ಕೇಳಿ ಜನರೇ…ಒಬ್ಬಳು ಸುಂದರಿ ಇದ್ದಳು…ಖತರ್ನಾಕ್ ಗ್ಯಾಂಗ್ನ ಲೀಡರ್ ಈ ಚೆಲುವೆ | ಈಕೆಯ ಹಿಸ್ಟರಿ ಕೇಳಿದರೆ ಬೆಚ್ಚಿಬೀಳ್ತೀರ | ಅಷ್ಟಕ್ಕೂ ಈಕೆ ಜನರನ್ನು ಹೇಗೆ ಯಮಾರಿಸ್ತಿದ್ಳು ಗೊತ್ತಾ?
ನೀವು ಮನೆ ಬಾಡಿಗೆ ಕೊಡ್ತೀರಾ!! ಹಾಗಿದ್ರೆ ಈ ಸ್ಟೋರಿ ನೀವು ಓದಲೇ ಬೇಕು!!.. ಮನೆ ಬಾಡಿಗೆ ಪಡೆಯೋ ನೆಪದಲ್ಲಿ ನಿಮಗೆ ಚಳ್ಳೆ ಹಣ್ಣು ತಿನ್ನಿಸಿ ಯಾಮಾರಿಸಿ ಝಣ ಝಣ ಕಾಂಚಾಣ ಜೇಬಿಗೆ ಇಳಿಸಿ, ಪರಾರಿಯಾಗುವ ಖತರ್ನಾಕ್ ಗ್ಯಾಂಗ್ ಗಳಿವೆ!!
ಹಾಗಾಗಿ, ಬಾಡಿಗೆಗೆ ಮನೆ ಕೊಡೋಕು ಮುನ್ನ ನಿಮ್ಮ ಎಚ್ಚರದಲ್ಲಿದ್ದರೆ ಒಳಿತು.. ಮನೆ ಬಾಡಿಗೆ ಪಡೆಯುವ
ನೆಪ ಹೇಳಿ , ಸುಂದರ ಯುವತಿಯನ್ನು ಮುಂದೆ ಬಿಟ್ಟು ಪ್ಲಾನ್ ಮಾಡಿ, ಮನೆ ಮಾಲೀಕರನ್ನು ತಮ್ಮ ಮರಳು ಮಾತಿನಲ್ಲೇ ಯಾಮಾರಿಸಿ ಬ್ಯೂಟಿಫುಲ್ ಯಂಗ್ ಲೇಡಿ ಎಲ್ಲವನ್ನೂ ದೋಚುತ್ತಿದ್ದಳು ಎನ್ನಲಾಗಿದೆ.
ಮಳ್ಳಿ ಮಳ್ಳಿ ಮಿಂಚುಳ್ಳಿ..ಎಂಬಂತೆ.. ಸುಜಾತಾ ಅಲಿಯಾಸ್ ನಿಹಾರಿಕಾ ಎಂಬ ಯುವತಿ ಪ್ರಕರಣದ ಕಿಂಗ್ಪಿನ್ ಆಗಿದ್ದು, ಆಂಧ್ರದಲ್ಲಿ ಬರೋಬ್ಬರಿ 25 ಪ್ರಕರಣಗಳು ದಾಖಲಾಗಿವೆ.
ಆ ಬಳಿಕ ಅಲ್ಲಿಂದ ಕಾಲ್ಕಿತ್ತು, ಕರ್ನಾಟಕಕ್ಕೆ ಎಂಟ್ರಿ ಕೊಟ್ಟ ಈ ಗ್ಯಾಂಗ್, ತಮ್ಮನ್ನು ಬ್ಯಾಂಕ್ ಸಿಬ್ಬಂದಿ, ಆಫೀಸರ್ ಅಂತ ಅಂತೆ ಕಂತೆಗಳ ಸಾಲುಗಳ ಸುರಿಮಳೆ ಗೈದು ಶ್ರೀಮಂತರ ಮನೆಗಳನ್ನೇ ಬಾಡಿಗೆಗೆ ಪಡೆಯುತ್ತಿದ್ದರು ಎನ್ನಲಾಗಿದೆ. ಮನೆಗೆ ಕಾಲಿಟ್ಟ ಬಳಿಕ ಸುಂದರಿ ಸುಜಾತಾ ಮೊದಲಿಗೆ, ಮನೆ ಮಾಲೀಕರ ಬಳಿ ಸಲುಗೆಯಿಂದ ಮಾತನಾಡುತ್ತಾ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಆ ಬಳಿಕ ಆಪ್ತವಾಗಿ ಮಾತಾಡಿ ಎಲ್ಲ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಳು ಎನ್ನಲಾಗಿದೆ.
