ಈ ಪವರ್ ಬ್ಯಾಂಕ್ ಬೆಲೆ ಕೇವಲ ರೂ.1000 | ಆದರೆ ಸಾಮರ್ಥ್ಯ ಅಸಾಧಾರಣ!
ಇಂದಿನ ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಫೋನ್ ಬಳಸದೇ ಇರುವವರು ವಿರಳ. ಸ್ಮಾರ್ಟ್ಫೋನ್ಗಳ ಮೇಲಿನ ಅವಲಂಬನೆಯು ಪವರ್ ಬ್ಯಾಂಕ್ಗಳ (Power Bank) ಮೌಲ್ಯವನ್ನು ಹೆಚ್ಚಿಸಿದೆ. ನಮ್ಮ ಫೋನಿನ ಬ್ಯಾಟರಿ ಖಾಲಿಯಾದರೆ ಸಾಕು ಅಂತಹ ಪರಿಸ್ಥಿತಿಯಲ್ಲಿ, ಸುತ್ತಲೂ ಚಾರ್ಜ್ ಮಾಡುವ ತಲೆನೋವು, ಚಡಪಡಿಕೆಯ ಅನುಭವವಾಗುತ್ತದೆ. ಆಗ ಕೆಲಸಕ್ಕೆ ಬರುವುದೇ ಪವರ್ ಬ್ಯಾಂಕ್.
ಬ್ಯಾಟರಿ ಚಾಲಿತ ಡಿವೈಸ್ಗಳಾದ ಸ್ಮಾರ್ಟ್ಫೋನ್ ಹಾಗೂ ಯುಎಸ್ಬಿ ಇಂಟರ್ಫೇಸ್ ಹೊಂದಿರುವ ಇತರ ರೀತಿಯ ವಸ್ತುಗಳನ್ನು ಚಾರ್ಜ್ ಮಾಡಬೇಕೆಂದರೆ ಪೋರ್ಟಬಲ್ ಪವರ್ ಒದಗಿಸುವ ಪವರ್ ಬ್ಯಾಂಕ್ ಅತ್ಯಗತ್ಯ. ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು ಇತರ ಗ್ಯಾಜೆಟ್ಗಳ ವೈಶಿಷ್ಟ್ಯಗಳು ದಿನದಿಂದ ದಿನಕ್ಕೆ ಉತ್ತಮವಾಗುತ್ತಿದ್ದರೂ, ಬ್ಯಾಟರಿ ಬಾಳಿಕೆ ಇಂದಿಗೂ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ.
ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚಿನ ಗ್ಯಾಜೆಟ್ಗಳನ್ನು ಬಳಕೆ ಮಾಡುತ್ತೇವೆ. ಅವುಗಳ ಸಂಖ್ಯೆ ಹೆಚ್ಚಾದಂತೆ, ಅವುಗಳನ್ನು ಚಾರ್ಜ್ ಮಾಡಲು ವಿದ್ಯುತ್ ಮೂಲಗಳ ಅಗತ್ಯವೂ ಹೆಚ್ಚಿರುತ್ತದೆ. ಆದರೆ, ಇದು ಸಾಧ್ಯವಾಗದಿದ್ದಾಗ ಪವರ್ಬ್ಯಾಂಕ್ ನಮಗೆ ಬೇಕಾಗುತ್ತದೆ. ಒಂದು ಪವರ್ ಬ್ಯಾಂಕ್ ಅನೇಕ ಡಿವೈಸ್ಗಳನ್ನು ಚಾರ್ಜ್ ಮಾಡುವುದರಿಂದ ವಿದ್ಯುತ್ ಸಮಸ್ಯೆಯಿಂದ ಯಾವುದೇ ತೊಂದರೆ ಆಗುವುದಿಲ್ಲ.
