ಉದ್ಯಮವನ್ನು ಬೆಳೆಸಲು ಸಹಕಾರಿಯಾಗಿರುವ ತಂತ್ರಗಳು ಇವು
ಗ್ರಾಹಕರು ನೀವು ಮಾಡುವ ಉದ್ಯಮದ ಕಡೆಗೆ ಆಸಕ್ತರಾಗಬೇಕು ಹಾಗೂ ನಿಮ್ಮಲ್ಲಿ ನಿಮ್ಮ ಉದ್ಯಮದ ಮೇಲೆ ವಿಶ್ವಾಸವಿರಿಸಬೇಕು ಎಂದಾದಲ್ಲಿ ನೀವು ಮಾಡುವ ಕೆಲಸದ ಸಂಪೂರ್ಣ ಮಾಹಿತಿಯನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಬಣ್ಣಿಸಬೇಕಾಗುತ್ತದೆ. ಇದುವೇ ಉದ್ಯಮದ ಕೀಲಿಕೈಯಾಗಿದೆ ಎಂದೇ ವ್ಯವಹಾರ ತಂತ್ರಜ್ಞರು ತಿಳಿಸುತ್ತಾರೆ. ಯಾವುದೇ ಗ್ರಾಹಕ ನಿಮ್ಮೊಂದಿಗೆ ಕೆಲಸ ಮಾಡಬೇಕು ಎಂದಾದಲ್ಲಿ ಅವರನ್ನು ಮೆಚ್ಚಿಸುವುದು ಮುಖ್ಯವಾಗಿರುತ್ತದೆ. ಹಾಗಿದ್ದರೆ ಅವರನ್ನು ಮೆಚ್ಚಿಸುವುದಕ್ಕೆ ಮುಖ್ಯವಾಗಿರುವ ಅಂಶಗಳಾವುದು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಉದ್ಯಮದಲ್ಲಿ ಗ್ರಾಹಕರನ್ನು ನಾಯಕನಾಗಿ ಬಿಂಬಿಸುವುದು
ಜೋಸೆಫ್ ಕ್ಯಾಂಪ್ಬೆಲ್ ತಮ್ಮ ಪುಸ್ತಕ ದ ಹೀರೋ ವಿದ್ ಥೌಸಂಡ್ ಫೇಸಸ್ನಲ್ಲಿ ಒಬ್ಬ ನಾಯಕನ ಪ್ರಯಾಣವನ್ನು ಚೆನ್ನಾಗಿ ವಿವರಿಸಿದ್ದಾರೆ. ಮನೆಯಲ್ಲಿರುವ ಒಬ್ಬ ವ್ಯಕ್ತಿಗೆ ಸಾಹಸ ಮಾಡಲು ಪ್ರೇರೇಪಣೆ ದೊರೆಯುತ್ತದೆ. ಆತ ಮನೆಯಿಂದ ಹೊರಟು ಸವಾಲುಗಳನ್ನು ಪರಿಹರಿಸಿ ಹಾಯಾಗಿ ಮನೆಗೆ ಬರುತ್ತಾನೆ. ಹೀಗೆ ಪ್ರತಿಯೊಂದು ಕಥೆಯಲ್ಲೂ ಒಬ್ಬ ನಾಯಕನ ಅಗತ್ಯವಿದೆ.
ಆದರೆ ಉದ್ಯಮದಾರ ಕೆಲವೊಮ್ಮೆ ತಾನು ಹಾಗೂ ತನ್ನ ಸಂಸ್ಥೆ ನಾಯಕ ಎಂದು ಭ್ರಮಿತನಾಗುತ್ತಾನೆ. ಇದರಿಂದಾಗಿಯೇ ಅವರಿಗೆ ಉದ್ದೇಶಿತ ಯಶಸ್ಸು ದೊರೆಯುವುದಿಲ್ಲ. ಬದಲಿಗೆ ಗ್ರಾಹಕನನ್ನು ನಾಯಕನಾಗಿ ಕಂಡು ತನ್ನನ್ನು ಒಬ್ಬ ಮಾರ್ಗದರ್ಶಕ ಎಂದು ಉದ್ದಿಮೆದಾರ ಕಂಡುಕೊಂಡಲ್ಲಿ ಗ್ರಾಹಕ ಹಾಗೂ ಉದ್ದಿಮೆದಾರನ ನಡುವೆ ಒಂದು ವಿಶ್ವಾಸ ಏರ್ಪಡುತ್ತದೆ ಹಾಗೂ ತಮ್ಮ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗದರ್ಶಕ ತಮ್ಮೊಂದಿಗಿದ್ದಾರೆ ಎಂಬ ನಂಬಿಕೆ ಗ್ರಾಹಕರ ಮನದಲ್ಲಿ ಮೂಡುತ್ತದೆ.
