Viral: 30 ವರ್ಷಗಳ ಹಿಂದೆ ಸಂರಕ್ಷಿಸಿದ ಭ್ರೂಣದಿಂದ ಅವಳಿ ಮಕ್ಕಳು | ಅಚ್ಚರಿಯ ಸಂಗತಿ!

ಈ ವರದಿ ಕೇಳಿದಾಗ ಅಚ್ಚರಿಯಾಗುವುದು ಪಕ್ಕಾ!!!.. ಏಕೆಂದರೆ ವಿಚಾರ ಹಾಗಿದೆ!!. ಹೌದು…ದೀರ್ಘಕಾಲದಿಂದ ಹೆಪ್ಪುಗಟ್ಟಿಸಿದ ಭ್ರೂಣಗಳಿಂದ ಅವಳಿ ಮಕ್ಕಳ ಜನನವಾಗಿದೆ.

 


ಈ ಅಚ್ಚರಿ ನಡೆದಿದ್ದು, ಯುಎಸ್‌ನ ಒರೆಗಾನ್‌ನಲ್ಲಿ ಏಪ್ರಿಲ್ 22, 1992 ರಂದು ಸುಮಾರು 30 ವರ್ಷಗಳ ಹಿಂದೆ ಸಂರಕ್ಷಿಸಿದ ಭ್ರೂಣಗಳಿಂದ ಫಿಲಿಪ್ ರಿಡ್ಜ್‌ವೇ ದಂಪತಿಗಳಿಗೆ ಅವಳಿ ಮಕ್ಕಳು ಅಕ್ಟೋಬರ್ 31 ರಂದು ಜನಿಸಿವೆ ಎಂಬ ಕುರಿತು ವರದಿಯಾಗಿದೆ.


ಹೌದು!! ಕೆಲ ವರದಿಗಳ ಪ್ರಕಾರ, ದೀರ್ಘಸಮಯದಿಂದ ಶೈತ್ಯೀಕರಿಸಿದ ಭ್ರೂಣಗಳಿಂದ ಜನಿಸಿದ ಅವಳಿ ಮಕ್ಕಳನ್ನು (Twins) ರಾಚೆಲ್ ಮತ್ತು ಫಿಲಿಪ್ ರಿಡ್ಜ್‌ವೇ ದಂಪತಿ ಪಡೆದು ನಾಮಕರಣ ಮಾಡಿದ್ದಾರೆ.

ಫಿಲಿಪ್ ದಂಪತಿ ಅವಳಿ ಮಕ್ಕಳನ್ನು ಸ್ವಾಗತಿಸಿದ ಸಂಭ್ರಮದಲ್ಲಿದ್ದು, ಅವಳಿ ಮಕ್ಕಳು ಎಳೆಯರಾಗಿದ್ದರೂ ಕೂಡ ಹಿರಿಯ ಸಂತತಿ ಎಂದು ಬಣ್ಣಿಸಿದ್ದಾರೆ. ಅವಳಿ ಮಕ್ಕಳ ಕುರಿತು ಖುಷಿ ನೀಡುವ ವಿಚಾರವೊಂದಿದ್ದು, ಲಿಡಿಯಾ ಹಾಗೂ ತಿಮೋತಿಗೆ ದೇವರು ಜೀವ ನೀಡುವ ಸಮಯದಲ್ಲಿ ನನಗೆ ಐದರ ಹರೆಯದವರಾಗಿದ್ದೆ ಎಂದು ಹೇಳಿಕೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಆ ಎರಡು ಜೀವಗಳನ್ನು ದೇವರು ತಮ್ಮ ಅದ್ಭುತದ ಮೂಲಕ ಕಾಪಾಡಿ ರಕ್ಷಿಸಿದ್ದಾರೆ ಎಂದು ಫಿಲಿಫ್ ತಿಳಿಸಿದ್ದಾರೆ.

ಅನಾಮಧೇಯ ದಂಪತಿ 2007 ರಲ್ಲಿ ಟೆನ್ನೆಸ್ಸಿಯ ನಾಕ್ಸ್‌ವಿಲ್ಲೆಯಲ್ಲಿರುವ ರಾಷ್ಟ್ರೀಯ ಭ್ರೂಣ ದಾನ ಕೇಂದ್ರಕ್ಕೆ (NEDC) ಭ್ರೂಣಗಳನ್ನು ದಾನ ಮಾಡಿದ್ದು, ವಿಸ್ಮಯ ವಿಚಾರವೇನೆಂದರೆ, ರಾಚೆಲ್ ಮತ್ತು ಫಿಲಿಪ್ ರಿಡ್ಜ್‌ವೇ ಕೇವಲ ಮೂರು ಮತ್ತು ಐದು ವರ್ಷ ವಯಸ್ಸಿನವರಾಗಿದ್ದಾಗ ಅವರ ಅವಳಿ ಮಕ್ಕಳು ಐವಿಎಫ್ ಬಳಸಿ ಗರ್ಭಧಾರಣೆ ಮಾಡಿಸಿಕೊಂಡಿದ್ದರು.

ಇಂಡಿಪೆಂಡೆಂಟ್ ವರದಿ ತಿಳಿಸಿರುವಂತೆ ಅವಳಿಗಳ ಜನ್ಮಕ್ಕೆ ಕಾರಣವಾಗಿರುವ ದೀರ್ಘ ಸಮಯದಿಂದ ಹೆಪ್ಪುಗಟ್ಟಿಸಿದ ಭ್ರೂಣದ ವರ್ಗಾವಣೆಯು ಹೊಸ ದಾಖಲೆ ಸೃಷ್ಟಿ ಮಾಡಿದೆ. ಈ ಮೊದಲು ನಾಕ್ಸ್‌ವಿಲ್ಲೆ ಮೂಲದ ಕೇಂದ್ರ ದಲ್ಲಿಯೂ ಕೂಡ ಇದೆ ರೀತಿ ದಾಖಲೆಯಾಗಿತ್ತು. 27 ವರ್ಷದ ಭ್ರೂಣದಿಂದ ಶಿಶು ಜನಿಸಿದ್ದು, 28 ವರ್ಷದ ಇನ್ನೊಂದು ಭ್ರೂಣವು ಇನ್ನೊಂದು ಮಗುವಿನ ಜನನಕ್ಕೆ ಕಾರಣವಾಗಿದೆ ಎನ್ನಲಾಗಿದೆ

ಭ್ರೂಣಗಳನ್ನು ಮೊದಲು ಶೇಖರಿಸಿದ ದಿನದಿಂದ 55 ವರ್ಷಗಳವರೆಗೆ ಫ್ರೀಜ್ ಮಾಡಬಹುದು ಎಂದು ಹ್ಯೂಮನ್ ಫರ್ಟಿಲೈಸೇಶನ್ ಅಂಡ್ ಎಂಬ್ರಿಯಾಲಜಿ ಅಥಾರಿಟಿ ಹೇಳಿಕೊಂಡಿದ್ದು, ಇದಲ್ಲದೆ, ಭ್ರೂಣಗಳನ್ನು ಹೆಪ್ಪುಗಟ್ಟಿದ ಸಮಯದ ಅವಧಿಯಿಂದ ಪ್ರಭಾವ ಬೀರುತ್ತವೆ ಎಂದು ಯಾವುದೇ ಸಾಕ್ಷಿಗಳು ಇಲ್ಲ ಎನ್ನಲಾಗಿದೆ.

ಅಷ್ಟಕ್ಕೂ ಈ ಭ್ರೂಣ ದಾನ ಅಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಹೇಳ್ತೀವಿ ಕೇಳಿ!!
ಐವಿಎಫ್ ಚಿಕಿತ್ಸೆಗೆ ಜನರು ಒಳಗಾದ ಸಂದರ್ಭ ಅವರು ಬಳಸುವುದಕ್ಕಿಂತ ಹೆಚ್ಚಿನ ಭ್ರೂಣಗಳನ್ನು ಉತ್ಪಾದಿಸಬಹುದಾಗಿದೆ. ಅಲ್ಲದೆ, ಈ ಹೆಚ್ಚುವರಿ ಭ್ರೂಣಗಳನ್ನು ಭವಿಷ್ಯದ ಬಳಕೆಗಾಗಿ ಸಂಗ್ರಹಿಸಿಡುವ ಇಲ್ಲದಿದ್ದರೆ ಸಂತಾನೋತ್ಪತ್ತಿ ಔಷಧದ ವಿಜ್ಞಾನವನ್ನು ಮುನ್ನಡೆಸಲು ಸಂಶೋಧನೆ ಅಥವಾ ತರಬೇತಿಗೆ ದಾನ ಮಾಡಬಹುದಾಗಿದೆ. ಇದಲ್ಲದೇ, ಮಕ್ಕಳನ್ನು ಹೊಂದಲು ಬಯಸುವ ಜನರಿಗೆ ದಾನ ಮಾಡಬಹುದು.

ರಾಷ್ಟ್ರೀಯ ಭ್ರೂಣ ದಾನ ಕೇಂದ್ರ ಹೇಳುವಂತೆ ಭ್ರೂಣ ದಾನ ಎಂಬುದು ಕಾನೂನುಬದ್ಧವಾದ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಲ್ಲ. ಈ ಪ್ರಕ್ರಿಯೆಯನ್ನು ಕನಿಷ್ಠ ಜನನವಾದ ಬಳಿಕ ನಡೆಯುವ ದತ್ತು ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ.

ತಜ್ಞರ ಪ್ರಕಾರ, ಹೆಪ್ಪುಗಟ್ಟಿದ ಭ್ರೂಣಗಳನ್ನು ಕರಗಿಸುವ ಸಮಯದಲ್ಲಿ ಕೂಡ ಅವುಗಳು ಬದುಕುಳಿಯುವ ಸಾಧ್ಯತೆ 80% ದಷ್ಟಿರುತ್ತದೆ ಎನ್ನಲಾಗಿದೆ. ಇದರ ಜೊತೆಗೆ ಭ್ರೂಣಗಳ ಹೆಚ್ಚಿನ ವರ್ಗಾವಣೆಯು ತಾಯಿ ಮಗುವಿಗೆ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

Leave A Reply

Your email address will not be published.