Mobile Tower Theft | ಮೊಬೈಲ್ ಟವರನ್ನೇ ಕದ್ದೊಯ್ದ ಕಳ್ಳರು | ಭೂಮಿ ಮಾಲೀಕನ ಕಣ್ಣಮುಂದೆಯೇ!!! ಹೇಗಂತೀರಾ?

ಹೇಳಿ ಕೇಳಿ ಇದು ಡಿಜಿಟಲ್ ಯುಗ!!! ಎಲ್ಲದರಲ್ಲೂ ಕೂಡ ಅಪ್ಡೇಟ್ ಮಾಡಿದರೆ ಸಾಕಾ ನಾವು ಕೂಡ ಅಪ್ಡೇಟ್ ಆಗಿದ್ದೇವೆ ಎಂಬುದನ್ನು ರುಜುವಾತು ಮಾಡಿದ್ದಾರೆ ನೋಡಿ ಲೇಟೆಸ್ಟ್ ಮಾಡರ್ನ್ ಕಳ್ಳರು!!

 

ಹೌದು!! ಮನೆಯವರ ಮುಂದೆ ಚಿನ್ನ ಬೆಳ್ಳಿ ರೀತಿಯ ಅಮೂಲ್ಯ ವಸ್ತುಗಳ ಜೊತೆಗೆ ಜೂಟ್ ಹೇಳೋ ಕಾಲ ಹೋಯ್ತು!! ಈಗ ಏನಿದ್ರೂ ಲೇಟೆಸ್ಟ್ ಸ್ಟೈಲ್, ಕದ್ದ ಮಾಲಿಗೂ ಕದ್ದವರಿಗೂ ಒಂದು ವ್ಯಾಲ್ಯೂ ಬೇಕಲ್ವಾ!!! ಹಾಗಾಗಿ, ವಿಭಿನ್ನವಾಗಿ ಹೊಸ ಪ್ರಯತ್ನದ ಮೂಲಕ ಹೆಸರು ಪಡೆದಿದ್ದಾರೆ ಈ ಕಳ್ಳರು!!.

ಮೊಬೈಲ್ ಟವರ್ ಇರುವ ಭೂಮಿಯ ಮಾಲೀಕನ ಎದುರೇ ಕಳ್ಳರು ಟವರ್ ಕೆಡವಿ ಲಾರಿ ಮೇಲೆ ಹಾಕಿಕೊಂಡು ಒಯ್ದು ಪರಾರಿಯಾಗಿದ್ದಾರೆ.ಕಳ್ಳರು ಇಡೀ ಮೊಬೈಲ್ ಟವರ್​ಅನ್ನೇ ಕದ್ದು ಟ್ರಕ್​ಗೆ ತುಂಬಿ ಪರಾರಿಯಾದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು ಪಾಟ್ನಾದ ಗರ್ದ್ನಿಬಾಗ್ ಪೊಲೀಸ್ ಠಾಣೆಯ ಯಾರ್ಪುರ್ ರಜಪೂತಾನ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಟವರ್ ಕೆಡವುತಿದ್ದ ವ್ಯಕ್ತಿಗಳನ್ನು ಗಮನಿಸಿ, ಟವರ್ ಇದ್ದ ಜಮೀನಿನ ಮಾಲೀಕ ಟವರ್ ಕೆಡವು ತ್ತಿದ್ದುದ್ದನ್ನು ಪ್ರಶ್ನಿಸಿದಾಗ ಕಳ್ಳರು ತಾವು ಟವರ್ ಕಂಪನಿಯ ಉದ್ಯೋಗಿಗಳು ಎಂದು ಹೇಳಿದ್ದು ಮಾತ್ರವಲ್ಲ ಸ್ವಾಮಿ!!ಮೊಬೈಲ್ ಟವರ್ ಇರುವ ಭೂಮಿಯ ಮಾಲೀಕನ ಎದುರೇ ಜಬರ್ ದಸ್ತಾಗಿ ಟವರ್ ಕೆಡವಿ ಲಾರಿ ಮೇಲೆ ಹಾಕಿಕೊಂಡು ಹೊತ್ತೊಯ್ದಿದ್ದಾರೆ ಮಹಾಶಯರು!!

ಟವರ್ ಅನ್ನು ಕೆಡವಲು ಸುಮಾರು 25 ಕಳ್ಳರು ಉಪಕರಣಗಳು ಮತ್ತು ಗ್ಯಾಸ್ ಕಟರ್​ಗಳೊಂದಿಗೆ ಶಸ್ತ್ರಸಜ್ಜಿತವಾದ ಯೋಜನೆ ಯೊಂದಿಗೆ ಸ್ಥಳಕ್ಕೆ ಬಂದಿರುವ ಕಳ್ಳರ ಕುರಿತು ಗಾರ್ಡ್ನಿಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ವೇಳೆ ಬಿಹಾರದದಲ್ಲಿ ರೈಲ್ವೇ ಇಂಜಿನ್ ಬಿಡಿಭಾಗಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಏಳು ಜನರನ್ನು ಬಂಧಿಸಿದ್ದು, ಕದ್ದ ವಸ್ತುಗಳ ಪೈಕಿ 95% ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಏನೇ ಹೇಳಿ ಕಳ್ಳರು ಕೂಡ ಅಪ್ಡೇಟ್ ಆಗಿ ಜನರನ್ನು ಲೀಲಾ ಜಾಲವಾಗಿ ಮರಳು ಮಾಡಿ ಕಣ್ಣೆದುರೇ ಕೊಳ್ಳೆ ಹೊಡೆಯುವುದರಲ್ಲಿ ಸೈ ಎನಿಸಿಕೊಂಡ ಘಟನೆ ನಡೆದಿದ್ದು, ಈ ಪ್ರಕರಣದ ಕುರಿತಾಗಿ ಖಾಕಿ ಪಡೆ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.