BSF Recruitment 2022: ಹೆಡ್​ ಕಾನ್ಸ್​​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ| ಮಾಸಿಕ ವೇತನ ₹ 81,000

BSF Recruitment 2022: ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 254 ಹೆಡ್​ ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಹಾಕಬೇಕು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 03/01/2023

ಹುದ್ದೆಯ ಕುರಿತಾದ ಮಾಹಿತಿ ಇಲ್ಲಿದೆ:
ಸಂಸ್ಥೆ : ಗಡಿ ಭದ್ರತಾ ಪಡೆ
ಹುದ್ದೆ : ಹೆಡ್​ ಕಾನ್ಸ್​​ಟೇಬಲ್
ಒಟ್ಟು ಹುದ್ದೆ : 254
ವೇತನ ಮಾಸಿಕ : ₹ 25,500-81,100
ಉದ್ಯೋಗದ ಸ್ಥಳ : ಭಾರತದಲ್ಲಿ ಎಲ್ಲಿ ಬೇಕಾದರೂ

ಎಷ್ಟೆಷ್ಟು ಹುದ್ದೆಗಳಿವೆ?
ಹೆಡ್​ ಕಾನ್ಸ್​​ಟೇಬಲ್(ವೆಹಿಕಲ್ ಮೆಕ್ಯಾನಿಕ್)- 100
ಹೆಡ್​ ಕಾನ್ಸ್​​ಟೇಬಲ್ (ಆಟೋ ಎಲೆಕ್ಟ್ರಿಷಿಯನ್)- 12
ಹೆಡ್​ ಕಾನ್ಸ್​​ಟೇಬಲ್ (ಬ್ಲಾಕ್​ ಸ್ಮಿತ್/ ಟಿನ್ ಸ್ಮಿತ್)- 16
ಹೆಡ್​ ಕಾನ್ಸ್​​ಟೇಬಲ್ (ಪೇಂಟರ್)- 19
ಹೆಡ್​ ಕಾನ್ಸ್​​ಟೇಬಲ್ (ಅಪ್​ಹೋಲ್​ಸ್ಟರ್)- 18
ಹೆಡ್​ ಕಾನ್ಸ್​​ಟೇಬಲ್(ಟರ್ನರ್)- 15
ಹೆಡ್​ ಕಾನ್ಸ್​​ಟೇಬಲ್ (ಫಿಟ್ಟರ್)- 18
ಹೆಡ್​ ಕಾನ್ಸ್​​ಟೇಬಲ್ (ಆಪರೇಟರ್ ಟೈಯರ್ ರಿಪೇರಿ ಪ್ಲಾಂಟ್)- 19
ಹೆಡ್​ ಕಾನ್ಸ್​​ಟೇಬಲ್ (ಕಾರ್ಪೆಂಟರ್)- 6
ಹೆಡ್​ ಕಾನ್ಸ್​​ಟೇಬಲ್ (ಸ್ಟೋರ್ ಕೀಪರ್)- 20
ಹೆಡ್​ ಕಾನ್ಸ್​​ಟೇಬಲ್ (ವೆಲ್ಡರ್)-11

ವಿದ್ಯಾರ್ಹತೆ : ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಡಿಪ್ಲೋಮಾ, ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಜನವರಿ 3, 2023ಕ್ಕೆ ಗರಿಷ್ಠ 52 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ,ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ? ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ : ಡೆಪ್ಯುಟಿ ಇನ್ಸ್​​ಪೆಕ್ಟರ್ ಜನರಲ್ (Tpt),
ಡೈರೆಕ್ಟೋರೇಟ್ ಜನರಲ್
BSF, ಬ್ಲಾಕ್ ನಂ.10
ಸಿಜಿಒ ಕಾಂಪ್ಲೆಕ್ಸ್​​
ಲೋಧಿ ರಸ್ತೆ
ನವಹದೆಲಿ- 110003

Leave A Reply

Your email address will not be published.