ಗ್ರಾಹಕರ ಅಗತ್ಯತೆಗಳನ್ನು ಪೂರೈಕೆ ಮಾಡಲು ಮಾರುಕಟ್ಟೆಯಲ್ಲಿ ಹಲವಾರು ಶೈಲಿಯ ಹಾಗೂ ಪ್ರಮುಖ ಅಗತ್ಯ ಫೀಚರ್ಸ್ ಇರುವ ಗುಣಮಟ್ಟವುಳ್ಳ ಅಮೆಜಾನ್ ಬೇಸಿಕ್ಸ್ ಪವರ್ ಬ್ಯಾಂಕ್ ಇದೀಗ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಅಮೆಜಾನ್ ಬೇಸಿಕ್ಸ್ ಪವರ್ ಬ್ಯಾಂಕ್ ಇತರೆ ಕಂಪೆನಿಯ ಪವರ್ಬ್ಯಾಂಕ್ಗಳಿಗಿಂತ ಭಿನ್ನವಾಗಿ ರೂಪುಗೊಂಡಿರುವ ಕಾರಣ ಮಾರುಕಟ್ಟೆಯಲ್ಲಿ ತನ್ನ ವಿಶೇಷ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಇದರ ವೈಶಿಷ್ಟ್ಯಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಈಗ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯ ಇರುವ ಪವರ್ ಬ್ಯಾಂಕ್ಗಳಲ್ಲಿ ಬಹುಪಾಲು ಎಲ್ಲಾ ರೀತಿಯ ಡಿವೈಸ್ಗಳನ್ನು ಒಂದೇ ಕೇಬಲ್ನಲ್ಲಿ ಚಾರ್ಜ್ ಮಾಡಲು ಆಗುವುದಿಲ್ಲ. ಆದರೆ, ಅಮೆಜಾನ್ ಬೇಸಿಕ್ನಲ್ಲಿ ಮಾತ್ರ ಬೇರೆ ಕೇಬಲ್ ಗಳ ಅಗತ್ಯತೆ ಇಲ್ಲದೆ ಒಮ್ಮೆಲೆ ನಾಲ್ಕು ಡಿವೈಸ್ಗಳನ್ನು ಚಾರ್ಜ್ ಮಾಡಬಹುದಾಗಿದ್ದು, ಪ್ರತಿ ಸಂಪರ್ಕದ ಗರಿಷ್ಠ ಚಾರ್ಜಿಂಗ್ ವೇಗವು ಸುಮಾರು 10W ಆಗಿರಲಿದೆ. ಅದರಲ್ಲೂ ಪ್ರಮುಖವಾಗಿ ಈಗಾಗಲೇ ಮೂರು ಚಾರ್ಜಿಂಗ್ ಕೇಬಲ್ಗಳನ್ನು ಈ ಪವರ್ ಬ್ಯಾಂಕ್ಗೆ ಲಗತ್ತಿಸಲಾಗಿದೆ. ಲೈಟಿಂಗ್ ಕೇಬಲ್, ಯುಎಸ್ಬಿ ಟೈಪ್ ಸಿ ಕೇಬಲ್ ಮತ್ತು ಮೈಕ್ರೋ ಯುಎಸ್ಬಿ ಕೇಬಲ್ ಇದರಲ್ಲಿದ್ದು, ನೀವು ಬೇರೆ ಕೇಬಲ್ ಅನ್ನು ಜೊತೆಗೆ ಕೊಂಡೊಯ್ಯುವ ಅಗತ್ಯ ಇಲ್ಲ.
ಚಾರ್ಜ್ ಮಾಡಲು ಎರಡು ಆಯ್ಕೆಯಿದ್ದೂ, ಯುಎಸ್ಬಿ ಟೈಪ್ ಸಿ, ಮೈಕ್ರೋ ಯುಎಸ್ಬಿ ಪೋರ್ಟ್ ಸಹ ನೀಡಲಾಗಿದ್ದು, ಈ ಎರಡೂ ಆಯ್ಕೆಗಳ ಮೂಲಕ ಪವರ್ ಬ್ಯಾಂಕ್ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಇನ್ಬಿಲ್ಟ್ ಫೋನ್ ಸ್ಟ್ಯಾಂಡ್ ಕೂಡ ಇದ್ದು, ಇದರ ಮತ್ತೊಂದು ವಿಶೇಷ.
ಇದರಲ್ಲಿ ನಾಲ್ಕು ಸೂಚಕ ಲೈಟ್ಗಳು ಇದ್ದು, ಇವು ಪವರ್ ಬ್ಯಾಂಕ್ನ ಚಾರ್ಜ್ ಮಟ್ಟವನ್ನು ಸೂಚಿಸುತ್ತವೆ. ಹಾಗೆಯೇ ಎಡಭಾಗದ ಮೇಲ್ಬಾಗದಲ್ಲಿ ಚಾರ್ಜರ್ ಆನ್ ಮತ್ತು ಆಫ್ ಮಾಡಲು ಬಟನ್ ಆಯ್ಕೆ ನೀಡಲಾಗಿದೆ. ಇದರ ಬಲಭಾಗದ ಮೇಲ್ಬಾಗದಲ್ಲಿ ಮೈಕ್ರೋ ಯುಎಸ್ಬಿ ಪೋರ್ಟ್ ಮತ್ತು ಯುಎಸ್ಬಿ ಟೈಪ್ ಸಿ ಪೋರ್ಟ್ ಆಯ್ಕೆ ನೀಡಲಾಗಿದೆ. ಇದರ ಜತೆಗೆ ಫೋನ್ ಹೋಲ್ಡರ್ ಅಯ್ಕೆಯನ್ನು ಇದರ ಹಿಂಬಾಗದಲ್ಲಿ ಇರಿಸಲಾಗಿದೆ.
ಅಮೆಜಾನ್ ಬೇಸಿಕ್ಸ್ 10,000mAH ಲಿಥಿಯಂ ಪಾಲಿಮರ್ ಪವರ್ ಬ್ಯಾಂಕ್ ಅನ್ನು ನೀವು ಕೇವಲ 1,099 ರೂ. ಗಳಲ್ಲಿ ಅಮೆಜಾನ್ನಲ್ಲಿ ಖರೀದಿ ಮಾಡಬಹುದಾಗಿದೆ. ಅದರಂತೆ ಇತರೆ ಪ್ರಮುಖ ರಿಟೇಲರ್ ಸ್ಟೋರ್ಗಳಲ್ಲಿಯೂ ಈ ಡಿವೈಸ್ ಲಭ್ಯವಿದೆ.