ಅಂಚೆ ಕಚೇರಿಯಲ್ಲಿ ಹಣ ದ್ವಿಗುಣ ಮಾಡುವ ಹೆಚ್ಚಿನ ಬಡ್ಡಿ ದೊರೆಯೋ ಯೋಜನೆಗಳಿವು !
ಕಳೆದು ಹೋದ ದಿನಗಳಿಗೆ ಚಿಂತಿಸಿ ಫಲ ಇಲ್ಲ. ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್‌ನಲ್ಲಿ ಅನೇಕ ಸ್ಕಿಮ್‌ಗಳಿವೆ. ಅಂಚೆ ಕಚೇರಿಯ ಯೋಜನಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು.
ಅಂಚೆ ಕಚೇರಿ ಯೋಜನೆಗಳಲ್ಲಿ ಸಿಗುವ ಬಡ್ಡಿಯ ಪ್ರಮಾಣವು ಜನರು ಅವುಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತದೆ. ಪೋಸ್ಟ್ ಆಫೀಸ್ ಯೋಜನೆಯಡಿಯಲ್ಲಿ ಉತ್ತಮ ಉಳಿತಾಯ ಯೋಜನೆಗಳನ್ನು ಜಾರಿ ಮಾಡಲಾಗಿದೆ .
ಉತ್ತಮ ಲಾಭ ಪಡೆಯುವ ಯೋಜನೆಗಳು :
- ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯು ಜನರು ಹೆಚ್ಚು ಇಷ್ಟಪಟ್ಟ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಹೂಡಿಕೆದಾರರು ಶೇಕಡಾ 7.6 ಬಡ್ಡಿದರವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆದಾರರ ಹಣ 9.47 ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ. 5 ವರ್ಷಗಳ ಉಳಿತಾಯ ಯೋಜನೆಯು ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಯೋಜನೆಯಾಗಿದೆ. ಈ ಯೋಜನೆಯಲ್ಲಿ ನಿರಂತರವಾಗಿ ಹೂಡಿಕೆ ಮಾಡಿದರೆ 10.59 ವರ್ಷಗಳಲ್ಲಿ ಹಣವು ದ್ವಿಗುಣಗೊಳ್ಳುತ್ತದೆ. ಇದು 6.8 ರಷ್ಟು ಲಾಭವನ್ನು ನೀಡುತ್ತದೆ.
- ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆ. 123 ತಿಂಗಳುಗಳಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಈ ಯೋಜನೆಯಡಿಯಲ್ಲಿ ಹೂಡಿಕೆದಾರರಿಗೆ ಶೇಕಡಾ 6.9 ರ ಬಡ್ಡಿದರವನ್ನು ನೀಡಲಾಗುತ್ತದೆ.
- ಹಿರಿಯ ನಾಗರಿಕ ಉಳಿತಾಯ ಯೋಜನೆಯು ನಿರ್ದಿಷ್ಟವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಹೂಡಿಕೆದಾರರಿಗಾಗಿ ರಚಿಸಲಾದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ ನಿಮ್ಮ ಹೂಡಿಕೆಯ ಮೇಲೆ ನೀವು 7.4 ಪ್ರತಿಶತದಷ್ಟು ಲಾಭವನ್ನು ಗಳಿಸಬಹುದು. ಈ ಯೋಜನೆಯಡಿ 9.73 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳಲಿದೆ.
ಇದಲ್ಲದೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಗ್ರಾಹಕರು ಪೂರ್ವನಿರ್ಧರಿತ ಮಾಸಿಕ ಮೊತ್ತವನ್ನು ಪಡೆಯಬಹುದು. ಈ ಯೋಜನೆಯೊಂದಿಗೆ ಹೂಡಿಕೆದಾರರು 6.6 ಶೇಕಡಾ ಲಾಭವನ್ನು ಪಡೆಯುತ್ತಾರೆ. ಈ ಯೋಜನೆಯಡಿ ಹಣವನ್ನು 10.91 ವರ್ಷಗಳ ನಂತರ ದ್ವಿಗುಣಗೊಳಿಸಲಾಗುತ್ತದೆ ಎಂದು ಮಾಹಿತಿ ಇದೆ.
ಈ ಮೂಲಕ ಅಂಚೆ ಕಚೇರಿಯ ಯೋಜನಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು.