ರೈತರೇ ಗಮನಿಸಿ | ಎಲೆಚುಕ್ಕಿ ರೋಗ ಬಾಧಿತ ಅಡಿಕೆ ಬೆಳೆ ಕುರಿತು ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ!

Share the Article

ಅಡಿಕೆ ಬೆಳೆಯಲ್ಲಿ ಮಾರಕವಾಗಿ ಹಬ್ಬಿರುವ ಎಲೆ ಚುಕ್ಕಿ ರೋಗವು ರೈತರಿಗೆ ದೊಡ್ಡ ತಲೆನೊವಾಗಿ ಪರಿಣಮಿಸಿದೆ. ಸರ್ಕಾರವು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತರಲು ಮುಂದಾಗಿದೆ. ಎಲೆಚುಕ್ಕಿ ರೋಗದಿಂದ ತತ್ತರಿಸಿ ಹೋಗಿರುವ ಅಡಿಕೆ ತೋಟಗಳ ಬೆಳೆಗಾರರಿಗೆ ತಕ್ಷಣದ ನೆರವು ನೀಡಲು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಲಾಭ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಮಾತನಾಡಿದ ಅವರು, ಈ ಬಾರಿ ಕಂಡು ಬಂದ ಅತಿಯಾದ ಮಳೆಯೇ ಈ ರೋಗಕ್ಕೆ ಕಾರಣವಾಗಿದ್ದೂ, ರೋಗದ ವಿರುದ್ಧ ಹೋರಾಟ ಮಾಡಬೇಕಾದ ಅಡಕೆ ಮರಗಳಲ್ಲಿ ಪೌಷ್ಠಿಕಾಂಶದ ಕೊರತೆಯಿದೆ, ಹಾಗಾಗಿ ತೋಟಗಳ ಆಂತರಿಕ ನಿರ್ವಹಣೆ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ. ತಜ್ಞರಿಂದ ಸಂಪೂರ್ಣ ವರದಿ ಬಂದ ಬಳಿಕವೇ ಔಷಧ ನೀಡಿಕೆ ಅಥವಾ ಪರಿಹಾರ ನೀಡಿಕೆಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

ತೀರ್ಥಹಳ್ಳಿ ತಾಲೂಕಿನಲ್ಲಿ ರೋಗಪೀಡಿತ ಅಡಕೆ ತೋಟ ಪರಿಶೀಲಿಸಿದ್ದೂ, ಸುಮಾರು 42 ಸಾವಿರ ಹೆಕ್ಟೇರ್ ತೋಟದಲ್ಲಿ ಈ ರೋಗವು ಹಬ್ಬಿದೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಹಾಗೂ ಕೇಂದ್ರ ಸರ್ಕಾರದ ವಿಜ್ಞಾನಿಗಳ ತಂಡ ಬಂದು ಪರಿಶೀಲನೆ ನಡೆಸಿ ಸಮಗ್ರ ವರದಿ ಬಂದ ನಂತರ ಪರಿಹಾರ ಕಾರ್ಯಕ್ಕೆ ಸರ್ಕಾರ ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದ್ದಾರೆ.

ರೋಗ ನಿರ್ವಹಣೆಗೆ ಔಷಧಿ ಕೊಳ್ಳಲು ಈಗಾಗಲೇ 10 ಕೋಟಿ ರೂ. ಖರ್ಚು ಮಾಡಿದ್ದೂ ತಜ್ಞರು ವರದಿ ನೀಡಿದ ನಂತರ, ಸೂಕ್ತ ಸಲಹೆ ಪಡೆದು ಅದು ಎಷ್ಟೇ ಕೋಟಿ ಆದರೂ ವ್ಯಯಿಸಲು ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.

Leave A Reply