಬೇಕಾಗಿದ್ದರೂ, ಕೆಲವೇ ತಿಂಗಳುಗಳಲ್ಲಿ ನೀವು ಉತ್ತಮ ಜಾಹೀರಾತುಗಳನ್ನು ಪಡೆಯುತ್ತೀರಿ. ಆಗ ನಿಮ್ಮ ಆದಾಯವೂ ಉತ್ತಮವಾಗಿರುತ್ತದೆ. ಅಡುಗೆ, ಫ್ಯಾಷನ್, ಆರೋಗ್ಯ ಇತ್ಯಾದಿ ವಿಷಯಗಳ ಕುರಿತು ನೀವು ಬ್ಲಾಗ್ ಅನ್ನು ರಚಿಸಬಹುದು. ಇದು ಸುಲಭ ಹಾಗೂ ಆರಾಮಧಾಯಕ ವೃತ್ತಿಯಾಗಿದೆ.

ಕಂಟೆಂಟ್​ ರೈಟಿಂಗ್​: ನಿಮ್ಮ ಬರವಣಿಗೆ ಕೌಶಲ್ಯವು ಉತ್ತಮವಾಗಿದ್ದರೆ ನೀವು ಮನೆಯಿಂದಲೇ ವಿಷಯವನ್ನು ಬರೆಯಬಹುದು ಮತ್ತು ಉತ್ತಮ ಹಣವನ್ನು ಗಳಿಸಬಹುದು. ಕಂಟೆಂಟ್ ರೈಟರ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವ ಹಲವಾರು ವೆಬ್‌ಸೈಟ್‌ಗಳು ಮತ್ತು ಸುದ್ದಿ ಸಂಸ್ಥೆಗಳಿವೆ.

ಇದರಲ್ಲಿರುವ ಕೆಲವು ಉದ್ಯೋಗ ಪಟ್ಟಿಗಳು ನಿಮಗೆ ಸೂಕ್ತವಾಗಿದ್ದರೆ, ಇಂದಿನಿಂದಲೇ ನಿಮ್ಮ ಕರಿಯರ್ ಅನ್ನು ಪ್ರಾರಂಭಿಸಿ ಹಾಗೂ ಮನೆಯಲ್ಲೇ ಕುಳಿತು ಹಣ ಸಂಪಾದಿಸಿ.

Leave A Reply

Your email address will not be published.