ಸುಜಾತಾ ಕೊಟ್ಟ ಮಾಹಿತಿಯಂತೆ ಮನೆಗಳನ್ನ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಎಂ ಎಸ್ ಸ್ಸಿ ಪದವಿ ಪಡೆದ ಇಬ್ಬರು ಕೂಡ ಈ ಗ್ಯಾಂಗ್ ನಲ್ಲಿದ್ದಾರೆ . ರಾಯಚೂರು ಜಿಲ್ಲೆಯಲ್ಲಿ ರಸ್ತೆ ಸಮೀಪದಲ್ಲೇ ಇರುವ ಶ್ರೀಮಂತರ ಮನೆಗಳನ್ನು ಟಾರ್ಗೆಟ್ ಮಾಡಿ ನಾಲ್ಕು ಕಡೆ ಕೋಟ್ಯಂತರ ಹಣ, ಚಿನ್ನಾಭರಣ ದೋಚಿದ್ದಾರೆ. ರಾತ್ರಿ ವೇಳೆ ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿ, ಮನೆ ಮಂದಿಯ ಕೈ-ಕಾಲು ಕಟ್ಟಿ ಹಾಕಿ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ.
ಈ ಗ್ಯಾಂಗ್ನ ಕೃತ್ಯ ರಾಯಚೂರು ಜಿಲ್ಲೆಯ ಪೊಲೀಸರಿಗೆ ಮಾಹಿತಿ ದೊರೆತಿದೆ. ಜೈಲಿಗೆ ಹೋಗಿ ಬಂದರು ಕೂಡ ಕಿಂಚಿತ್ತು ಬದಲಾಗದ ಆಕೆಯ ಗ್ಯಾಂಗ್ ಕರ್ನಾಟಕದ ಪೋಲೀಸರ ಕೈಯಲ್ಲಿ ಕೂಡ ಸಿಕ್ಕಿ ಬಿದ್ದು,ರಾಯಚೂರು ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ. …
ಸ್ಥಳೀಯ ಮಹಿಳೆಯರನ್ನು ಪರಿಚಯ ಮಾಡಿಕೊಂಡು ವೇಶ್ಯಾವಟಿಕೆ ಜೊತೆಗೆ ಕಳ್ಳದಂಧೆಗೆ ಅನುಕೂಲ ಮಾಡಿಕೊಳ್ಳುವ ಸಲುವಾಗಿ, ಸಿಂಧನೂರು, ಮಾನ್ವಿ ಹಾಗೂ ರಾಯಚೂರು ಸೇರಿ ಮೂರು ಕಡೆ ಮನೆ ಬಾಡಿಗೆ ಪಡೆದಿದ್ದಳು. ದೊಡ್ಡ ದೊಡ್ಡ ಮನೆಯ ಗಂಡಸರನ್ನು ಟಾರ್ಗೆಟ್ ಮಾಡಿ ಅಮಾಯಕ ಮಹಿಳೆಯರನ್ನು ಮುಂದೆ ಬಿಟ್ಟು ತನ್ನ ಟಾರ್ಗೆಟ್ ಮುಗಿಸಿ ಕೊಳ್ಳುತ್ತಿದ್ದಳು.
ಒಂದು ತಿಂಗಳ ಕಾರ್ಯಾಚರಣೆ ಬಳಿಕ ನಾಲ್ವರಿದ್ದ ಕಳ್ಳರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರ ಮೂಲದ ರಾಮಕೃಷ್ಣ, ಕುಮಾರ, ಅರ್ದಾನಿ ಲಕ್ಷ್ಮಣ ಹಾಗೂ ಸುಜಾತಾ ಬಂಧಿತರಾಗಿದ್ದು, 520 ಗ್ರಾಂ ಬಂಗಾರ, 1.25 ಲಕ್ಷ ಹಣ, ನಿಸ್ಸಾನ್ ಮೈಕ್ರಾ ಹಾಗೂ ಟಾಟಾ ಇಂಡಿಕಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.