ಉದ್ಯಮದಲ್ಲಿ ಎದುರಿಸಿರುವ ಸವಾಲು
ಯಾವುದೇ ಸವಾಲುಗಳಿದ್ದರೂ ಒಬ್ಬ ಉದ್ಯಮಿಯಾಗಿ ಸವಾಲುಗಳನ್ನು ಪರಿಹರಿಸಬಲ್ಲಿರಿ ಎಂಬುದನ್ನು ಗ್ರಾಹಕರಿಗೆ ಮನದಟ್ಟು ಮಾಡಿಸಿ. ನೀವು ಎಷ್ಟು ತ್ವರಿತವಾಗಿ ಸವಾಲುಗಳನ್ನು ಪರಿಹರಿಸಿದ್ದೀರಿ ಎಂಬುದನ್ನು ತಿಳಿಸಿ. ಇದರಿಂದ ಅವರಿಗೆ ನಿಮ್ಮ ಮೇಲೆ ನಂಬಿಕೆ ಬರುತ್ತದೆ.
ನೀವು ಕಲಿತ ಒಂದು ಪಾಠ
ನಿಮ್ಮ ಉದ್ಯಮದ ಕಥೆಯಲ್ಲಿ ಪಾಠವನ್ನು ಅಳವಡಿಸುವುದು ಎಂದರೆ ನಿಮ್ಮ ಹಿಂದಿನ ಸವಾಲುಗಳು ಹಾಗೂ ನೀವು ಅದನ್ನು ಹೇಗೆ ಎದುರಿಸಿದ್ದೀರಿ ಮತ್ತು ನೀವು ಅದರಿಂದ ಕಲಿತುಕೊಂಡಿರುವ ಪಾಠಗಳೇನು ಎಂಬುದನ್ನು ಗ್ರಾಹಕರಿಗೆ ತಿಳಿಸುವುದು. ಇದರಿಂದ ಗ್ರಾಹಕರಿಗೆ ನಿಮ್ಮ ಮೇಲಿರುವ ವಿಶ್ವಾಸ ಹೆಚ್ಚುತ್ತದೆ.
ಕಥೆ ಹೇಳುವುದು ನಿಮ್ಮ ವ್ಯವಹಾರವನ್ನು ಉನ್ನತೀಕರಿಸಲು ಸಹಾಯ ಮಾಡುವ ಪ್ರಕ್ರಿಯೆಯಾಗಿದೆ. ಉದ್ಯಮದಲ್ಲಿ ನಂಬಿಕೆ ಹಾಗೂ ವಿಶ್ವಾಸ ತುಂಬಾ ಮುಖ್ಯವಾದುದು. ಈ ಎರಡೂ ಅಂಶಗಳು ನಿಮ್ಮ ಉದ್ಯಮದ ವಿವರಣೆಯ ಮೇಲೆ ಕೇಂದ್ರೀಕೃತವಾಗಿದೆ. ಗ್ರಾಹಕರನ್ನು ಒಬ್ಬ ನಾಯಕನಂತೆ ಬಿಂಬಿಸುವುದು ಅವರು ನಿಮ್ಮ ಮೇಲಿರಿಸಿರುವ ವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ನಿಮ್ಮನ್ನು ಒಬ್ಬ ಮಾರ್ಗದರ್ಶಕರಂತೆ ಅವರು ಕಂಡುಕೊಳ್ಳುತ್ತಾರೆ.
ಗ್ರಾಹಕರಿಗೆ ಉದ್ಯಮದಲ್ಲಿರುವ ಸವಾಲುಗಳನ್ನು ವಿವರಿಸುವುದು ಹಾಗೂ ಸವಾಲುಗಳನ್ನು ನೀವು ಹೇಗೆ ಪರಿಹರಿಸಿಕೊಂಡಿರುವಿರಿ ಎಂಬುದನ್ನು ವಿವರಿಸುವುದು ಜೊತೆಗೆ ಇದರಿಂದ ಕಲಿತಿರುವ ಪಾಠಗಳೇನು ಎಂಬುದನ್ನು ನಿಮ್ಮ ಕಥೆ ಹೇಳುವ ಕಲೆಯಲ್ಲಿ ಸೇರಿಸಿಕೊಳ್ಳಿ. ಇದರಿಂದ ಗ್ರಾಹಕರು ನಿಮ್ಮ ಮೇಲಿಟ್ಟಿರುವ ಭರವಸೆ ಹೆಚ್ಚುವರಿಯಾಗುತ್ತದೆ